6.71 ಲಕ್ಷ ಮೌಲ್ಯದ ನಕಲಿ ಸಿಗರೇಟ್​ ವಶ Fake cigarettes

6.71 ಲಕ್ಷ ಮೌಲ್ಯದ ನಕಲಿ ಸಿಗರೇಟ್​ ವಶ Fake cigarettes
6.71 ಲಕ್ಷ ಮೌಲ್ಯದ ನಕಲಿ ಸಿಗರೇಟ್​ ವಶ Fake cigarettes
Published on

ಪ್ರಮುಖ ಮುಖ್ಯಾಂಶಗಳು

  • ಚಿಂತಾಮಣಿಯಲ್ಲಿ ಮೂವರ ಬಂಧನ
ಚಿಂತಾಮಣಿ: ನಗರದ ಚೇಳೂರು ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ತಂದಿದ್ದ 6,71,484 ರೂ. ಮೌಲ್ಯದ ಐಟಿಸಿ ನಕಲಿ ಕಂಪನಿ ಸಿಗರೇಟ್​ ಪ್ಯಾಕೆಟ್​ ವಶಕ್ಕೆ ಪಡೆದು, ಮೂವರು ಆರೋಪಿಗಳನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. Fake cigarettes
ಮಂಡ್ಯ ಜಿಲ್ಲೆಯ ನಂಬಿನಾಯಕನಹಳ್ಳಿಯ ದರ್ಶನ್​ (26), ಕೆ.ಆರ್​.ಪೇಟೆ ತಾಲೂಕಿನ ನಾಟನಹಳ್ಳಿಯ ಕಾರ್ತಿಕ್​ (26) ಮತ್ತು ತಮಿಳುನಾಡು ನಾಮಕಲ್​ ಜಿಲ್ಲೆಯ ದೇವನ ಕುರ್ಚಿಯ ಮುಪ್ಪಟ್ಟಮ್​ ಪಾಳ್ಯದ ಗೋಪಾಲ್​ (38) ಬಂಧಿತರು.
ಖಚಿತ ಮಾಹಿತಿ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿ ಕುಶಲ್​ ಚೌಕ್ಸೆ ಮಾರ್ಗದರ್ಶನದಲ್ಲಿ ಚಿಂತಾಮಣಿ ಉಪ ವಿಭಾಗದ ಡಿವೈಎಸ್​ಪಿ ಮುರಳೀಧರ್​ ಮುಂದಾಳತ್ವದಲ್ಲಿ ಚಿಂತಾಮಣಿ ನಗರ ಪೊಲೀಸ್​ ಠಾಣೆ ಪೊಲೀಸ್​ ಇನ್​ಸ್ಪೆಕ್ಟರ್​ ವಿಜಿಕುಮಾರ್​, ಪಿಎಸ್​ಐ ರಮೇಶ್​ ಸಿಬ್ಬಂದಿ ಮಂಜುನಾಥ, ಮುನಿರಾಜ, ಶ್ರೀನಿವಾಸ, ಲೋಕೇಶ್​, ಗಿರೀಶ್​, ಅನೀಲ್​ ಕುಮಾರ್​, ಸುರೇಶ್​ ತಂಡವು ದಾಳಿ ನಡೆಸಿದೆ. ಕೃತ್ಯಕ್ಕೆ ಉಪಯೋಗಿಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net