ಬೇತಮಂಗಲ ಶಾಲೆಗೆ ಅಸ್ತಿತ್ವದ ಆತಂಕ

Existential anxiety for Betamangala school
Existential anxiety for Betamangala school
Published on

ಬೇತಮಂಗಲ:

ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಿದ್ದ, ಸುಮಾರು 90 ವರ್ಷಗಳ ಸುದೀರ್ ಇತಿಹಾಸ ಹೊಂದಿರುವ ಬೇತಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ ಮತ್ತು ಉರ್ದು) ತೀವ್ರ ರ್ನಿಲ್ಯಕ್ಕೆ ಒಳಗಾಗಿದೆ.

ಬೇತಮಂಗಲ ಶಾಲೆಯ ಎರಡು ಕೊಠಡಿಗಳನ್ನು ನೆಲಸಮ ಮಾಡಲಾಗಿದೆ. ಪ್ರಾಂಕ್​ ಯೋಜನೆಯಡಿ ಮೂರು ಸುಸಜ್ಜಿತ ಕೊಠಡಿ ನಿರ್ಮಾಣ ಮಾಡಲು ಎಲ್ಲ ಸಿದ್ಧತೆ ಮಾಡಲಾಗಿದೆ. ಸಿಎಸ್​ಆರ್​ ನಿಧಿಗಾಗಿ ಖಾಸಗಿ ಕಂಪನಿಗಳು ಮತ್ತು ಹಳೇ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಿದ್ದೇವೆ. ಪಿಎಂಶ್ರೀ ಯೋಜನೆಯಡಿ ಆಧುನಿಕ ಶಿಣ ಪದ್ಧತಿಗೆ ಬೇಕಾದ ಹಲವು ಪರಿಕರಗಳನ್ನು ಖರೀದಿ ಮಾಡಿದ್ದೇವೆ. ಕೊಠಡಿಗಳು ದುಸ್ಥಿತಿಯಲ್ಲಿ ಇರುವ ಕಾರಣಕ್ಕೆ ಅಳವಡಿಸಲು ಸಾಧ್ಯವಾಗುತ್ತಿಲ್ಲ.

— ಬಿ.ಜಿ.ನಾರಾಯಣಸ್ವಾಮಿ ಬಿಇಒ ಕೆಜಿಎ್​ ತಾಲೂಕು

ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದೆ ಕಟ್ಟಡ ಕುಸಿಯುವ ಹಂತ ತಲುಪಿದ ಪರಿಣಾಮ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಣಿಸುತ್ತಿದೆ.

'ಪಿಎಂ ಶ್ರೀ' ಅನುದಾನ ಎತ್ತ ಸಾಗಿತು?

ಈ ಶಾಲೆಯು ಕೆ.ಜಿ.ಎ್​ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆಯಡಿ ದತ್ತು ಸ್ವೀಕಾರಗೊಂಡಿದೆ. 2023&24ರಿಂದ 2025&26ರ ಅವಧಿಯಲ್ಲಿ ಸ್ಮಾರ್ಟ್​ ಕ್ಲಾಸ್​, ಲ್ಯಾಬ್​ ಹಾಗೂ ಗ್ರಂಥಾಲಯ ಅಭಿವೃದ್ಧಿಗಾಗಿ ಸುಮಾರು 10 ಲ ಅನುದಾನ ಹರಿದುಬಂದಿದೆ ಎನ್ನಲಾಗಿದೆ. ಆದರೆ, ಶಾಲೆಯಲ್ಲಿ ಯಾವುದೇ ಆಧುನಿಕ ಸೌಲಭ್ಯಗಳು ಕಣ್ಣಿಗೆ ಕಾಣಿಸುತ್ತಿಲ್ಲ. ಬಂದ ಅನುದಾನ ದುರುಪಯೋಗವಾಗಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

1935ರಲ್ಲಿ ಪ್ರಾರಂಭಗೊಂಡ ಈ ಶಾಲೆಯು ಸುತ್ತಮುತ್ತಲ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರಮುಖ ಶಿಣ ಕೇಂದ್ರವಾಗಿತ್ತು. ಇದುವರೆಗೆ ಕನ್ನಡ ಮತ್ತು ಉರ್ದು ಮಾಧ್ಯಮಗಳಲ್ಲಿ 1 ಲಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಶಿಣ ಪಡೆದು, ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ, ಇಂದು ಅದೇ ಶಾಲೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ.
ಸದ್ಯ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ 110 ಹಾಗೂ ಉರ್ದು ಮಾಧ್ಯಮದಲ್ಲಿ 74 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕನ್ನಡ ವಿಭಾಗಕ್ಕೆ 10 ಮತ್ತು ಉರ್ದು ವಿಭಾಗಕ್ಕೆ 8 ಕೊಠಡಿಗಳಿವೆಯಾದರೂ, ಹೆಚ್ಚಿನವು ಶಿಥಿಲಾವಸ್ಥೆಯಲ್ಲಿವೆ.

ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಗಿದ್ದು, ಹೆಚ್ಚಳಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಸುಸಜ್ಜಿತ ಕಟ್ಟಡ ಮತ್ತು ಮೂಲ ಸೌಲಭ್ಯಗಳು ಇಲ್ಲದಿರುವ ಹಾಗೂ ಕಾಯಂ ಶಿಕರು, ಸಹ ಶಿಕರು ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆಗೆ ಸೇರಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಸಂಭಂದಪಟ್ಟ ಇಲಾಖೆ ಅಧಿಕಾರಿಗಳು, ವಿಶೇಷವಾಗಿ ೇತ್ರದ ಶಾಸಕರು ಶಾಲೆಗೆ ಭೇಟಿ ನೀಡಿ ಅನುಕೂಲ ಕಲ್ಪಿಸಬೇಕಿದೆ.

— ನೆರ್ನಹಳ್ಳಿ ಶಂಕರ್​ ನಿಯೋಜಿತ ಪ್ರಭಾರಿ ಮುಖ್ಯಶಿಕ್ಷಕ

ಭಯದ ನೆರಳಿನಲ್ಲಿ ಪಾಠ
ಮಳೆ ಬಂದರೆ ಮೇಲ್ಛಾವಣಿ ಸೋರುತ್ತದೆ. ಗೋಡೆಗಳು ಬಿರುಕು ಬಿಟ್ಟು ಇಟ್ಟಿಗೆಗಳು ಕಾಣಿಸುತ್ತಿದ್ದು, ಗೋಡೆಗಳಲ್ಲಿ ಗಿಡಗಳು ಬೆಳೆದಿವೆ. ಯಾವಾಗ ಮೇಲ್ಛಾವಣಿ ಕುಸಿದು ಬೀಳುತ್ತದೋ ಎಂಬ ಆತಂಕದಲ್ಲಿಯೇ ಮಕ್ಕಳು ಪಾಠ ಕೇಳಬೇಕಾಗಿದೆ. ಆಧುನಿಕ ಶಿಣದ ಈ ಯುಗದಲ್ಲೂ ವಿದ್ಯಾರ್ಥಿಗಳು ನೆಲದ ಮೇಲೆಯೇ ಕುಳಿತು ಕಲಿಯುತ್ತಿದ್ದಾರೆ. ಕುಡಿಯುವ ನೀರು, ಸುಸಜ್ಜಿತ ಶೌಚಗೃಹ, ಪ್ರತ್ಯೇಕ ಗ್ರಂಥಾಲಯ, ಕಂಪ್ಯೂಟರ್​ ಲ್ಯಾಬ್​ಗಳ ಸಂಪೂರ್ಣ ಅಭಾವ ಇಲ್ಲಿದೆ.

ಕಾಯಂ ಶಿಕರೇ ಇಲ್ಲ!

10 ವರ್ಷಗಳ ಹಿಂದೆ 300ಕ್ಕೂ ಹೆಚ್ಚು ಮಕ್ಕಳಿದ್ದ ಈ ಶಾಲೆಯಲ್ಲಿ ಇಂದು ಒಬ್ಬರೇ ಒಬ್ಬರು ಕಾಯಂ ಶಿಕರಿಲ್ಲ. ಮುಖ್ಯಶಿಕ್ಷಕ ಸೇರಿ ಮಂಜೂರಾದ ಎಲ್ಲ 7 ಹುದ್ದೆಗಳೂ ಖಾಲಿ ಇವೆ. ಪ್ರಸ್ತುತ ಬೇರೆಡೆಗಳಿಂದ ನಿಯೋಜನೆಗೊಂಡಿರುವ 4 ತಾತ್ಕಾಲಿಕ ಶಿಕರೇ ಶಾಲೆಯನ್ನು ನಡೆಸುತ್ತಿದ್ದಾರೆ. ಒಬ್ಬ ಶಿಕರೇ ಒಂದಕ್ಕಿಂತ ಹೆಚ್ಚು ತರಗತಿಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಜತೆಗೆ ಬಿಸಿಯೂಟ, ಚುನಾವಣಾ ಕರ್ತವ್ಯ ಹಾಗೂ ವಿವಿಧ ಸಮೀೆಗಳ ಹೆಚ್ಚುವರಿ ಕೆಲಸಗಳಿಂದಾಗಿ ಬೋಧನೆಗೆ ಸೂಕ್ತ ಸಮಯ ಸಿಗುತ್ತಿಲ್ಲ.

ತುರ್ತು ಸ್ಪಂದನೆ ಅಗತ್ಯ
ಜನಪ್ರತಿನಿಧಿಗಳು ಹಾಗೂ ಶಿಣ ಇಲಾಖೆಯ ಉನ್ನತಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಹೊಸ ಕಟ್ಟಡ ನಿರ್ಮಾಣ ಹಾಗೂ ಮೂಲಸೌಲಭ್ಯಗಳನ್ನು ತಣವೇ ಒದಗಿಸಬೇಕಾಗಿದೆ. ಅಲ್ಲದೆ, ಶಾಲೆಯಲ್ಲಿ ಓದಿ ಉನ್ನತ ಹಂತಕ್ಕೇರಿರುವ ಹಳೇ ವಿದ್ಯಾರ್ಥಿಗಳು ಮತ್ತು ಸ್ಥಳಿಯ ಗ್ರಾಮಸ್ಥರು ತಮ್ಮ ಊರಿನ ಶಾಲೆಯನ್ನು ಉಳಿಸಿಕೊಳ್ಳಲು ಸಾಲಾಗಿ ಕೈಜೋಡಿಸಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net