ಕೇಬಲ್​ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ ರೈತ

Farmer hands over cable thief to police
Farmer hands over cable thief to police
Published on
ಚಿಂತಾಮಣಿ: ತಾಲೂಕಿನ ದಿಗವಗೊಲ್ಲಪಲ್ಲಿ ಗ್ರಾಮದ ದೇವರಾಜರೆಡ್ಡಿ ಎಂಬುವರ ಕೊಳವೆಬಾವಿಯ ಕೇಬಲ್​ ಕಳವು ಮಾಡಿದ್ದವನನ್ನು ಹಿಡಿದ ಜಮೀನು ಮಾಲೀಕ ಭಾನುವಾರ ಕೆಂಚಾರ್ಲಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮಂಚಿನೀಳಕೋಟದ ನಿವಾಸಿ ಕೃಷ್ಣ (36) ಆರೋಪಿ.
ಕೊಳವೆಬಾವಿ ಕೇಬಲ್​ ಕಳವು ಮಾಡಿದ್ದ ಈತ, ಚಿಂತಾಮಣಿ-&ಚೇಳೂರು ಮುಖ್ಯರಸ್ತೆಯಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿದ್ದ. ಈ ವೇಳೆ ದೇವರಾಜರೆಡ್ಡಿ ಅವರನ್ನು ನೋಡಿ ಓಡಿ ಹೋಗಲು ಯತ್ನಿಸಿದ್ದಾನೆ. ತಕ್ಷಣ ಆತನನ್ನು ಹಿಡಿದು, ಚೀಲ ನೋಡಿದಾಗ ಕೇಬಲ್​ಗಳು ಕಂಡು ಬಂದಿವೆ. ಕೆಂಚಾರ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net