ದೋರನಹಳ್ಳಿಯಲ್ಲಿ ಎಸ್‌ಐಆರ್‌ನ ಎನ್ಮುರೇಷನ್ -Áರ್ಮ್ ಭರ್ತಿ ಮಾಡುವ ಕುರಿತು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್ ನೇತೃತ್ವದಲ್ಲಿ ಪಟ್ಟಣದ ಮುಖಂಡರು ಹಾಗೂ ಬಿಎಲ್‌ಒಗಳ ಸಭೆ ನಡೆಯಿತು. ನಿಂಗಣ್ಣಗೌಡ ಪೊಲೀಸ್ ಪಾಟೀಲ್, ಭಗವಂತ್ರಾಯ ಮಲಗೊಂಡ, ಕಲ್ಲಪ್ಪ ಖಾನಾಪುರ, ಗೊಲ್ಲಾಳಪ್ಪ ಗೋಲಗೇರಿ, ದೊಡ್ಡಪ್ಪ ದೇಸಾಯಿ, ನಿಂಗಣ್ಣ ಮಲಗೊಂಡ, ಖಾದರ ಜಮಾದಾರ, ಸಾಯಿಬಣ್ಣ ಹಲಗಿ, ಬಸವರಾಜ ಅನವಾರ, ಸುಂದರರಾಜ ಇತರರಿದ್ದರು.
ದೋರನಹಳ್ಳಿ :ಭಾರತ ಚುನಾವಣಾ ಆಯೋಗ ಮತದಾರರ ಗಣತಿ ನಡೆಸಿದ್ದು, ಅದರಲ್ಲಿ ಪ್ರತಿಯೊಬ್ಬರೂ ಮತದಾರರು ತಪ್ಪದೆ ಭಾಗವಹಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್ ಹೇಳಿದರು.
ಪಟ್ಟಣದ ಹಿರೇಅಗಸಿಯ ಹನುಮಾನ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆ ಹಮ್ಮಿಕೊಂಡ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಎಲ್‌ಒಗಳು ಕೇಳುವ ಅಗತ್ಯ ದಾಖಲೆ ನೀಡುವ ಮೂಲಕ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಭದ್ರಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬಿಎಲ್‌ಒಗಳು ಮನೆ ಮನೆಗೆ ಬಂದು ಎನ್ಮುರೇಷನ್ -Áರ್ಮ್ ನೀಡಿದನ್ನು ಭರ್ತಿ ಮಾಡಿ ನಂತರ ಅವರಿಗೆ ಹಿಂತಿರುಗಿಸಬೇಕು. ಈ ರೀತಿ ಮಾಡುವುದರಿಂದ ಎರಡು ಕಡೆ ಮತದಾನ ಮಾಡುವುದು ನಕಲಿ ಮತದಾನ ಮತ್ತು ನಮ್ಮ ದೇಶದ ಪೌರತ್ವ ಪಡೆಯದೇ ಅಕ್ರಮವಾಗಿ ಬಂದು ನೆಲಸಿರುವರು ಮತದಾನ ಮಾಡುವುದಕ್ಕೆ ಕಡಿವಾಣ ಬೀಳಲಿದೆ. ಅಲ್ಲದೆ ಪ್ರಜÁಪ್ರಭುತ್ವವನ್ನು ಉಳಿಸುವುದರ ಜತೆಗೆ ದೇಶದ ಸುಭದ್ರತೆಯ ವಿಚಾರದೊಂದಿಗೆ ಭಾರತೀಯ ಚುನಾವಣಾ ಆಯೋಗವು ಈ ಮತದಾರದ ಗಣತಿ ಹಾಗೂ ಪರಿಷ್ಕರಣೆ ಆರಂಭಿಸಿದ್ದು ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಮತದಾರರ ಮನೆಗೆ ಬಿಎಲ್‌ಓಗಳು ಬಂದಾಗ ಅವರಿಗೆ ಉತ್ತಮ ಸಹಕಾರ, ಅಗತ್ಯ ಮಾಹಿತಿ ನೀಡಬೇಕು. ಅಲ್ಲದೆ ಎಲ್ಲಿಯಾದರೂ ಗೊಂದಲವಾದರೆ ತಕ್ಷಣ ನಮ್ಮ ಮುಖಂಡರು, ಕಾರ್ಯಕರ್ತರು ನೆರವಿಗೆ ಧಾವಿಸಿ. ಕೆಲವೊಮ್ಮೆ ಮತದಾರರು ತಮ್ಮ ಹೆಸರನ್ನು ತಿದ್ದುಪಡಿ, ಬದಲಾವಣೆ, ಊರು ಬದಲಾವಣೆ ಸೇರಿ ಕೆಲ ಮಾರ್ಪಾಡು ಆಗಿರುತ್ತವೆ. ಅವುಗಳಿಗೆ ಸೂಕ್ತ ದಾಖಲೆ ಒದಗಿಸಿ ನಿಮ್ಮ ಮತದ ಹಕ್ಕು ಉಳಿಸಿಕೊಂಡಾಗ ಮಾತ್ರ ನೈಜ ಪ್ರಜಾಪ್ರಭುತ್ವ ಗೆಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಈ ವೇಳೆ ಗೋವಿಂದಪ್ಪ ಕೊಂಚೆಟ್ಟಿ, ಮಲ್ಲಿನಾಥ ಮಲಗೊಂಡ, ಪ್ರಭುರಾಯ ಮಲಗೊಂಡ, ಮಲ್ಕಪ್ಪ ದಿಡ್ಡಿಮನಿ, ವೆಂಕಟೇಶ ಜೆ. ಕಶೇಟ್ಟಿ, ಮಂಜುನಾಥ ಕಂಚಗಾರ, ಭೀಮ ಆಂದೇಲಿ, ಅವಿನಾಶ ಪೋಲಂಪಲ್ಲಿ, ನಾನಾಗೌಡ ಮಲಗೊಂಡ, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್, ಶಿವಶಂಕರ ನಟೇಕಾರ ಇತರರಿದ್ದರು.