ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಣೆ ಮಾಡಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸುರಪುರ ಹಾಗೂ ವೀರಶೈವ ಲಿಂಗಾಯತ ರುದ್ರಭೂಮಿ ಸಹಯೋಗದಲ್ಲಿ ಕೆಂಭಾವಿ ಪಟ್ಟಣದ ರುದ್ರಭೂಮಿಯಲ್ಲಿ ಬುಧವಾರ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಶ್ರೀ ಚನ್ನಬಸವ ಶಿವಾಚಾರ್ಯರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ಎನ್.ಪಿ.ನಾಗೇಶ, ಮಹಾದೇವಿ ಸರ್ಜಾಪುರ, ವಿನೋದ ಬಾವಗೆ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಯೋಜನಾಽಕಾರಿ ನಾಗೇಶ ಸಲಹೆ
  • ಕೆಂಭಾವಿಯಲ್ಲಿ ಸಾಮಾಜಿಕ ಅರಣ್ಯೀಕರಣ ಕರ‍್ಯಕ್ರಮ
ಕೆಂಭಾವಿ: ಶುದ್ಧ ಆಮ್ಲಜನಕ ಬೇಕೆಂದರೆ ಪ್ರಯೊಬ್ಬರೂ ಸಸಿಗಳನ್ನು ನೆಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಽಕಾರಿ ಎನ್.ಪಿ.ನಾಗೇಶ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸುರಪುರ ಹಾಗೂ ವೀರಶೈವ ಲಿಂಗಾಯತ ರುದ್ರಭೂಮಿ ಸಹಯೋಗದಲ್ಲಿ ಪಟ್ಟಣದ ರುದ್ರಭೂಮಿಯಲ್ಲಿ ಬುಧವಾರ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯ ಉಸಿರಾಡಲು ಶುದ್ಧ ಆಮ್ಲಜನಕದ ಅಗತ್ಯವಿದೆ. ಹೀಗಾಗಿ ಪ್ರತಿಯೊಬ್ಬರೂ ಸಸಿಗಳನ್ನು ನೆಡುವ ಮೂಲಕ ಅದರ ಪೋಷಣೆ ಮಾಡಬೇಕು ಅಂದಾಗ ಮಾತ್ರ ನಮಗೆ ಶುದ್ಧ ಆಮ್ಲಜನಕ ಸಿಗಲು ಸಾಧ್ಯ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯ, ಮಗುವಿಗೊಂದು ಮರ ಶಾಲೆಗೊಂದು ವನ ಎಂಬ ಘೋಷಣೆ ವಾಕ್ಯದಂತೆ ಪಟ್ಟಣದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಹಸರೀಕರಣ ಮಾಡಬೇಕು. ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಒಳ್ಳೆಯ ಪರಿಸರವಿದ್ದರೆ ಮಾತ್ರ ನಾವು ಸುಖ-ಶಾಂತಿಯಿAದಿರಲು ಸಾಧ್ಯ ಎಂದರು.
ಜಿಲ್ಲಾ ಜನ ಜಾಗೃತಿ ಸದಸ್ಯ ಡಿ.ಸಿ.ಪಾಟೀಲ್, ವಲಯ ಮೇಲ್ವಿಚಾರಕಿ ಮಹಾದೇವಿ ಸಜÁðಪುರ, ತಾಲೂಕು ಕೃಷಿ ಮೇಲ್ವಿಚಾರಕ ವಿನೋದ ಬಾವಗೆ, ಸಂಗಣ್ಣ ತುಂಬಗಿ, ಉಮೇಶರೆಡ್ಡಿ, ಚಂದ್ರು ಮನಗೂಳಿ, ಮಲ್ಲೇಶಪ್ಪ ಕಾಚಾಪುರ, ಹಳ್ಳೆಪ್ಪ ಕವಾಲ್ದಾರ, ಶಿವು ತುಂಬಗಿ, ಶಿವು ಬಂಡೋಳಿ, ಸೋಮು ಕುಂಬಾರ, ಬಸವರಾಜ, ಶಶಿಕಲಾ, ಶ್ವೇತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net