ಕಾಡುಹಂದಿ ಬೇಟೆಗೆ ಅಳವಡಿಸಿದ್ದ ಕರಿಮದ್ದು ಸ್ಫೋಟ Dog

ಮಧುಗಿರಿ Dogತಾಲೂಕಿನ ಮೈದನಹಳ್ಳಿಯ ಸಿಂಗನಹಳ್ಳಿ ಕೆರೆ ಪ್ರದೇಶದಲ್ಲಿ ಕಾಡುಹಂದಿ ಬೇಟೆಗಾಗಿ ಅಳವಡಿಸಲಾಗಿದ್ದ ಕರಿಮದ್ದು ಸ್ಫೋಟಗೊಂಡ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಗೋಪಾಲ್​ ಭೇಟಿ ನೀಡಿ ಪರಿಶೀಲಿಸಿದರು.
ಮಧುಗಿರಿ Dogತಾಲೂಕಿನ ಮೈದನಹಳ್ಳಿಯ ಸಿಂಗನಹಳ್ಳಿ ಕೆರೆ ಪ್ರದೇಶದಲ್ಲಿ ಕಾಡುಹಂದಿ ಬೇಟೆಗಾಗಿ ಅಳವಡಿಸಲಾಗಿದ್ದ ಕರಿಮದ್ದು ಸ್ಫೋಟಗೊಂಡ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಗೋಪಾಲ್​ ಭೇಟಿ ನೀಡಿ ಪರಿಶೀಲಿಸಿದರು.
Published on

ಮಧುಗಿರಿ:

ತಾಲೂಕಿನ ಮೈದನಹಳ್ಳಿಯ ಸಿಂಗನಹಳ್ಳಿ ಕೆರೆ ಪ್ರದೇಶದಲ್ಲಿ ಕಾಡುಹಂದಿ ಬೇಟೆಗಾಗಿ

Dog

ಅಳವಡಿಸಿದ್ದ ಕರಿಮದ್ದು ಸೋಮವಾರ ಬೆಳಗ್ಗೆ ಸ್ಫೋಟಗೊಂಡ ಪರಿಣಾಮ ಸಾಕು ನಾಯಿ ಮೃತಪಟ್ಟಿದೆ.

ಮೈದನಹಳ್ಳಿಯ ಅಶೋಕ್​ ತಮ್ಮ ಸಾಕು ನಾಯಿಯೊಂದಿಗೆ ಬಯಲು ಶೌಚಕ್ಕೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಗ್ರಾಮದ ಸರ್ವೇ ನಂ.25ರ ಸಿಂಗನಹಳ್ಳಿ ಕೆರೆ ಪ್ರದೇಶದಲ್ಲಿ ಕಾಡುಹಂದಿ ಬೇಟೆಗಾಗಿ ಕರಿ ಮದ್ದು ಅಳವಡಿಸಲಾಗಿತ್ತು ಎನ್ನಲಾಗಿದ್ದು, ನಾಯಿ ಅದನ್ನು ತಿಂದ ಸಂದರ್ಭದಲ್ಲಿ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.
ಹೆಚ್ಚುವರಿ ಎಸ್ಪಿ ಗೋಪಾಲ್​, ಡಿವೈಎಸ್ಪಿ ಮಂಜುನಾಥ್​, ಸಿಪಿಐ ಹನುಮಂತರಾಯಪ್ಪ ಹಾಗೂ ಪಿಎಸ್​ಐ ರಾಜೇಶ್​, ಪಶುವೈದ್ಯಾಧಿಕಾರಿ ಮನೋಹರ್​, ಎಫ್​ಎಸ್​ಎಲ್​ ತಜ್ಞರ ತಂಡ, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಪರಿಶೀಲನೆ ನಡೆಸಿತು. ಕಾಡುಹಂದಿ ಬೇಟೆಗಾಗಿ ಸ್ಫೋಟಕ ಅಳವಡಿಸಿದವರು ಯಾರು ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net