ಪ್ರಕೃತಿಯ ಆರಾಧನೆಗೆ ಒಳಗಾಗಿ

Fall into the worship of nature
Fall into the worship of nature
Published on
ಬುಕ್ಕಾಪಟ್ಟಣ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸು ವಿಕಸಿತ ಭಾರತ ಕೈಗೂಡಲು ಪ್ರತಿ ಹಳ್ಳಿಯ ಪ್ರತಿಯೊಬ್ಬರು ಪ್ರಕೃತಿಯ ಆರಾಧನೆಗೆ ಒಳಗಾಗಬೇಕು ಎಂದು ಬುಕ್ಕಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್​ಎಸ್​ಎಸ್​ಎನ್​ ಕಾರ್ಯಕ್ರಮ ಯೋಜನಾಧಿಕಾರಿ ವಿಜಯ್​ ತಿಳಿಸಿದರು.
ಹೋಬಳಿಯ ಸರ್ಕಾರಿ ಕಾಲೇಜಿನ ಆವರಣದಲ್ಲಿ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ವಿಶ್ವ ಸಂಸ್ಥೆಯು ಇಂದು ರಿಪಬ್ಲಿಕ್​ ಆಫ್​ ಅಜರ್ಬೈಜಾನ್​ ದೇಶದಲ್ಲಿ ಸಾಂಕೇತಿಕವಾಗಿ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರವನ್ನು ಹಾಗೂ ಶುದ್ಧ ಗಾಳಿ ಬೆಳಕು ನೀರನ್ನು ನೀಡಬೇಕಾದಲ್ಲಿ ಇಂದಿನ ಪೀಳಿಗೆ ಪರಿಸರವನ್ನು ಉಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಹಿರಿಯ ಪ್ರಾಧ್ಯಾಪಕ ಡಾ. ಹನುಮಂತರಾಯ, ಸಹಾಯಕ ಪ್ರಾಧ್ಯಾಪಕ ಡಾ.ಖಲಿದಾ ಖಾನಂ, ಶಾರ್ವರಿ, ಮಹೇಶ್​, ಶ್ರೀನಿವಾಸ್​, ನರೇಂದ್ರಬಾಬು, ಲೋಕೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net