

ದೇವನಹಳ್ಳಿ: ನಗರದ ಕೊರಚರಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೇತ್ರ ಮತ್ತು ಶ್ರವಣತಪಾಸಣಾ ಶಿಬಿರವನ್ನು ಲಯನ್ಸ್ ಜಿಲ್ಲಾ ಪ್ರಾಂತಪಾಲ ಜಿ.ಎಲ್.ಪ್ರಸನ್ನ ಕುಮಾರ್ ಉದ್ಘಾಟಿಸಿದರು.
ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಶಿಬಿರದಲ್ಲಿ ಒಟ್ಟು 345 ವಿದ್ಯಾರ್ಥಿಗಳಿಗೆ ನೇತ್ರ ಪರೀೆ ಮಾಡಲಾಗಿದ್ದು, ಇವರಲ್ಲಿ ಕಣ್ಣಿನ ತೊಂದರೆ ಇದ್ದ 22 ವಿದ್ಯಾರ್ಥಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ. 158 ವಿದ್ಯಾರ್ಥಿಗಳಿಗೆ ಶ್ರವಣ ಪರೀಕ್ಷೆ ಮಾಡಲಾಯಿತು ಎಂದರು.
ಲಯನ್ಸ್ ಸಂಸ್ಥೆಯ ಸಿ.ಕೆ.ರಮೇಶ್, ಮಾಜಿ ಶಾಸಕ ಜಿ.ಚಂದ್ರಣ್ಣ, ಸಂಸ್ಥೆ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ಡಿ.ಸುಹಾಸ್, ಎಸ್.ಸತೀಶ್ ಕುಮಾರ್, ಎಸ್.ಶಂಕರ್, ಮಾಜಿ ಅಧ್ಯಕ್ಷ ಶ್ರೀರಾಮಯ್ಯ, ಜಿ.ಕೆ.ನಾರಾಯಣಸ್ವಾಮಿ, ವೈ.ಸಿ.ಕೃಪಾಕರ್, ಕೆ.ಎಸ್.ರಮೇಶ್ಬಾಬು, ಪಿ.ಗಂಗಾಧರ್, ಖಜಾಂಚಿ ವಿಜಯಕುಮಾರ್, ಜಂಟಿ ಕಾರ್ಯದರ್ಶಿ ಎನ್.ಜಯಪ್ರಕಾಶ್, ಸದಸ್ಯರಾದ ಜಿ.ಮಂಜುನಾಥ್, ಎಂ.ನಾರಾಯಣಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷೆ ಮಹಾಲಕ್ಷಿ$್ಮ ಮತ್ತು ವೈದ್ಯಕಿಯ ಸಿಬ್ಬಂದಿ ಇದ್ದರು.