ಮೇಷ: ಅನ್ಯರಿಗೆ ಉಪಕಾರ ಮಾಡುವಿರಿ. ಹಿರಿಯರಿಂದ ಹಿತನುಡಿ. ಉದ್ಯೋಗಸ್ಥ ಸ್ತ್ರೀಯರಿಗೆ ಶುಭ ಫಲ. ಸುಖ ಭೋಜನ ಪ್ರಾಪ್ತಿ. ಶುಭಸಂಖ್ಯೆ: 6.ವೃಷಭ: ಹಣಕಾಸು ವ್ಯವಹಾರಗಳಲ್ಲಿ ಅಭಿವೃದ್ಧಿಯಾಗಲಿದೆ. ಸ್ವಯಂಕೃತ ಅಪರಾಧಗಳಿಂದ ನಷ್ಟ. ಕೋರ್ಟ್ ಕಾರ್ಯಗಳಲ್ಲಿ ನಿಧಾನಗತಿ. ಶುಭಸಂಖ್ಯೆ:4.ಮಿಥುನ: ಬುದ್ಧಿಶಕ್ತಿಯಿಂದ ಕಾರ್ಯ ಸಾಧನೆ ಮಾಡುವಿರಿ. ಹೊಸ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಭೂಮಿಯ ವಿಕ್ರಯದಿಂದ ಲಾಭ. ಶುಭಸಂಖ್ಯೆ: 9.ಕಟಕ: ಮಕ್ಕಳ ಭಾವನೆಗಳಿಗೆ ಸ್ಪಂದನೆ. ಸ್ಥಿರಾಸ್ತಿ ಖರೀದಿ ಯೋಗ. ಧೈರ್ಯದಿಂದ ಕಾರ್ಯಸಿದ್ಧಿ. ನ್ಯಾಯಾಲಯದ ಕೆಲಸದಲ್ಲಿ ಮುನ್ನಡೆ. ಶುಭಸಂಖ್ಯೆ:3 .ಸಿಂಹ: ವಿದೇಶದಲ್ಲಿರುವ ಮಗನ ಮನೆಗೆ ಪ್ರಯಾಣ. ಕಲಾವಿದರಿಗೆ ವಿಶೇಷ ಅವಕಾಶಗಳು ಲಭಿಸುತ್ತವೆ. ಹಣಕಾಸು ಪರಿಸ್ಥಿತಿ ಉತ್ತಮ. ಶುಭಸಂಖ್ಯೆ:2.ಕನ್ಯಾ: ವಿಶೇಷ ಜವಾಬ್ದಾರಿ ನಿರ್ವಹಿಸಲು ದೂರ ಪ್ರಯಾಣ. ಮಹಿಳೆಯರಿಗೆ ವಸ್ತ್ರಲಾಭ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ:1.ತುಲಾ: ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ. ದಾಂಪತ್ಯದಲ್ಲಿ ಇದ್ದ ಮನಸ್ತಾಪ ನಿವಾರಣೆ. ಆಲಸ್ಯ ಮನೋಭಾವದಿಂದ ಅವಕಾಶ ತಪ್ಪುವುದು. ಶುಭಸಂಖ್ಯೆ:2.ವೃಶ್ಚಿಕ: ದಾಯಾದಿಗಳಿಂದ ಆರ್ಥಿಕ ಸಹಾಯ. ಸಾಲ ತೀರಿಸಲು ಸ್ನೇಹಿತರಿಂದ ಸಹಾಯ. ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ ತೋರಿಸುವಿರಿ. ಶುಭಸಂಖ್ಯೆ:4 .ಧನಸ್ಸು: ಶುಭ ಸಮಾರಂಭದ ಸಂಭ್ರಮ. ಸಮುದ್ರ ಉತ್ಪನ್ನ ರಫ್ತಿನಲ್ಲಿ ಲಾಭ. ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿ. ಶುಭಸಂಖ್ಯೆ:8.ಮಕರ: ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅಧಿಕ ಲಾಭ. ಕಿರುಚಿತ್ರ ನಿರ್ದೇಶಕರಿಗೆ ಧನ ಲಾಭ. ಸಹಕಾರಿ ಕ್ಷೇತ್ರದಲ್ಲಿ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ:8.ಕುಂಭ: ಗಣ್ಯರ ಭೇಟಿ. ಭದ್ರತಾ ವಿಭಾಗದಲ್ಲಿ ಉದ್ಯೋಗ. ಹೃದಯ ರೋಗ ಶಮನ. ಕುಲದೇವರ ಪ್ರಾರ್ಥನೆಯಿಂದ ಅನುಕೂಲ. ಶುಭಸಂಖ್ಯೆ:2 .ಮೀನ: ಹೊಸ ಯೋಜನೆಗಳಿಂದ ಆದಾಯ ವೃದ್ಧಿ. ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಅಧಿಕಾರ ಪ್ರಾಪ್ತಿ, ಐಟಿ ಉದ್ಯೋಗಿಗಳಿಗೆ ವರ್ಗ. ಶುಭಸಂಖ್ಯೆ:6