ಇದನ್ನು ಪ್ರಶ್ನಿಸಿದ್ದ ಇಲಾಖೆ, ಸುಪ್ರೀಂಕೋರ್ಟ್‌ನಲ್ಲಿ ಸ್ಪೆಷಲ್ ಲೀವ್ ಪಿಟಿಷನ್(ಎಸ್‌ಎಲ್‌ಪಿ) ಸಲ್ಲಿಸಿತ್ತು. ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಾಲಿ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ 8 ಅಧಿಕಾರಿಗಳು ಬಿಡುಗಡೆಯಾಗಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಬೇಕು. ಹುದ್ದೆ ಸಿಗದೆ ಕಚೇರಿಯಲ್ಲಿ ವರದಿ ಮಾಡಿಕೊಂಡಿದ್ದ ಅಬಕಾರಿ ನಿರೀಕ್ಷಕರಾದ ಪ್ರವೀಣ್ ರಂಗಸುಭೆ, ಎಸ್.ಶೀಲಾ, ರೇಖಾ ಮಲ್ಲಪ್ಪ ಕೊಡಕೇರಿ, ಹೇಮಲತಾ, ಬಿ.ಆರ್. ಶ್ರೀನಾಥ್, ಕೇದಾರಿ ಬಸಪ್ಪ ಮುಧೋಳ್, ಎಚ್.ಆರ್.ಸತ್ಯಪ್ರಕಾಶ್ ಮತ್ತು ಶಂಕರ್ ಗುಡದಾರ್‌ಗೆ ಹುದ್ದೆ ನೀಡಿ ಇಲಾಖೆ ಆದೇಶ ಹೊರಡಿಸಿದೆ.