ಹೊಸಕೋಟೆಗೆ ವೇಗದೂತ ಬಸ್​ / NANDAGUDI

ಹೊಸಕೋಟೆ ತಾಲೂಕು ಲ್ಮಪುರ ಗೇಟ್​ ಬಳಿ ಹೊಸಕೋಟೆ&ಎಚ್​.ಕ್ರಾಸ್​ ಮಾರ್ಗಕ್ಕೆ 10 ಬಿಎಂಟಿಸಿ ವೇಗದೂತ ಬಸ್​ ಸೇವೆಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಶಾಸಕರಾದ ಹೊಸಕೋಟೆಯ ಶರತ್​ ಬಚ್ಚೇಗೌಡ, ಶಿಡ್ಲಟ್ಟದ ಬಿ.ಎನ್​. ರವಿಕುಮಾರ್​, ಬೆಂ.ಮ.ಸಾ.ಸಂಸ್ಥೆ ಅಧ್ಯಕ್ಷ ವಿ.ಎಸ್​.ಆರಾಧ್ಯ, ಉಪಾಧ್ಯಕ್ಷ ಎಂ.ನಿಕೇತ್​ರಾಜ್​, ವ್ಯವಸ್ಥಾಪಕ ನಿರ್ದೇಶಕ ಕೆ.ಬಿ. ಶಿವಕುಮಾರ್​, ಮುಖ್ಯಸಂಚಾರ ವ್ಯವಸ್ಥಾಪಕ ಜೆ.ಟಿ. ಪ್ರಭಾಕರರೆಡ್ಡಿ ಇತರರಿದ್ದರು.
ಹೊಸಕೋಟೆ ತಾಲೂಕು ಲ್ಮಪುರ ಗೇಟ್​ ಬಳಿ ಹೊಸಕೋಟೆ&ಎಚ್​.ಕ್ರಾಸ್​ ಮಾರ್ಗಕ್ಕೆ 10 ಬಿಎಂಟಿಸಿ ವೇಗದೂತ ಬಸ್​ ಸೇವೆಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಶಾಸಕರಾದ ಹೊಸಕೋಟೆಯ ಶರತ್​ ಬಚ್ಚೇಗೌಡ, ಶಿಡ್ಲಟ್ಟದ ಬಿ.ಎನ್​. ರವಿಕುಮಾರ್​, ಬೆಂ.ಮ.ಸಾ.ಸಂಸ್ಥೆ ಅಧ್ಯಕ್ಷ ವಿ.ಎಸ್​.ಆರಾಧ್ಯ, ಉಪಾಧ್ಯಕ್ಷ ಎಂ.ನಿಕೇತ್​ರಾಜ್​, ವ್ಯವಸ್ಥಾಪಕ ನಿರ್ದೇಶಕ ಕೆ.ಬಿ. ಶಿವಕುಮಾರ್​, ಮುಖ್ಯಸಂಚಾರ ವ್ಯವಸ್ಥಾಪಕ ಜೆ.ಟಿ. ಪ್ರಭಾಕರರೆಡ್ಡಿ ಇತರರಿದ್ದರು.
Published on
ನಂದಗುಡಿ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಾರ್ವಜನಿಕರಿಗೆ ಮತ್ತಷ್ಟು ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸಕೋಟೆ ಭಾಗದಲ್ಲಿ "ಹೊಸ ವೇಗದೂತ' ಬಸ್​ ಸೇವೆ ಆರಂಭಿಸುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಹೊಸಕೋಟೆ ತಾಲೂಕು ಲ್ಮಪುರ ಗೇಟ್​ ಬಳಿ ಹೊಸಕೋಟೆ&ಎಚ್​.ಕ್ರಾಸ್​ ಮಾರ್ಗಕ್ಕೆ 10 ಬಿಎಂಟಿಸಿ ವೇಗದೂತ ಬಸ್​ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ ಬಿಎಂಟಿಸಿ 50 ಟಕಗಳಿಂದ ಪ್ರತಿದಿನ 6,275 ಅನುಸೂಚಿಗಳ ಮೂಲಕ 65,945 ಸುತ್ತುವಳಿ ನಡೆಸುತ್ತಿದ್ದು, ಸುಮಾರು 45 ಲಕ್ಷ ಪ್ರಯಾಣಿಕರು ಸೇವೆ ಪಡೆಯುತ್ತಿದ್ದಾರೆ. ಇದರಲ್ಲಿ 1,742 ಎಲೆಕ್ಟಿ$ಕ್​ ಬಸ್​ಗಳೂ ಕಾರ್ಯಾಚರಣೆಯಲ್ಲಿವೆ ಎಂದರು.
ಬೆಂಗಳೂರು ಸುತ್ತಮುತ್ತಲಿನ ಅತ್ತಿಬೆಲೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಸೇರಿ ಹಲವು ಪಟ್ಟಣಗಳಿಗೆ 124 ವೇಗದೂತ ಸೇವೆಗಳು ಸಂಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್​.ಕ್ರಾಸ್​ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಮಾರ್ಗಗಳನ್ನು ಪರಿಚಯಿಸಲಾಗಿದೆ. ಹೊಸ ಸೇವೆಯಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ವೇಗವಾದ ಮತ್ತು ನೇರ ಸಾರಿಗೆ ಸೌಲಭ್ಯ ದೊರೆಯಲಿದ್ದು, ಬೆಂಗಳೂರಿನ ಸಂಚಾರ ಸಿಕ್ಕು ತಪ್ಪಿಸಿ ಸುಲಭ ಸಂಚಾರಕ್ಕೆ ನೆರವಾಗಲಿದೆ ಎಂದು ವಿವರಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಗೋಪಾಲ್​, ರಾಜ್ಯ ಒಕ್ಕಲಿಗರ ಸಂದ ನಿರ್ದೇಶಕ ಬಿ.ವಿ. ರಾಜಶೇಖರಗೌಡ, ಮಾಜಿ ನಿರ್ದೇಶಕ ಬಿ.ಎನ್​.ಗೋಪಾಲಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಟಿ.ಎಸ್​.ರಾಜಶೇಖರ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸಗೀರ್​ ಅಹಮದ್​, ಟಿಎಪಿಸಿಎಂಎಸ್​ ಅಧ್ಯಕ್ಷ ಸುರೇಶ್​, ಉದ್ಯಮಿ ಎಂ. ಮಂದೀಪ್​ಗೌಡ, ಎಸ್​ಎಫ್​ಸಿಎಸ್​ ಅಧ್ಯಕ್ಷ ಸಿ.ಎಂ. ನಾರಾಯಣಸ್ವಾಮಿ, ನಿರ್ದೇಶಕರಾದ ಎಚ್​.ಎನ್​. ಧಮೇರ್ಶ್​, ಸಿಎನ್​ ದಿನೇಶ್​, ತಾಪಂ ಮಾಜಿ ಸದಸ್ಯರಾದ ಬೀರಪ್ಪ, ಚಾಂದ್​ಪಾಷ, ಪಿಡಿಒ ಎ.ಮುನಿರಾಜು, ಗ್ರಾಪಂ ಮಾಜಿ ಅಧ್ಯಕ್ಷ ಸೊಣ್ಣೆಗೌಡ ಇದ್ದರು.
ಟಿಕೆಟ್​ ದರ ಎಲ್ಲಿಗೆ, ಎಷ್ಟು ? : ಇಎಕ್ಸ್​&317ಎಚ್​ಸಿ ಮಾರ್ಗದಲ್ಲಿ ಟಿನ್​ ಫ್ಯಾಕ್ಟರಿಯಿಂದ ಎಚ್​.ಕ್ರಾಸ್​ವರೆಗೆ 7 ಬಸ್​ಗಳು 60 ಟ್ರಿಪ್​ಗಳಂತೆ ಪ್ರತಿ 30 ನಿಮಿಷಕ್ಕೊಮ್ಮೆ ಸಂಚರಿಸಲಿವೆ. ಈ ಮಾರ್ಗದ ಪ್ರಯಾಣ ದರ 60 ರೂಪಾಯಿ. ಇಎಕ್ಸ್​ ಎಸ್​ಟಿಆರ್​ಆರ್​&1 ಮಾರ್ಗದಲ್ಲಿ ಹೊಸಕೋಟೆಯಿಂದ ನೆಲಮಂಗಲದವರೆಗೆ 11 ಬಸ್​ಗಳು 25 ಸುತ್ತುವಳಿಗಳೊಂದಿಗೆ ಕಾರ್ಯಾಚರಣೆಗೊಳ್ಳಲಿವೆ. ಈ ಮಾರ್ಗದ ಪ್ರಯಾಣ ದರ 110 ರೂಪಾಯಿ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು. ಕೆ.ಆರ್​.ಪುರಂ, ಐಟಿಐ ಗೇಟ್​, ಹೊಸಕೋಟೆ ಹೈಸ್ಕೂಲ್​, ನಂದಗುಡಿ, ದೇವನಹಳ್ಳಿ, ದೊಡ್ಡಬಳ್ಳಾಪುರ, ಮಧುರೆ ದೇವಸ್ಥಾನ ಸೇರಿ ಹಲವು ಪ್ರಮುಖ ಸ್ಥಳಗಳಿಗೆ ಬಸ್​ಗಳು ಸಂಪರ್ಕ ಕಲ್ಪಿಸಲಾಗಿದೆ ಎಂದರು.
ಮಾಲೂರುವರೆಗೆ ಸೇವೆ ವಿಸ್ತರಿಸಿ : ಹೊಸಕೋಟೆ ತಾಲೂಕಿನ ಇಟ್ಟಸಂದ್ರದಲ್ಲಿ 5 ಎಕರೆ ಮತ್ತು ಅನುಗೊಂಡನಹಳ್ಳಿ 2 ಎಕರೆ ಪ್ರದೇಶದಲ್ಲಿ ಎಲೆಕ್ಟ್ರಿಕಲ್​ ಬಸ್​ ಡಿಪೋ ಸ್ಥಾಪನೆಗೆ ಅನುಮೋದನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಹೊಸಕೋಟೆಯಿಂದ ಮುಗಬಾಳ, ಚಿಕ್ಕನಹಳ್ಳಿ, ತಾವರೆಕೆರೆ ಮಾರ್ಗವಾಗಿ ನರಸಾಪುರ ಕೈಗಾರಿಕಾ ಪ್ರದೇಶದವರೆಗೆ ಮತ್ತು ಹೊಸಕೋಟೆಯಿಂದ ಮಾಲೂರುವರೆಗೆ ಬಿಎಂಟಿಸಿ ಬಸ್​ ಸೇವೆ ವಿಸ್ತರಿಸಬೇಕೆಂದು ಸಚಿವರಲ್ಲಿ ಶಾಸಕ ಶರತ್​ ಬಚ್ಚೇಗೌಡ ಮನವಿ ಮಾಡಿದರು.
ಶಿಡ್ಲಟ್ಟದವರೆಗೂ ಅವಕಾಶ ನೀಡಿ : ಬಿಎಂಟಿಸಿಯು ಉತ್ತಮ ಸೇವೆ ಕಲ್ಪಿಸುತ್ತಿದೆ. ಸಚಿವರು ಟಿನ್​ ಫ್ಯಾಕ್ಟರಿಯಿಂದ ಎಚ್​.ಕ್ರಾಸ್​ವರೆಗೂ ಬಸ್​ ಸೇವೆ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಎಚ್​.ಕ್ರಾಸ್​ನಿಂದ ಜಂಗಮಕೋಟೆ ಕ್ರಾಸ್​, ವಿಜಯಪುರ, ದೇವನಹಳ್ಳಿ ಮಾರ್ಗವಾಗಿ ಯಲಹಂಕಕ್ಕೆ ಮತ್ತು ಶಿಡ್ಲಟ್ಟ, ಮಳ್ಳೂರು, ಮೇಲೂರು, ವಿಜಯಪುರಕ್ಕೆ ಹಾಗೂ ಎಚ್​.ಕ್ರಾಸ್​ ನಿಂದ ಚೀಮಂಗಲ ಮಾರ್ಗವಾಗಿ ಶಿಡ್ಲಟ್ಟಕ್ಕೆ ಬಿಎಂಟಿಸಿ ಬಸ್​ ಸೇವೆ ಒದಗಿಸಬೇಕು ಎಂದು ಶಿಡ್ಲಟ್ಟ ಶಾಸಕ ಬಿ.ಎನ್​.ರವಿಕುಮಾರ್​ ಅವರು ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net