

ನ್ಯಾಯಾಂಗ ಹಸ್ತಕ್ಷೇಪಕ್ಕೆ ಮಿತಿ
ವರ್ಗಾವಣೆಗಳು ಸರ್ಕಾರಿ ಸೇವೆಯ ಭಾಗವಾಗಿದೆ. ವರ್ಗಾವಣೆ ಆದೇಶವು ನಿಯಮಬಾಹಿರವಾಗಿದ್ದು, ಸೂಕ್ತವಲ್ಲದ ಪ್ರಾಧಿಕಾರಗಳಿಂದ ಬಂದಿದ್ದರೆ ಅಥವಾ ದುರುದ್ದೇಶದಿಂದ ಮಾಡಲಾಗಿದೆ ಎಂಬ ಅಂಶಗಳು ಕಂಡುಬಂದರೆ ಮಾತ್ರ ನ್ಯಾಯಾಂಗ ಹಸ್ತಕ್ಷೇಪ ಮಾಡಬೇಕು. ಪೊಲೀಸ್ ಸಿಬ್ಬಂದಿ ವರ್ಗಾವಣೆ ಮತ್ತು ನಿಯೋಜನೆ ಆಡಳಿತಾತ್ಮಕ ವಿಚಾರವಾಗಿದ್ದು, ಅಧಿಕಾರಿಗಳ ನಿರ್ಧಾರದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.