ಪ್ಲಾಸ್ಟಿಕ್‌ಮುಕ್ತ ಜಿಲ್ಲೆಗೆ ಎಲ್ಲರೂ ಪಣತೊಡಿ

ಯಾದಗಿರಿ ನಗರದ ಜಿಲ್ಲಾ ಕೋರ್ಟ್ನಲ್ಲಿ ಬುಧವಾರ ಮಧ್ಯಾಹ್ನ ಆಯೋಜಿಸಿದ್ದ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತ ಕಾರ್ಯಾಗಾರದಲ್ಲಿ ಜಿ¯್ಲÁ ಪ್ರಧಾನ ಮತ್ತು ಸತ್ರ ನ್ಯಾಯಾಽÃಶ ಮುರುಳಸಿದ್ಧಾರಾಧ್ಯ ಎಚ್.ಜೆ. ಮಾತನಾಡಿದರು. ಎಸ್‌ಪಿ ಪೃಥ್ವಿಕ್ ಶಂಕರ್, ಸಿವಿಲ್ ನ್ಯಾಯಾಽÃಶ ಮರಿಯಪ್ಪ, ಎಸಿ ಶ್ರೀಧರ ಗೋಟೂರ, ಪೌರಾಯುಕ್ತ ಉಮೇಶ ಚವ್ಹಾಣ್ ಇತರರಿದ್ದರು.
ಯಾದಗಿರಿ ನಗರದ ಜಿಲ್ಲಾ ಕೋರ್ಟ್ನಲ್ಲಿ ಬುಧವಾರ ಮಧ್ಯಾಹ್ನ ಆಯೋಜಿಸಿದ್ದ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತ ಕಾರ್ಯಾಗಾರದಲ್ಲಿ ಜಿ¯್ಲÁ ಪ್ರಧಾನ ಮತ್ತು ಸತ್ರ ನ್ಯಾಯಾಽÃಶ ಮುರುಳಸಿದ್ಧಾರಾಧ್ಯ ಎಚ್.ಜೆ. ಮಾತನಾಡಿದರು. ಎಸ್‌ಪಿ ಪೃಥ್ವಿಕ್ ಶಂಕರ್, ಸಿವಿಲ್ ನ್ಯಾಯಾಽÃಶ ಮರಿಯಪ್ಪ, ಎಸಿ ಶ್ರೀಧರ ಗೋಟೂರ, ಪೌರಾಯುಕ್ತ ಉಮೇಶ ಚವ್ಹಾಣ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಽÃಶ ಮರುಳಸಿದ್ಧಾರಾಧ್ಯ ಕರೆ
  • ಯಾದಗಿರಿ ಜಿಲ್ಲಾ ಕೋರ್ಟ್ನಲ್ಲಿ ಕಾರ್ಯಾಗಾರ
ಯಾದಗಿರಿ : ಮನುಷ್ಯ ಸೇರಿ ಸಕಲ ಜೀವಕ್ಕೂ ಕುತ್ತಾಗಿರುವ ಪ್ಲಾಸ್ಟಿಕ್ ಬಳಕೆ ಇಂದಿಗೂ ಅತಿಯಾಗಿದೆ ಬಳಕೆಯಾಗುತ್ತಿದೆ ಎಂದು ಜಿ¯್ಲÁ ಪ್ರಧಾನ ಮತ್ತು ಸತ್ರ ನ್ಯಾಯಾಽÃಶ ಮುರುಳಸಿದ್ಧಾರಾಧ್ಯ ಎಚ್.ಜೆ. ಅವರು ಕಳವಳ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್‌ಮುಕ್ತ ಜಿ¯್ಲೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಮತ್ತು ಸಹಕಾರ ನೀಡಬೇಕು. ಇಲ್ಲಿನ ಜಿ¯್ಲÁ ಕೋರ್ಟ್ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ಜಿ¯್ಲÁ ಕಾನೂನು ಸೇವೆಗಳ ಪ್ರಾಽಕಾರದಿಂದ ಆಯೋಜಿಸಿದ್ದ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ೨೦೧೬ ಮಾರ್ಚ್ ೧೬ರಂದು ಸರ್ಕಾರ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಕಾಯ್ದೆ ಜಾರಿ ಮಾಡಿದ್ದರೂ ಇಂದಿಗೂ ಅದು ನಿಷೇಧದ ಬದಲಿಗೆ ಶರವೇಗದಲ್ಲಿ ಬೆಳೆಯುತ್ತಿದೆ ಎಂದು ವಿಷಾಽಸಿದರು.
ಕೇಂದ್ರ ಪರಿಸರ ಇಲಾಖೆ ಕಳೆದ ೪೦ ವರ್ಷಗಳ ಹಿಂದೆಯೇ ಈ ಕಾನೂನು ತಂದು ತಪ್ಪಿಸ್ಥರರಿಗೆ ದಂಡ ಮತ್ತು ಶಿಕ್ಷೆಯೂ ಜÁರಿ ಮಾಡಿದ್ದರೂ ಇದು ನಿಲ್ಲುತ್ತಿಲ್ಲ ಎಂದರೆ ಇದಕ್ಕೆ ಜಾಗೃತಿ, ಅರಿವಿನ ಕೊರತೆ ಇದೆ ಎಂದರು. ಗಿರಿಜಿ¯್ಲÉಯಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆ ಇದೆ ಮತ್ತು ಅದನ್ನು ಚರಂಡಿ, ಕೆರೆ, ನದಿ, ರಸ್ತೆಗಳಲ್ಲಿ ರಾಶಿಗಟ್ಟಲೇ ಬಿಸಾಡಿದ್ದು ಕಾಣುತ್ತೇವೆ. ಇದರಿಂದ ಜನ, ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.
ಜೀವಕ್ಕಿಂತ ದೊಡ್ಡದ್ದು ಯಾವುದು ಇಲ್ಲ. ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ನಿತ್ಯ ನಾವೆಲ್ಲರೂ ಐದು ಗ್ರಾಂ ವಿಷಯುಕ್ತ ಆಹಾರ ಸೇವನೆ ಮಾಡುತ್ತಿದ್ದೇವೆ. ಇದುವರೆಗೂ ಆಗಿದ್ದು ಆಯಿತು. ನಾಳೆಯಿಂದ¯್ಲÉÃ ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಸುವುದು, ಮಾರುವುದು, ಉತ್ಪಾದಿಸುವುದು ನಿಲ್ಲಿಸುವ ಮೂಲಕ ಪ್ಲಾಸ್ಟಿಕ್‌ಮುಕ್ತ ಜಿ¯್ಲÉಗೆ ಪಣ ತೊಡೊಣ ಎಂದು ನ್ಯಾಯಾಽÃಶರು ಬಹು ಮಾರ್ಮಿಕವಾಗಿ ಹೇಳಿದರು.
ಪ್ಲಾಸ್ಟಿಕ್ ನಿಯಂತ್ರಣ ಮತ್ತು ನಿಷೇಧ ಒಬ್ಬರಿಂದ ಮತ್ತು ಒಂದು ಇಲಾಖೆಯಿಂದ ಸಾಧ್ಯವಿಲ್ಲ. ಸಮಾಜದ ಪ್ರತಿಯೊಬ್ಬರೂ ಮತ್ತು ಪ್ರತಿ ಇಲಾಖೆ, ಸಂಘ-ಸAಸ್ಥೆಗಳು ಕೈಜೊಡಿಸಿದಾಗ ಮಾತ್ರ ಸಾಧ್ಯ ಎಂದರು.
ಜಿ¯್ಲÁ ಕಾನೂನು ಪ್ರಾಽಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಸಿವಿಲï ನ್ಯಾಯಾಽÃಶ ಮರಿಯಪ್ಪ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಪಿ ಪೃಥ್ವಿಕ್ ಶಂಕರ್, ಯಿಮ್ಸ್ ಡಿನ್ ಡಾ.ಸಂದೀಪ್, ಎಸಿ ಶ್ರೀಧರ ಗೊಟೂರ, ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್, ಪರಿಸರ ನಿಯಂತ್ರಣ ಮಂಡಳಿ ಅಽಕಾರಿ ಇದ್ದರು.
ಶಹಾಪುರ, ಸುರಪುರ ಕೋರ್ಟ್ಗಳಲ್ಲಿ ವಿಸಿ ಮೂಲಕ ಕಾರ್ಯಗಾರದಲ್ಲಿ ನ್ಯಾಯಾಽÃಶರು, ವಕೀಲರು, ವ್ಯಾಪಾರಿಗಳು ಭಾಗವಹಿಸಿದ್ದರು. ಆರಂಭದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಹಾನಿಗಳ ಕುರಿತು ಮತ್ತು ಇದರ ಕಾಯ್ದೆ ಬಗ್ಗೆ ಸಾಕ್ಷಿ ಚಿತ್ರ ಪ್ರದರ್ಶಿಸಲಾಯಿತು.

ವಾರದಲ್ಲಿ ಹಂತ-ಹAತವಾಗಿ ಚಾಲನೆ

ನಗರ ಸೇರಿ ಜಿ¯್ಲÉಯ ಎಲ್ಲ ತರಹದ ವ್ಯಾಪಾರಿಗಳು ಗಾಬರಿಯಾಗುವ ಅಗತ್ಯವಿಲ್ಲ. ಕೂಡಲೇ ಅದನ್ನು ಬೀಡಿ ಎಂದು ಹೇಳುವುದಿಲ್ಲ. ಆದರೇ ನಿಷೇಧ ಆಗುವುದು ಗ್ಯಾರಂಟಿ ಎಂಬುವುದು ನೆನಪಿಟ್ಟುಕೊಳ್ಳಿ. ಇನ್ನೊಂದು ವಾರದಲ್ಲಿ ಇದಕ್ಕೆ ಹಂತ, ಹಂತದ ಚಾಲನೆ ನೀಡಲಾಗುವುದು, ಆರಂಭದಲ್ಲಿ ಇಡೀ ಜಿ¯್ಲÉಯಾದ್ಯಂತ ಆಟೋರಿಕ್ಷಾದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ಪ್ರಚಾರ ಮಾಡಲಾಗುವುದು. ನಂತರ ಎಲ್ಲೆಡೆ ಸಂಬAಧಪಟ್ಟವರಿAದ ದಾಳಿ, ದಂಡ ಹಾಕುವುದು ಇದು ಮೂರು ಸಲದ ಪ್ರಕ್ರಿಯೇ. ನಂತರ ಕೇಸ್ ಹಾಕಿ ದಂಡ ಮತ್ತು ಶಿಕ್ಷೆಗೆ ಗುರಿ ಮಾಡಲಾಗುವುದು. ಎಂದು ನ್ಯಾಯಾಽÃಶರಾದ ಮರುಳುಸಿz್ದÁರಾದ್ಯ ನಿಯಮಗಳನ್ನು ನ್ಯಾಯಾಽÃಶರು ವಿವರಿಸಿದರು.

ಪ್ಲಾಸ್ಟಿಕ್‌ಮುಕ್ತ ಜಿಲ್ಲಾ ಕೋರ್ಟ್

ಪ್ಲಾಸ್ಟಿಕ್ ಮಾರುವವರು, ಖರೀದಿಸುವವರು, ಉತ್ಪಾದಿಸುವವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಇದರ ಬಳಕೆಗೆ ಮುಕ್ತಿ ನೀಡಿ ಎಂದರು. ತೀರಾ ಅನಿವಾರ್ಯವಿದ್ದರೆ ಮಾತ್ರ ಇದರ ಬಳಕೆ ಇರಲಿ, ಅದು ಕೂಡ ನಿಯಮ ಮೀರಿರಬಾರದು ಎಂದರು. ಇದು ಪ್ರತಿಯೋಬ್ಬರೂ ತಮ್ಮ, ತಮ್ಮ ಸ್ಥಳದಲ್ಲಿ ಶುರು ಮಾಡಬೇಕು ಎಂದ ಅವರು, ಜಿ¯್ಲÁ ಕೋರ್ಟ್ ಸೇರಿ ಜಿ¯್ಲÉಯ ಎಲ್ಲ ಕೋರ್ಟ್ಗಳಲ್ಲಿ ಪ್ಲಾಸ್ಟಿಕ್‌ಮುಕ್ತ ವಾತವರಣ ನಿರ್ಮಿಸಿದ್ದೇವೆ. ಹೀಗೆ ಎಲ್ಲೆಡೆ ಆದಾಗ ಶೇ.೧೦೦ ಯಶಸ್ಸು ಆಗುತ್ತದೆ ಎಂದರು. ವಿಶೇಷವಾಗಿ ನಗರಸಭೆ ಅಽಕಾರಿ, ಸಿಬ್ಬಂದಿ ನಗರದಲ್ಲಿ ಇದಕ್ಕಾಗಿ ಕೆಲಸ ಮಾಡಬೇಕು ಎಂದರು.

ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಿ

ಉಪಯೋಗಕ್ಕೆ ಯೋಗ್ಯವಾದ ವಿಷಮುಕ್ತ ವಿವಿಧ ಪ್ಲಾಸ್ಟಿಕ್‌ಗಳನ್ನು ತಯಾರಿಸಿ ತಂದಿದ್ದ ರಾಯಚೂರಿನ ತತ್ವನಿಽ ಪ್ರಾವೆಟ್ ಲಿಮಿಟೆಡ್‌ನ ನಿರ್ದೇಶಕ ಹರಿಚೇತನ್ಯ ಅವರು ಈ ಬಗ್ಗೆ ವಿವರಿಸಿ, ಇದರ ಬಳಕೆ ಮಾಡಿದರೆ ಪರಿಸರ ಮತ್ತು ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ ಎಂದು ಹೇಳಿದರು. ಆಗ ನ್ಯಾಯಾಽÃಶರು, ಇದು ಜನರಿಗೆ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಿ ಎಂದರು. ಸಭೆಯಲ್ಲಿ ಭಾಗವಹಿಸಿದ್ದ ವ್ಯಾಪಾರಿಗಳು ಈ ಬಗ್ಗೆ ತಮಗಿದ್ದ ಸಂಸಯ ಕೇಳಿ ಪರಿಹಾರ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net