ಪ್ರತಿಯೊಬ್ಬರಿಗೂ ಯೋಜನೆ ಮಾಹಿತಿ ಅಗತ್ಯ

ಇಂಡಿ ತಾಲೂಕಿನ ಹಿರೇಬೆವನೂರ ಗ್ರಾಮ ಪಂಚಾಯಿತಿಯಲ್ಲಿ ವಿಬಿ-ಜಿ ರಾಮ್-ಜಿ ಯೋಜನೆಯ ಐಇಸಿ ಚಟುವಟಿಕೆ ಅಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ಕಾಯಕ ಬಂಧುಗಳಿಗೆ ಮತ್ತು ಅಕುಶಲ ಕೂಲಿಕಾರರಿಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು. ಸಂಯೋಜಕ ರಾಮಗೌಡ ಸರಬಡಗಿ, ಸಂತೋಷ ಹಿರೇಮಠ, ಸುಪ್ರಿಯಾ ಪಾತಾಳಿ ಇತರರಿದ್ದರು.
ಇಂಡಿ ತಾಲೂಕಿನ ಹಿರೇಬೆವನೂರ ಗ್ರಾಮ ಪಂಚಾಯಿತಿಯಲ್ಲಿ ವಿಬಿ-ಜಿ ರಾಮ್-ಜಿ ಯೋಜನೆಯ ಐಇಸಿ ಚಟುವಟಿಕೆ ಅಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ಕಾಯಕ ಬಂಧುಗಳಿಗೆ ಮತ್ತು ಅಕುಶಲ ಕೂಲಿಕಾರರಿಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು. ಸಂಯೋಜಕ ರಾಮಗೌಡ ಸರಬಡಗಿ, ಸಂತೋಷ ಹಿರೇಮಠ, ಸುಪ್ರಿಯಾ ಪಾತಾಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಯೋಜಕ ರಾಮಗೌಡ ಸರಬಡಗಿ ಮಾಹಿತಿ
  • ವಿಬಿ-ಜಿ ರಾಮ್-ಜಿ ಜಾಗೃತಿ ಅಭಿಯಾನ
  • ಕರಪತ್ರ ವಿತರಣೆ
ಇಂಡಿ: ತಾಲೂಕಿನ ಹಿರೇಬೆವನೂರ ಗ್ರಾಮ ಪಂಚಾಯಿತಿಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಾರ್ ರೋಜಗಾರ್ ಅಜೀವಿಕಾ ಮಿಷನ್(ಗ್ರಾಮೀಣ) ಕಾಯ್ದೆ 2025 ವಿಬಿ-ಜಿ ರಾಮ್-ಜಿ ಯೋಜನೆಯ ಐಇಸಿ ಚಟುವಟಿಕೆ ಅಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ಕಾಯಕ ಬಂಧುಗಳಿಗೆ ಮತ್ತು ಅಕುಶಲ ಕೂಲಿಕಾರರಿಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ತಾಲೂಕು ಮಾಹಿತಿ ಶಿಕ್ಷಣ ಸಂವಹನ ತಾಲೂಕು ಸಂಯೋಜಕ ರಾಮಗೌಡ ಸರಬಡಗಿ ಮಾತನಾಡಿ, ಜು. 1ರಿಂದ ನರೇಗಾ ಯೋಜನೆ ಬದಲಾಗಿ ವಿಕಸಿತ ಭಾರತ ಗ್ಯಾರಂಟಿ ಾರ್ ರೋಜಗಾರ್ ಅ್ಯಂಡ್ ಅಜೀವಿಕ ಮಿಷನ್ ಗ್ರಾಮೀಣ ಕಾಯ್ದೆ 2025 ವಿಬಿ-ಜಿ ರಾಮ್-ಜಿ ಯೋಜನೆ ಜಾರಿಗೆ ಬಂದಿರುವ ಕುರಿತು ತಿಳಿಸಲಾಯಿತು.
ಹೊಸ ಕೂಲಿ ದರ 370 ರೂ. ರಿಂದ 382 ರೂ.ಗೆ ಹೆಚ್ಚಿಸಲಾಗಿರುವ ಕುರಿತು ಹಾಗೂ ಮಾನವ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಲಾಗಿರುವ ಬಗ್ಗೆ ಕರ ಪತ್ರ ಹಂಚಿಕೆ ಮಾಡಿ ಕೂಲಿಕಾರರಿಗೆ ಯೋಜನೆಯ ಮಾಹಿತಿ ತಿಳಿಸಿ ಕೆಲಸಕ್ಕೆ ಬರುವಂತೆ ಪ್ರೇರೇಪಿಸಲಾಯಿತು.
ಗ್ರಾಮೀಣ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕುಟುಂಬಗಳಿಗೆ ವಲಸೆ ಹೋಗುವ ಪರಿಸ್ಥಿತಿ ಕಡಿಮೆ ಮಾಡಲು ಸಹಕಾರಿಯಾಗಿದೆ.
ನಿರಂತರ ಕೂಲಿ ಉದ್ಯೋಗ ದೊರೆಯುವುದರಿಂದ ಕುಟುಂಬಗಳ ಆದಾಯ ಹೆಚ್ಚಳವಾಗಿ, ಜೀವನ ನಿರ್ವಹಣೆಗೆ ಆರ್ಥಿಕ ಭದ್ರತೆ ಒದಗುತ್ತದೆ.
ವಿಬಿ-ಜಿ ರಾಮ್-ಜಿ ಯೋಜನೆ ಗ್ರಾಮೀಣ ಜನರಿಗೆ ಉದ್ಯೋಗ ಭದ್ರತೆ, ಆದಾಯ ಹೆಚ್ಚಳ, ಕೃಷಿ ಅಭಿವೃದ್ಧಿ, ಮೂಲ ಸೌಕರ್ಯ ಸುಧಾರಣೆ ಹಾಗೂ ಶಾಶ್ವತ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸುವ ಮೂಲಕ ಗ್ರಾಮೀಣ ಜೀವನಮಟ್ಟ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ವಿಬಿ-ಜಿ ರಾಮ್-ಜಿ ಯೋಜನೆಯ ಉದ್ದೇಶ ಕೇವಲ ಉದ್ಯೋಗ ಒದಗಿಸುವುದಕ್ಕೆ ಸೀಮಿತವಾಗದೆ, ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ಅಭಿವೃದ್ಧಿಗೆ ಪೂರಕವಾದ ಆಸ್ತಿಗಳ ನಿರ್ಮಾಣ ಹಾಗೂ ಗ್ರಾಮೀಣ ಜೀವನಮಟ್ಟ ಸುಧಾರಿಸುವುದಾಗಿದೆ ಎಂದರು.
ನಂತರ ವಿಬಿ-ಜಿ ರಾಮ್-ಜಿ ಯೋಜನೆ ಮಾಹಿತಿಯುಳ್ಳ ಜಿಂಗಲ್ಸ್‌ಗಳನ್ನು ಸ್ವಚ್ಛ ವಾಹಿನಿ ವಾಹನ ಮೂಲಕ ಪ್ರಚಾರ ಪಡಿಸಲಾಯಿತು ಹಾಗೂ ಯೋಜನೆಯ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಲಾಯಿತು.
ಡಿಇಒ ಸಂತೋಷ ಹಿರೇಮಠ, ಸುಪ್ರಿಯಾ ಪಾತಾಳಿ, ಮದರಸಾಬ ಚೌಧರಿ, ಅವಿನಾಶ ಚವಾಣ್, ಗ್ರಾಮಸ್ಥರು, ಸಿಬ್ಬಂದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net