ತಹಸೀಲ್ದಾರ್ ಎಚ್.ಜೆ.ಭರತ್ ಮಾತನಾಡಿ, ಪ್ರಚುರ ಪಡಿಸಲಾದ ಬಳಕೆದಾರರ ಮಾರ್ಗದರ್ಶಿಯ ಬಗ್ಗೆ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ಸರ್ಕಾರದ ಅಧೀನಕ್ಕೆ ಒಳಪಡುವ ಎಲ್ಲಾ ನಿಗಮ, ಮಂಡಳಿ ಇತ್ಯಾದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿ ಸೇರಿನಾಗರಿಕರು, ಗಣತಿದಾರರಿಗೆ ಅರಿವು ಮೂಡಿಸುವಂತೆ ನಾಗರಿಕರು, ಉದ್ಯೋಗಿಗಳು, ಗಣತಿದಾರರಿಗೆ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಏಪ್ರಿಲ್ 1 ರಿಂದ 15 ರವರೆಗೆ ಒಟ್ಟು 15 ದಿನಗಳ ಕಾಲ ಕೆಜಿಎಫ್ ತಾಲೂಕಿನಲ್ಲಿ ನಡೆಯಲಿರುವ ಮನೆಗಳ ಪಟ್ಟಿ ಮತ್ತು ಮನೆ ಗಣತಿಯ ಸ್ವಯಂ-ಗಣತಿ ಯಶಸ್ವಿಗೊಳಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.