'ಕರ್ನಾಟಕಕ್ಕೆ ಶಾಪವಾದ ಕಾಂಗ್ರೆಸ್​, ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೂ ಗೊಂದಲ ಮುಗಿಯಲ್ಲ': BY Vijayendra

BY Vijayendra statement on Siddaramaiah resignation
BY Vijayendra statement on Siddaramaiah resignation
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ದರಾಮಯ್ಯ‌ ಅವರು ರಾಜ್ಯಪಾಲರ ಸಮಯ ಕೇಳಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದ ವಿಜಯೇಂದ್ರ
  • ಮುಂದೇ ಕಾಂಗ್ರೆಸ್​ನಲ್ಲಿ ಯಾರೇ ಸಿಎಂ ಆದ್ರೂ ಸುಧಾರಣೆ ತರುತ್ತಾರೆ ಎನ್ನುವ ನಂಬಿಕೆ ಇಲ್ಲ
  • ಕಾಂಗ್ರೆಸ್ ಆಂತರಿಕ ಕಚ್ಚಾಟದಿಂದ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ ಎಂದ ಬಿವೈವಿ
ಹೊಸಪೇಟೆ: ಕಾಂಗ್ರೆಸ್​​ ಸರ್ಕಾರದ ಆತಂರಿಕ ಕಚ್ಚಾಟದಿಂದಾಗಿ ಕರ್ನಾಟಕ ರಾಜ್ಯ ಆರ್ಥಿಕವಾಗಿ, ಆಡಳಿತಾತ್ಮಕವಾಗಿ ಸಂಪೂರ್ಣ ನೆಲಕಚ್ಚಿದೆ. ಆರ್ಥಿಕ ದಿವಾಳಿಯತ್ತ ರಾಜ್ಯ ಸಾಗುತ್ತಿದೆ.ಭ್ರಷ್ಟಾಚಾರ ತಾಂಡವವಾಡ್ತಿರೋದನ್ನ ನೋಡಿ ಜನರು ಬೇಸತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಆದ್ರು ಒಳ್ಳೆಯ ಆಡಳಿತ ನಡೆಸುತ್ತಾರೆ ಎನ್ನೋದು ನಂಬಿಕೆ ಉಳಿದಿಲ್ಲ ಎಂದು ಹೊಸಪೇಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra statement) ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಗೊಂದಲ ಹಾಗೂ ರಾಜ್ಯಪಾಲರ ದೆಹಲಿ ಪ್ರವಾಸದ ಕುರಿತು ಹಲವು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ಪರ್ಮಿಶನ್​ ಕೇಳಿದ್ದಾರೋ ಇಲ್ಲವೋ ಗೊತ್ತಿಲ್ಲ

ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಗೊಂದಲದ ಮಧ್ಯೆ ರಾಜ್ಯಪಾಲ ಥಾವರ್​ ಚಂದ್​ ಗೆಹಲೋಟ್  ಅವರ ಪತ್ನಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಕಾರಣ, ತುರ್ತಾಗಿ ಇಂದೋರ್​​ಗೆ ತೆರಳಿದ್ದಾರೆ.  ಇದು ಕುತೂಹಲ ಮೂಡಿಸಿದೆ ಈ ಬಗ್ಗೆ ಮಾತನಾಡಿದ ವಿಜಯೇಂದ್ರ ಅವರು, ಮುಖ್ಯಮಂತ್ರಿ ಅವರು ರಾಜ್ಯಪಾಲರ ಭೇಟಿಗೆ ಅನುಮತಿ ಕೇಳಿದ್ದಾರೆ ಎನ್ನುವುದಕ್ಕೆ ಅಧಿಕೃತ ಮಾಹಿತಿ ಇಲ್ಲ. ಟಿಪಿಯಲ್ಲಿ ಇಲ್ಲದೇ ಇರೋದರಿಂದ ಸಿದ್ದರಾಮಯ್ಯ‌ ಅವರು ರಾಜ್ಯಪಾಲರ ಸಮಯ ಕೇಳಿದ್ದಾರೋ ಇಲ್ಲವೋ ಅದು ಗೊತ್ತಿಲ್ಲ. ಕಳೆದ ಎರಡ್ಮೂರು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಮುಂದೇನಾಗುತ್ತದೆ ಎಂದು ಊಹಿಸಲು ಯಾರಿಗೂ ಸಾಧ್ಯವಿಲ್ಲ. ನಾಳೆ ಸಿಎಂ ರಾಜೀನಾಮೆ ಕೊಟ್ಟ ನಂತರವೂ ಈ ಆಂತರಿಕ ಗೊಂದಲಗಳು ಮುಂದುವರೆಯಲಿವೆ ಎಂದು ಹೇಳಿದರು. 

ಸುಧಾರಣೆ ತರ್ತಾರೆ ಎನ್ನುವ ನಂಬಿಕೆ ಇಲ್ಲ

ಕಾಂಗ್ರೆಸ್​ನ ಆಂತರಿಕ ವಿಚಾರ ಅಷ್ಟು ಬೇಗ ಬಗೆಹರಿಯೋ ಹಾಗೆ ಕಾಣಿಸ್ತಿಲ್ಲ. ವರ್ಷದಿಂದ ಕಾಂಗ್ರೆಸ್ ಆಂತರಿಕ ಕಚ್ಚಾಟದಿಂದ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಆಡಳಿತ ಪಕ್ಷದ ಆಂತರಿಕ ಕಚ್ಚಾಟದ ಪರಿಣಾಮ ಆರ್ಥಿಕ ದಿವಾಳಿಯತ್ತ ರಾಜ್ಯ ಸಾಗ್ತಿದೆ. ಗ್ರಾಮೀಣ ಭಾಗದಲ್ಲಿ ರಸಗೊಬ್ಬರ ಸಮಸ್ಯೆಯಾಗ್ತಿದು, ರೈತರ ಗೋಳನ್ನ ಕೇಳುವವರೇ ಇಲ್ಲದಂತಾಗಿದೆ. ಉಸ್ತುವಾರಿ ಸಚಿವರೆಲ್ಲರೂ ಬೆಂಗಳೂರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ರಾಜ್ಯದ ಜನರ ಪರವಾಗಿ ಕಾಂಗ್ರೆಸ್ ಸರ್ಕಾರ ಶಾಪವಾಗಿ ಪರಿಣಮಿಸಿದೆ. ಮುಂದಿನ ಮುಖ್ಯಮಂತ್ರಿ ಯಾರೇ ಆದರೂ ಸಹ ಒಳ್ಳೆಯ ಆಡಳಿತ ನಡೆಸುತ್ತಾರೆ ಎನ್ನುವ ನಂಬಿಕೆ ಜನರಿಗಿಲ್ಲ ಎಂದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net