ಶೋಧ ಕಾರ್ಯಾಚರಣೆ ವೇಳೆ ಡಿಜಿಟಲ್ ಸಾಧನಗಳು, ಆಸ್ತಿ ದಾಖಲೆಗಳು, ಲಂಚ ವಿತರಣೆಯ ದಾಖಲೆಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ವೈ.ಡಿ. ಮಂಜುನಾಥ್ ಅವರ ಚಾಲಕ, ಕುಟುಂಬ ಸದಸ್ಯರು ಹಾಗೂ ಸಹಚರರ ಬಳಿ ಸುಮಾರು 5.5 ಕೋಟಿ ರೂ. ನಗದು, 7.8 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 3.3 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಒಟ್ಟಾರೆ ಈ ಪ್ರಕರಣದಲ್ಲಿ ಇದುವರೆಗೆ 13.3 ಕೋಟಿ ರೂ. ಮೌಲ್ಯದ ಆದಾಯ ವಶಪಡಿಸಿಕೊಳ್ಳಲಾಗಿದೆ ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.