ಮೇ 30ರಿಂದ ಮನೆ ಮನೆಗೆ ಬಿಎಲ್‌ಒಗಳು ಭೇಟಿ ಕೊಟ್ಟು ಖುದ್ದು ಮತದಾರರಿಗೆ ನೋಟಿಸ್ ಕೊಟ್ಟು ಮಾಹಿತಿ ಕಲೆ ಹಾಕಬೇಕೆಂಬುದು ನಿಯಮವಿದೆ. ಆದರೆ, ಮತದಾರ ಕೆಲಸಕ್ಕೆ, ಪ್ರವಾಸಕ್ಕೆ ಸೇರಿದಂತೆ ಇನ್ನಿತ್ತರ ಕೆಲಸದ ಮೇರೆಗೆ ಬೇರೆಡೆಗೆ ಹೋದಾಗ ಬಿಎಲ್‌ಒಗಳು ಲಾಕ್ ಡೌನ್ ಎಂದು ವಾಪಸ್ ಬಂದರೆ ಅಥವಾ ಅರ್ಜಿ ಕೊಡಲಾಗಿದೆ ಎಂದು ಮಾಹಿತಿ ಅಪ್‌ಡೇಟ್ ಮಾಡಿದರೇ ಮತದಾರರ ಹಕ್ಕು ಕಳೆದುಕೊಳ್ಳುತ್ತಾರೆ. ಆದರಿಂದ ಮನೆ ಮನೆ ಭೇಟಿ ಕೊಟ್ಟಾಗ ಆ್ಯಪ್‌ನಲ್ಲಿ ಲೈವ್‌ಪೋಟ್, ಜಿಪಿಎಸ್ ಆಧಾರಿತ ಮಾಹಿತಿ ಅಪ್‌ಡೇಟ್ ಮಾಡಲು ಸೂಚನೆ ಕೊಡಬೇಕೆಂದು ಬಿಜೆಪಿಯ ಬಿಜೆಪಿಯ ಎಸ್. ದತ್ತಾತ್ರೀ, ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.