ನೆಲಮಂಗಲ ತಾಲೂಕಿನ ಶೇಷಾವಧೂತರ ಆಶ್ರಮದಲ್ಲಿ ಆರ್ಎಸ್ಎಸ್ ಶತಮಾನದ ಸಂಭ್ರಮಾಚರಣೆ ಪ್ರಯುಕ್ತ ಕರಪತ್ರ ಮತ್ತು ಸಂಘದ ಪರಿಚಯ ಪುಸ್ತಕ ವಿತರಣೆ ಮಾಡಲಾಯಿತು. ತ್ಯಾಮಗೊಂಡ್ಲು ಕಾರ್ಯನಿರ್ವಾಹಕ ರಮೇಶ್, ಕಾರ್ಯಕರ್ತರಾದ ಅರುಣ್ ಗೌಡ, ಟಿ.ಎನ್.ಹನುಮಂತರಾಜು, ಕೋಡಿಹಳ್ಳಿ ಅರುಣ್ಕುಮಾರ್, ಶೇಷಾವದೂತ ಆಶ್ರಮದ ಮಂಜುನಾಥ ಸ್ವಾಮೀಜಿ ಇದ್ದರು.
Published on:
Copied
Follow Us
ತ್ಯಾಮಗೊಂಡ್ಲು : ರಾಷ್ಟ್ರೀಯ ಸ್ವಯಂ ಸೇವಕ ಸಂಘವು ವಿಪತ್ತಿನಲ್ಲಿ ಸೀಮಿತ ಸಂಪನ್ಮೂಲಗಳ ಹೊರತಾಗಿಯೂ ಮೊದಲು ಸ್ಪಂದಿಸುತ್ತದೆ. ಅವರಿಗೆ ಅದು ಕೇವಲ ಪರಿಹಾರ ಕಾರ್ಯವಲ್ಲ, ರಾಷ್ಟ್ರದ ಆತ್ಮ ಬಲಪಡಿಸುವ ಕೆಲಸ. ವೈಯಕ್ತಿಕ ಕಷ್ಟ ಬದಿಗೊತ್ತಿ ಇತರರ ನೋವಿಗೆ ಸ್ಪಂದಿಸುವ ಪ್ರತಿಯೊಬ್ಬರೂ ಸ್ವಯಂಸೇವಕರೇ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಚಾರಕ್ ಸುವಿಕ್ರಮ ಹೇಳಿದರು.
ನೆಲಮಂಗಲ ತಾಲೂಕಿನ ಶೇಷಾವಧೂತರ ಆಶ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನದ ಸಂಭ್ರಮಾಚರಣೆ ಪ್ರಯುಕ್ತ ಆಯೋಜಿಸಿದ್ದ ಕರಪತ್ರ ಮತ್ತು ಸಂಘದ ಪರಿಚಯ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಘದ ಪಂಚಪರಿವರ್ತನೆಯ ಸಂಕಲ್ಪಗಳಾದ ವಂಚಿತರಿಗೆ ಆದ್ಯತೆ ನೀಡಿ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳುವ ಸಾಮಾಜಿಕ ಸಮರಸತೆ, ಪರಿಸರ ಸಂರಕ್ಷಣೆ, ಸಂಸತಿಯ ಅಡಿಪಾಯವಾಗಿರುವ ಕುಟುಂಬ ವ್ಯವಸ್ಥೆ ಬಲಪಡಿಸುವ ಕುಟುಂಬ ಪ್ರಭೋಧನ್, ಪ್ರತಿಯೊಬ್ಬರಲ್ಲೂ ನಾಗರಿಕ ಮತ್ತು ಜವಾಬ್ದಾರಿಯ ಪ್ರಜ್ಞೆ ಜಾಗೃತಗೊಳಿಸುವ ನಾಗರಿಕ ಕರ್ತವ್ಯ ಹಾಗು ಸ್ವದೇಶಿ ತತ್ವ ಮುನ್ನಡೆಸಲು ಸ್ವದೇಶಿ ಜೀವನಶೈಲಿಯ ಬಗ್ಗೆ ತಿಳಿಸಿಕೊಟ್ಟರು.
ಪ್ರತಿಯೊಬ್ಬರೂ ಜಾತಿ, ಬೇಧ ಮರೆತು ಸಹೋದರರಂತೆ ಬದುಕಬೇಕು. ಜಾತಿ ಎಂಬುದು ಅಪಮಾನದ ಸಂಕೇತವಾಗದೆ, ಎಲ್ಲರ ಮನೆಯಲ್ಲೂ ಎಲ್ಲರಿಗೂ ಪ್ರವೇಶ ಸಿಗುವ ದಾರಿಯಾಗಬೇಕು. ಪ್ರತಿ ಮನೆಯೂ ಸಂಸ್ಕಾರದ ಕೇಂದ್ರವಾಗಬೇಕು ಎಂದರು.