ಏಪ್ರಿಲ್ 24ಕ್ಕೆ ರೈತ ಉತ್ಪಾದಕ ಸಂಸ್ಥೆಗಳು (FPO) ಮತ್ತು ನವೋದ್ಯಮಗಳ ಸಮಾವೇಶ-2026

,
,
Published on
ಕಲಬುರಗಿ: ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರವು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಕೃಷಿ ಇಲಾಖೆ, ನಬಾರ್ಡ್ ಹಾಗೂ ಕೆ-ಟೆಕ್ ಸಹಯೋಗದೊಂದಿಗೆ ಇದೇ ಏಪ್ರಿಲ್ 24 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಜೆಸ್ಟ್ ಕ್ಲಬ್ ನಲ್ಲಿ ರೈತ ಉತ್ಪಾದಕ ಸಂಸ್ಥೆಗಳು (FPOಗಳು) ಮತ್ತು ನವೋದ್ಯಮಗಳ ಸಮಾವೇಶ - 2026 ಕಾರ್ಯಕ್ರಮ ಆಯೋಜಿಸಲಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ಪ್ರಾದೇಶಿಕ ಉಪಕ್ರಮ ಭಾಗವಾಗಿ ಇದೇ ಮೊದಲ ಬಾರಿಗೆ ರೈತ ಉತ್ಪಾದಕ ಸಂಸ್ಥೆಗಳು (FPOಗಳು) ಮತ್ತು ನವೋದ್ಯಮಿಗಳ ನಡುವಿನ ಅನುಭಾವತ್ಮಕ ಕಾರ್ಯಕ್ರಮ ಇದಾಗಿದ್ದು, ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ವಿವಿಧ‌ ವಿಷಯಗಳ ಮೇಲೆ ತಜ್ಞರು ಮಾತನಾಡಲಿದ್ದಾರೆ. ಕೃಷಿ ಉತ್ಪನ್ನ ಖರೀದಿಗಿರುವ ಅವಕಾಶ, ಮಾರುಕಟ್ಟೆ ವಿಸ್ತರಣೆ, ನೆಡ್ ವರ್ಕ್ ಲಿಂಕೇಜ್ ಚೈನ್, ಇಂಡಸ್ಟ್ರಿಗಳೊಂದಿಗೆ ಸಂವಾದ ನಡೆಯಲಿದೆ. ಇದಲ್ಲದೆ ಬೆಸ್ಟ್ ಎಫ್.ಪಿ.ಓ ಗಳಿಗೆ ಸ್ಟಾರ್ಟ್ ಅಪ್ ಅವಾರ್ಡ್ ಸಹ ನೀಡಲಾಗುತ್ತಿದೆ.
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ‌ ಸಚಿವ ಈಶ್ವರ ಖಂಡ್ರೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ‌ ಎಸ್.ಎಸ್. ಮಲ್ಲಿಕಾರ್ಜುನ, ಬೆಂಗಳೂರು ಬಯೋ ಇನ್ನೊವೇಷನ್ಸ್ ಸೆಂಟರ್ ಉಪಾಧ್ಯಕ್ಷ (ಕಾರ್ಯಚರಣೆ) ಸಂತೋಷ ಎಸ್., ವ್ಯವಸ್ಥಾಪಕ ನಿರ್ದೇಶಕ ಡಾ.ಮೊಹಮ್ಮದ ಆದಿಲ್ ಎ.ಎ., ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net