ಶಾಸಕರಿಂದ ಸದನಕ್ಕೆ ಸುಳ್ಳು ಮಾಹಿತಿ False information

ಶಾಸಕರಿಂದ ಸದನಕ್ಕೆ ಸುಳ್ಳು ಮಾಹಿತಿ False information
ಶಾಸಕರಿಂದ ಸದನಕ್ಕೆ ಸುಳ್ಳು ಮಾಹಿತಿ False information
Published on

ಪ್ರಮುಖ ಮುಖ್ಯಾಂಶಗಳು

  • ರೈತ ಮುಖಂಡ ಸುರೇಶ್​ ಆರೋಪ
  • ಯದರೂರು ಕೈಗಾರಿಕಾ ವಲಯಕ್ಕೆ ಖಂಡನೆ
ಶ್ರೀನಿವಾಸಪುರ: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಯದರೂರು ಕೈಗಾರಿಕಾ ವಲಯಕ್ಕೆ ರೈತರ ವಿರೋಧವಿಲ್ಲ ಎಂದು ಸುಳ್ಳು ಮಾಹಿತಿ ನೀಡಿ ಸದನವನ್ನು ತಪ್ಪು ದಾರಿಗೆ ಎಳೆದಿದ್ದಾರೆ ಎಂದು ರೈತ ಮುಖಂಡ ಸುರೇಶ್​ ಆರೋಪಿಸಿದರು. False information
ತಾಲೂಕಿನ ಯದರೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕಾ ವಲಯದ ಒಟ್ಟು 350 ಅರ್ಜಿಗಳ ಪೈಕಿ ಕೈಗೆ 285 ಅರ್ಜಿಗಳ ರೈತರು ಕೈಗಾರಿಕಾ ವಲಯಕ್ಕೆ ವಿರುದ್ಧವಾಗಿ ಎಐಡಿಬಿಗೆ ಅರ್ಜಿ ಕೊಟ್ಟಿದ್ದಾರೆ. ಶಾಸಕರು ಇದನ್ನು ಮರೆಮಾಚಿ ರೈತರ ಒಪ್ಪಿಗೆ ಇದೆ ಎಂದು ಹೇಳುವುದು ಹಾಸ್ಯಾಸ್ಪದ. ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಕೈಗಾರಿಕಾ ವಲಯ ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಚೌಡಪ್ಪ ಮಾತನಾಡಿ, ರೈತರ ಒಪ್ಪಿಗೆ ಪಡೆಯದೆ ರೈತರಿಗೆ ಮಾಹಿತಿ ನೀಡದೆ ಕೈಗಾರಿಕಾ ವಲಯ ನಿರ್ಮಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಾದ ಶಂಕರಪ್ಪ, ಚನ್ನಕೃಷ್ಣಪ್ಪ, ಯಲ್ಲಪ್ಪ ಗೋವಿಂದಪ್ಪ, ಜಗದೀಶ್​, ಶಂಕರ, ಬಾಲಗುಪ್ಪ, ಶಂಕರ, ಅ್ಜಲ್​ ಅನಂತ ಪದ್ಮನಾಭಾಚಾರಿ, ರಾಜೇಶ್​, ವೆಂಕಟೇಶಪ್ಪ, ರಾಮಪ್ಪ, ಭರತ್​, ರಾಹುಲ್​, ಲಕ್ಷಿ$್ಮನಾರಾಯಣ, ಹೊಸಕೋಟೆ ಅಶ್ವತ್ಥ್​, ಮರಗಲ್​ ಹರೀಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net