ವಿಷಯ ಪತ್ರಿಕೆ ಗರಿಷ್ಠ 100 ಅಂಕಗಳಿದ್ದು, ಪ್ರಥಮ ಪಿಯುಸಿ ವಿಷಯದ ಶೇ.40 ರಷ್ಟು, ದ್ವಿತೀಯ ಪಿಯುಸಿ ವಿಷಯದ ಶೇ. 40 ರಷ್ಟು ಹಾಗೂ ಸ್ನಾತಕೋತ್ತರ ಪದವಿ ವಿಷಯದ ಶೇ. 20ರಷ್ಟು ಪಠ್ಯವಸ್ತುವನ್ನು ವರ್ಗೀಕರಣ ಮಾಡಲಾಗಿದೆ. ಅರ್ಹತೆಗಾಗಿ ವಿಷಯವಾರು ಪತ್ರಿಕೆಯಲ್ಲಿ ಗರಿಷ್ಠ 100 ಅಂಕಗಳಿಗೆ ಕನಿಷ್ಠ 50 ಅಂಕಗಳನ್ನು ಪಡೆಯಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ) ಸರ್ಕಾರದ ಅಧೀನ ಕಾರ್ಯದರ್ಶಿ ಪದ್ಚಿನಿ ಎಸ್.ಎನ್. ಅವರು ಸೂಚಿಸಿದ್ದಾರೆ.