ನೇತ್ರ ಸಂರಕ್ಷಣೆ ನಿರ್ಲಕ್ಷೃ ಸಲ್ಲ

ಸಿಂದಗಿ ನಗರದ ಸಾರಂಗಮಠದಲ್ಲಿ ನಡೆದ ನೇತ್ರ ಉಚಿತ ತಪಾಸಣೆ ಮತ್ತು ಶಸ ಚಿಕಿತ್ಸಾ ಶಿಬಿರಕ್ಕೆ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಚಾಲನೆ ನೀಡಿದರು. ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಅಶೋಕ ವಾರದ, ದತ್ತ ಹೊಸಮಠ, ಡಾ. ವಿನೀತಾ ಇತರರಿದ್ದರು.
ಸಿಂದಗಿ ನಗರದ ಸಾರಂಗಮಠದಲ್ಲಿ ನಡೆದ ನೇತ್ರ ಉಚಿತ ತಪಾಸಣೆ ಮತ್ತು ಶಸ ಚಿಕಿತ್ಸಾ ಶಿಬಿರಕ್ಕೆ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಚಾಲನೆ ನೀಡಿದರು. ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಅಶೋಕ ವಾರದ, ದತ್ತ ಹೊಸಮಠ, ಡಾ. ವಿನೀತಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಅನಿಸಿಕೆ
  • ಕಣ್ಣು ಉಚಿತ ತಪಾಸಣೆ, ಶಸ ಚಿಕಿತ್ಸಾ ಶಿಬಿರ
ಸಿಂದಗಿ: ಮಾನವನ ದೇಹದ ಪ್ರಮುಖ ಅಂಗ ಕಣ್ಣು. ಪ್ರತಿಯೊಬ್ಬರೂ ತಮ್ಮ ಬದುಕಿನುದ್ದಕ್ಕೂ ಕಣ್ಣನ್ನು ರಕ್ಷಣೆ ಮಾಡಿಕೊಳ್ಳಲು ಬದ್ಧರಾಗಿರಬೇಕು ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ನಗರದ ಸಾರಂಗಮಠದಲ್ಲಿ ಶುಕ್ರವಾರ ಶ್ರೀ ಚನ್ನವೀರ ಸ್ವಾಮೀಜಿಗಳ 35ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ ಹಾಗೂ ಲಿಂ. ಎನ್. ಚನ್ನಯ್ಯಸ್ವಾಮಿ ಹಾಗೂ ಲಿಂ. ಶಾರದಾದೇವಿ ಜನ ಕಲ್ಯಾಣ ೌಂಡೇಶನ್ ಮತ್ತು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 124ಕ್ಕೂ ಜನರು ಉಚಿತ ನೇತ್ರ ತಪಾಸಣೆ ಪಡೆದುಕೊಂಡಿದ್ದು, ಸುಮಾರು 78ಕ್ಕೂ ಜನರು ಶಸ ಚಿಕಿತ್ಸೆ ಪಡೆದುಕೊಂಡರು.
ಶ್ರೀ ಮಠದ ಉತ್ತರಾಧಿಕಾರಿ ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಅನುಗ್ರಹ ಆಸ್ಪತ್ರೆ ಆಡಳಿತಾಧಿಕಾರಿ ದತ್ತ ಹೊಸಮಠ, ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ನಿರ್ದೇಶಕ
ಅಶೋಕ ವಾರದ, ವೈದ್ಯ ಮಹಾಂತೇಶ ಹಿರೇಮಠ, ಅನುಗ್ರಹ ಕಣ್ಣಿನ ಆಸ್ಪತ್ರೆ ವೈದ್ಯೆ ಡಾ. ವಿನೀತಾ, ಡಾ. ಜವೀನ್, ಪ್ರಾಧ್ಯಾಪಕ ಡಾ. ನಾಗರಾಜ ಮುರಗೋಡ, ವಿ.ಆರ್. ಪಾಟೀಲ, ಶ್ರೀದೇವಿ ಸಿಂದಗಿ, ಭೀಮಾಶಂಕರ ಅರಳಗುಂಡಗಿ, ರಮಾಕಾಂತ ಬಗಾಡೆ, ವಿದ್ಯಾರ್ಥಿಗಳು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net