ಸೋಮವಾರಪೇಟೆ ತಾಲೂಕಿನ ಗೋಣಿಮರೂರು-ಯರಪಾರೆ ಗ್ರಾಮದ ಗಣೇಶ್ ಎಂಬವರು ಕೃಷಿ ಮಾಡಿದ ಜೋಳವನ್ನು ಕಾಡಾನೆಗಳು ಹಾನಿಪಡಿಸಿರುವುದು.
Published on:
Copied
Follow Us
ಸೋಮವಾರಪೇಟೆ: ತಾಲೂಕಿನ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದಾರೆ. ಗಣಗೂರು, ಯರಪಾರೆ, ಬಾಣಾವಾರ, ಗೋಣಿ ಮರೂರು ಗ್ರಾಮಗಳ ಕೃಷಿ ಭೂಮಿಗೆ ಪ್ರತಿನಿತ್ಯ ಕಾಡಾನೆಗಳು ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗೋಣಿಮರೂರು-ಯರಪಾರೆ ಗ್ರಾಮದ ಗಣೇಶ್‌ಎಂಬುವರ ಜೋಳದ ಫಸಲನ್ನು ಇತ್ತೀಚೆಗೆ ಕಾಡಾನೆಗಳು ನಾಶಪಡಿಸಿವೆ. ರಮೇಶ್ ಎಂಬುವರ ತೆಂಗಿನ ಗಿಡಗಳನ್ನು ಮುರಿದು ತಿಂದಿವೆ.
ಕಾಡಾನೆ ಹಾವಳಿಯಿಂದ ಕೃಷಿ ಫಸಲನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮಗೆ ಯಾವುದೇ ಪರಿಹಾರ ಬೇಡ. ಒಂದೆರಡು ಸಾವಿರ ಪರಿಹಾರದಿಂದ ಕುಟುಂಬ ಸಾಕಲು ಸಾಧ್ಯವಿಲ್ಲ. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಯರಪಾರೆಯಲ್ಲಿ ಒಂದೆರಡು ಕಿ.ಮೀನಷ್ಟು ಸೋಲಾರ್ ತಂತಿಬೇಲಿ ಅಳವಡಿಸಿಕೊಡಬೇಕು ಎಂದು ರೈತರಾದ ರೇವಣ್ಣ, ಹರೀಶ್ ಆಗ್ರಹಿಸಿದ್ದಾರೆ. ಕಾಡಾನೆ ಕಂದಕಗಳನ್ನು ದುರಸ್ತಿ ಪಡಿಸಬೇಕು. ಸೋಲಾರ್ ತಂತಿಬೇಲಿಯ ನಿರ್ವಹಣೆ ಮಾಡಬೇಕು. ಸಿಬ್ಬಂದಿ ಪಟಾಕಿ ಸಿಡಿಸಿ ತೆರಳಿದರೆ, ಕಾಡಾನೆ ಹಾವಳಿ ನಿಯಂತ್ರಣ ಅಸಾಧ್ಯದ ಮಾತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.