ಹರಪನಹಳ್ಳಿ: ಹೊಳಲು ರಸ್ತೆಯ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕ ಶವವಾಗಿ ಶುಕ್ರವಾರ ಪತ್ತೆಯಾಗಿದ್ದಾನೆ. ಅಂಬೇಡ್ಕ್ಕರ್ ನಗರದ ಯಡಿಹಳ್ಳಿ ಶ್ರೀಕಾಂತ್ (21) ಮೃತ. ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಬಾಟಲ್, ಚೀಲ, ಖಾಲಿ ಬಾಟಲ್ ಆಯ್ದು ಜೀವನ ಸಾಗಿಸುತ್ತಿದ್ದ ಶ್ರೀಕಾಂತ್, ಮಾನಸಿಕ ಆಸ್ವಸ್ಥತೆಯಿಂದ ಬಳಲುತ್ತಿದ್ದರು.