ಬೌದ್ಧಿಕ ವಿಕಾಸಕ್ಕೆ ವಸ್ತು ಪ್ರದರ್ಶನ ಪ್ರೇರಣೆ

ಕಲಬುರಗಿ ಆಳಂದ ರಸ್ತೆಯಲ್ಲಿರುವ ಸಂಗಪ್ಪ ಶೆಟ್ಟಿ ಸ್ಮಾರಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ  ವಿದ್ಯಾರ್ಥಿಗಳ ಭಾರತೀಯ ಜ್ಞಾನ ವಿಕಾಸ ಮಹೋತ್ಸವ, ವಸ್ತು ಪ್ರದರ್ಶನ ಸಮಾರೋಪದಲ್ಲಿ ಡಾ.ಸದಾನಂದ ಪೆರ್ಲ, ಡಾ.ಚಂದ್ರಕಾಂತ ಕೆಳಮನಿ ಇತರರು ವಿಜ್ಞಾನ ವಸ್ತುಪ್ರದರ್ಶನ ವೀಕ್ಷಿಸಿದರು.
ಕಲಬುರಗಿ ಆಳಂದ ರಸ್ತೆಯಲ್ಲಿರುವ ಸಂಗಪ್ಪ ಶೆಟ್ಟಿ ಸ್ಮಾರಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಭಾರತೀಯ ಜ್ಞಾನ ವಿಕಾಸ ಮಹೋತ್ಸವ, ವಸ್ತು ಪ್ರದರ್ಶನ ಸಮಾರೋಪದಲ್ಲಿ ಡಾ.ಸದಾನಂದ ಪೆರ್ಲ, ಡಾ.ಚಂದ್ರಕಾಂತ ಕೆಳಮನಿ ಇತರರು ವಿಜ್ಞಾನ ವಸ್ತುಪ್ರದರ್ಶನ ವೀಕ್ಷಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಸದಾನಂದ ಪೆರ್ಲ ಹೇಳಿಕೆ
  • ಸಂಗಪ್ಪ ಶೆಟ್ಟಿ ಸ್ಮಾರಕ ಶಾಲೆಯಲ್ಲಿ ಭಾರತೀಯ ಜ್ಞಾನ ವಿಕಾಸ ಮಹೋತ್ಸವ
ಕಲಬುರಗಿ: ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಬೌದ್ಧಿಕ ವಿಕಾಸಕ್ಕೆ ವಸ್ತು ಪ್ರದರ್ಶನಗಳು ಪ್ರೇರಣೆಯಾಗಲಿದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ.ಸದಾನಂದ ಪೆರ್ಲ ಹೇಳಿದರು.
ಕಲಬುರಗಿ ಆಳಂದ ರಸ್ತೆಯಲ್ಲಿರುವ ಸಂಗಪ್ಪ ಶೆಟ್ಟಿ ಸ್ಮಾರಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಭಾರತೀಯ ಾನ ವಿಕಾಸ ಮಹೋತ್ಸವ, ವಸ್ತು ಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಕೇವಲ ಅಂಕ ಸೃಷ್ಟಿಯ ಯಂತ್ರಗಳನ್ನಾಗಿಸದೆ ಸೃಜನಶೀಲತೆ ಮತ್ತು ವೈಾನಿಕ ಮನೋಭಾವ ಬೆಳೆಸುವ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಹೇಳಿದರು.
ಜನವರಿ 19 ರಿಂದ ಪ್ರಾರಂಭಗೊಂಡ ವಿದ್ಯಾರ್ಥಿಗಳ ವಿಶೇಷ ಪ್ರತಿಭಾ ಸಾಮರ್ಥ್ಯ ಬೆಳಕಿಗೆ ತರುವ ಭಾರತೀಯ ಾನ ವಿಕಾಸ ಮಹೋತ್ಸವ ವಸ್ತು ಪ್ರದರ್ಶನಗಳು ನೋಡುಗರಲ್ಲಿ ಕುತೂಹಲ ಸೃಷ್ಟಿಸಿದೆ. ಸುಮಾರು 50ಕ್ಕೂ ಹೆಚ್ಚು ಪ್ರಾತ್ಯಕೆಗಳು ಕನ್ನಡ ಸಾಹಿತ್ಯ ವೈಾನಿಕ ೇತ್ರದ ವಿಸ್ಮಯ, ಗಣಿತ ೇತ್ರದ ಕೌತುಕ, ಪರಿಸರ ಸಂರಣೆ, ಆರೋಗ್ಯ ಸಂರಣೆ, ರೊಬೋಟಿಕ್​ ತಂತ್ರಾನ, ನೀರಿನ ಸದ್ಬಳಕೆ, ವಿರಾಸತ್​ ಕಲಬುರಗಿಯಿಂದ ವಿಕಾಸ ಕಲಬುರಗಿ ನಡೆ, ಮಂಗನಿಂದ ಮಾನವ ಆವಿಷ್ಕಾರ, ಪರಿಸರದ ಬದುಕು, ಪಾರಂಪರಿಕ ಬದುಕು ಮುಂತಾದ ಪ್ರಾತ್ಯಕೆಗಳನ್ನು ಒಂದರಿಂದ ಹತ್ತನೇ ತರಗತಿವರೆಗಿನ ಸುಮಾರು 900 ವಿದ್ಯಾರ್ಥಿಗಳನ್ನು ಹೊಂದಿದ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ್ದರು.
ಜತೆಗೆ ಪ್ರಾತ್ಯಕೆಗಳ ಬಗ್ಗೆ ಸಾರ್ವಜನಿಕರಿಗೆ ವಿವರಣೆ ನೀಡಿ ಜಾಗೃತಿ ಮೂಡಿಸಿದರು. ಕಲಬುರಗಿ ವಿಶ್ವವಿದ್ಯಾಲಯದ ಜೈವಿಕ ತಂತ್ರಾನ ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಕಾಂತ ಕೆಳಮನಿ ವಸ್ತು ಪ್ರದರ್ಶನ ಉದ್ಘಾಟಿಸಿದರು. ಶಾಲೆಯ ಅಧ್ಯ, ನ್ಯಾಯವಾದಿ ಗಿರಿಜಾಶಂಕರ ಶೆಟ್ಟಿ ಹಾಗೂ ಕೋಶಾಧಿಕಾರಿ ಸುಜಾತಾ ಶೆಟ್ಟಿ, ಅಮೂಲ್ಯ ಸಂಗಪ್ಪ ಶೆಟ್ಟಿ, ಸವಿತಾ ಗುತ್ತೇದಾರ್​, ಶಾಲೆಯ ನಿರ್ದೇಶಕ ಹಾಗೂ ಉದ್ಯಮಿ ಸಂಗಪ್ಪ ಶೆಟ್ಟಿ ಸ್ವಾಗತಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಶಿವಾನಂದ ದೋಶೆಟ್ಟಿ ಹಾಗೂ ಸಂಯೋಜಕಿ ಪದ್ಮಿನಿ ಇತರರಿದ್ದರು.
"

ಪಠ್ಯಕ್ಕೆ ಪೂರಕವಾಗುವ ವಸ್ತುಪ್ರದರ್ಶನ ಏರ್ಪಡಿಸುವುದು, ಸೂಕ್ತ ಪ್ರತಿಭೆ ಮತ್ತು ಸೃಜನಶೀಲತೆ ಹೆಚ್ಚಿಸುವ ಪ್ರಯತ್ನವಾಗಿದೆ. ಕೇವಲ ಸರ್ಟಿಫಿಕೇಟ್​ ಪಡೆಯುವ ವಿದ್ಯಾರ್ಥಿಗಳನ್ನಾಗಿಸದೆ ಪಾಲಕರು ತಮ್ಮ ಮಕ್ಕಳನ್ನು ಬಹುಮುಖ ಆಯಾಮಗಳಲ್ಲಿ ಬೆಳೆಸಿ ಉತ್ತಮ ರಾಷ್ಟ್ರ ಪ್ರಜೆಯಾಗುವ ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಇಂದಿನ ಅಗತ್ಯ.

ಡಾ.ಸದಾನಂದ ಪೆರ್ಲ,

ನಿವೃತ್ತ ಅಧಿಕಾರಿ, ಆಕಾಶವಾಣಿ ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net