ಬೋರನಕಣಿವೆ ನೀರು ಹರಿಸಲು ರೈತರ ಪಟ್ಟು

Farmers demand release of water from Borana Valley
Farmers demand release of water from Borana Valley
Published on
ಹೊಯ್ಸಳಕಟ್ಟೆ: ಚಿಕ್ಕನಾಯಕನಹಳ್ಳಿ ತಾಲೂಕಿನಬೋರನಕಣಿವೆ ಅಚ್ಚುಕಟ್ಟು ಪ್ರದೇಶದ ರೈತರು ಬೋರನಕಣಿವೆ ಜಲಾಶಯದ ಬಳಿ ಗುರುವಾರ ಎರಡನೇ ಭಾರಿ ಸಭೆ ಸೇರಿ ಅಚ್ಚುಕಟ್ಟು ಪ್ರದೇಶಕ್ಕೆ ಕಾಲುವೆ ಹಾಗೂ ಹಳ್ಳಗಳ ಮೂಲಕ ನೀರು ಹರಿಸಲು ಕ್ರಮವಹಿಸಬೇಕೆಂದು ರೈತರು ಒತ್ತಾಯಿಸಿದರು.
ಜಲಾಶಯದಲ್ಲಿ 16 ಅಡಿಗಿಂತ ಮೇಲ್ಪಟ್ಟು ನೀರು ಶೇಖರಣೆ ಇದ್ದರೆ ಆ ನೀರನ್ನು ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಬೆಳೆ ಬೆಳೆಯಲು ಹರಿಸಬೇಕೆಂಬ ನಿಯಮವಿದ್ದರೂ ಅಧಿಕಾರಿಗಳ ರ್ನಿಲಕ್ಷ್ಯದಿಂದ ನೀರು ಹರಿಸಿಲ್ಲ ಎಂದು ರೈತರು ಆಕ್ರೋಶವ್ಯಕ್ತಪಡಿಸಿದರು.
ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್​ ಜಲಾಶಯಕ್ಕೆ ಭೇಟಿ ನೀಡಿದಾಗ ಜಲಾಶಯದಲ್ಲಿ 19 ಅಡಿ ನೀರು ಇದೆ. ಈಗಿರುವ ನೀರಿನಲ್ಲಿ 3 ಅಡಿ ನೀರನ್ನು ಮಾತ್ರ ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಿ ಎಂದು ರೈತರು ಇಂಜಿನಿಯರ್​ಗೆ ಮನವಿ ಮಾಡಲಾಗಿದೆ ಎಂದರು.
28ಕ್ಕೆ ಸಭೆ: ಏ.28 ರಂದು ತಾಲೂಕು ಕಚೇರಿಯಲ್ಲಿ ಶಾಸಕ ಸಿ.ಬಿ.ಸುರೇಶ್​ ಬಾಬು, ಉಪವಿಭಾಗಾಧಿಕಾರಿ ಹಾಗೂ ಅಚ್ಚುಕಟ್ಟು ಪ್ರದೇಶದ ರೈತರ ನಿಯೋಗದೊಂದಿಗೆ ಸಭೆ ನಡೆಸಲಾಗುವುದು ಎಂದರು.
ಬೋರನಕಣಿವೆ ಅಚ್ಚುಕಟ್ಟು ಪ್ರದೇಶದ ಬೋರನಕಣಿವೆ, ಹೊಯ್ಸಳಕಟ್ಟೆ, ಹೊನ್ನಯ್ಯನಪಾಳ್ಯ, ಜಡೆಯಪ್ಪನಪಾಳ್ಯ, ಮುತ್ತುಗದಹಳ್ಳಿ, ಬೆಳ್ಳಾರ, ಅಂಬಾರಪುರ, ರಾಮನಗರ, ಮರಾಠಿಪಾಳ್ಯ, ದಬ್ಬಗುಂಟೆ ರೈತರು ಸಭೆಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net