ಪ್ಲಾಸ್ಟಿಕ್‌ಮುಕ್ತ ಸಮಾಜಕ್ಕೆ ಎಲ್ಲರೂ ಕೈಜೋಡಿಸಿ

ಪ್ಲಾಸ್ಟಿಕ್‌ಮುಕ್ತ ಜಿ¯್ಲೆಗಾಗಿ ಯಾದಗಿರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜÁಗೃತಿ ಅಭಿಯಾನಕ್ಕೆ ಜಿ¯್ಲÁ ಪ್ರಧಾನ ಮತ್ತು ಸತ್ರ ನ್ಯಾಯಾಽÃಶ ಮರುಳಸಿz್ದÁರಾಧ್ಯ ಚಾಲನೆ ನೀಡಿ ಮಾತನಾಡಿದರು. ಸಿವಿಲï ನ್ಯಾಯಾಽÃಶ ಮರಿಯಪ್ಪ, ಈರಣ್ಣ ಬಡಿಗೇರ, ಮಲ್ಲಿಕಾರ್ಜುನ ಶಿರಗೋಳ ಇತರರಿದ್ದರು.
ಪ್ಲಾಸ್ಟಿಕ್‌ಮುಕ್ತ ಜಿ¯್ಲೆಗಾಗಿ ಯಾದಗಿರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜÁಗೃತಿ ಅಭಿಯಾನಕ್ಕೆ ಜಿ¯್ಲÁ ಪ್ರಧಾನ ಮತ್ತು ಸತ್ರ ನ್ಯಾಯಾಽÃಶ ಮರುಳಸಿz್ದÁರಾಧ್ಯ ಚಾಲನೆ ನೀಡಿ ಮಾತನಾಡಿದರು. ಸಿವಿಲï ನ್ಯಾಯಾಽÃಶ ಮರಿಯಪ್ಪ, ಈರಣ್ಣ ಬಡಿಗೇರ, ಮಲ್ಲಿಕಾರ್ಜುನ ಶಿರಗೋಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಽÃಶ ಮರುಳಸಿz್ದÁರಾಧ್ಯ ಕರೆ
  • ಗೃಹರಕ್ಷಕ ದಳದಿಂದ ಜÁಗೃತಿ ಜÁಥಾ
ಯಾದಗಿರಿ : ಸಕಲ ಜೀವರಾಶಿಗಳಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಲ್ಲಿಸುವ ಮೂಲಕ ಉತ್ತಮ ಆರೋಗ್ಯದೊಂದಿಗೆ ಪ್ಲಾಸ್ಟಿಕ್‌ಮುಕ್ತ ಸಮಾಜ ಕಟ್ಟೋಣ ಎಂದು ಜಿ¯್ಲÁ ಪ್ರಧಾನ ಮತ್ತು ಸತ್ರ ನ್ಯಾಯಾಽÃಶ ಮರುಳಸಿz್ದÁರಾಧ್ಯ ಎಚ್.ಜೆ. ಹೇಳಿದರು.
ಜಿ¯್ಲÁ ಕಾನೂನು ಸೇವೆಗಳ ಪ್ರಾಽಕಾರ, ಜಿ¯್ಲÁಡಳಿತ, ಜಿಲ್ಲಾ ಪಂಚಾಯಿತಿ, ಜಿ¯್ಲÁ ಪೊಲೀಸ್ ಇಲಾಖೆ, ಜಿ¯್ಲÁ ನ್ಯಾಯವಾದಿಗಳ ಸಂಘ, ನಗರಸಭೆ, ಶಿಕ್ಷಣ ಇಲಾಖೆ, ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಶಶಿ ಚಾರಿಟೇಬಲï ಆ್ಯಂಡ್ ಎಜುಕೇಷನಲï ಟ್ರ¸್ಟï, ವಿಜಯ ವಿಠಲ ಸೇವಾ ಸಂಸ್ಥೆ, ಡಾನ್ ಬಾಸ್ಕೋ ಇತರ ಸಂಘ ಸಂಸ್ಥೆಗಳ ಸಹಯೋಗದಡಿ ನಗರದ ಗೃಹರಕ್ಷಕ ದಳ ಕಚೇರಿ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್‌ಮುಕ್ತ ಯಾದಗಿರಿ ಜಿಲ್ಲೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಬಳಕೆ ನಿಷೇಧ ಕಾಯ್ದೆ ಜÁರಿಯಾಗಿ ಹತ್ತು ವರ್ಷವಾಗಿದೆ. ಕೇಂದ್ರದ ಪರಿಸರ ಇಲಾಖೆ ನಾಲ್ಕು ದಶಕ ಹಿಂದೆಯೇ ಪ್ಲಾಸ್ಟಿಕ್ ಬಳಕೆ ನಿಷೇಽಸಿದ್ದರೂ ಇದುವರೆಗೆ ನಿಲ್ಲದಿರುವುದೇ ಪರಿಸರ ನಾಶಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಒಬ್ಬರಿಂದ ಆಗುವ ಕೆಲಸವಲ್ಲ. ಪ್ರತಿಯೊಬ್ಬರೂ ಪ್ಲಾಸ್ಟಿಕ್‌ಮುಕ್ತ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜು.೧೬ರಂದು ಜಿ¯್ಲÁ ನ್ಯಾಯಾಲಯದಲ್ಲಿ ಜಿ¯್ಲÁ ಕಾನೂನು ಸೇವಾ ಪ್ರಾಽಕಾರ ವಿವಿಧ ಇಲಾಖೆ ಅಽಕಾರಿ, ವ್ಯಾಪಾಸ್ಥರಿಗಾಗಿ ಕಾರ್ಯಾಗಾರ ನಡೆಸಿ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದರು.
ಸೇವಾ ಪ್ರಾಽಕಾರ ಜಿ¯್ಲÁ ಸದಸ್ಯ ಕಾರ್ಯದರ್ಶಿ ಆಗಿರುವ ಹಿರಿಯ ಸಿವಿಲï ನ್ಯಾಯಾಽÃಶ ಮರಿಯಪ್ಪ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ವಿವಿಧ ರೀತಿಯ ಪರಿಣಾಮ ಬೀರಲಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ಪ್ಲಾಸ್ಟಿಕ್‌ಮುಕ್ತ ಜಿಲ್ಲೆಗೆ ನಗರಸಭೆ, ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳ ಮೂಲಕ ಜÁಗೃತಿ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.
ಗೃಹರಕ್ಷಕ ದಳ ಕರ್ಮಾಡೆಂಟ್ ಈರಣ್ಣ ಬಡಿಗೇರ, ಸಹಾಯಕ ಪರಿಸರ ಅಽಕಾರಿ ಶಕುಂತಲಾ, ವಿಜಯ ವಿಠಲï ಸಂಸ್ಥೆ ಅಧ್ಯಕ್ಷ ವಿಠಲï ಕುಲಕರ್ಣಿ, ಶಶಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಶಿರಗೋಳ, ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ಶರಣಮ್ಮ ಇತರರಿದ್ದರು. ಗೃಹರಕ್ಷಕ ದಳ ಕಚೇರಿ ಆವರಣದಿಂದ ಶುರುವಾದ ಜಾಥಾ ಶಾಸಿö ಚೌಕ್, ಹೊಸ ಮತ್ತು ಹಳೇ ಬಸ್ ನಿಲ್ದಾಣ, ರೈಲು ನಿಲ್ದಾಣ, ಸುಭಾಷ್ ಚೌಕ್ ಮಾರ್ಗವಾಗಿ ಹಳೇ ಕೋರ್ಟ್ವರೆಗೆ ಸಾಗಿತು. ಜಾಥಾದುದ್ದಕ್ಕೂ ನ್ಯಾಯಾಽÃಶರಾಧ ಮರುಳಸಿz್ದÁರಾಧ್ಯ, ಮರಿಯಪ್ಪ ಹೆಜ್ಜೆ ಹಾಕುವ ಮೂಲಕ ಗಮನಸೆಳೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net