ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ

Nitya Bhavishya
Nitya Bhavishya
Published on
ಮೇಷ: ವಿದ್ಯಾರ್ಥಿಗಳಿಗೆ ಆತಂಕ ದೂರವಾಗಲಿದೆ. ಉದ್ಯೋಗಕ್ಕಾಗಿ ದೂರ ಪ್ರಯಾಣ ಮಾಡುವಿರಿ. ಸಿಹಿ ತಿಂಡಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 5
ವೃಷಭ: ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಸಾಲಗಾರರ ಕಿರಿಕಿರಿಗೆ ಪರಿಹಾರ ಸಿಗಲಿದೆ. ಶುಭಸಂಖ್ಯೆ:1
ಮಿಥುನ: ಶಿಕ್ಷಕ ವೃತ್ತಿಯವರಿಗೆ ಶುಭದಾಯಕ ದಿನ. ಮಹಿಳೆಯರು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತೀರಿ. ದುಬಾರಿ ವಸ್ತುಗಳ ಖರೀದಿ. ಶುಭಸಂಖ್ಯೆ: 8
ಕಟಕ: ಕುಟುಂಬದ ಆದಾಯ ವೃದ್ಧಿ. ವಿದ್ಯಾರ್ಥಿಗಳು ಏಕಾಗ್ರತೆ ಬೆಳೆಸಿಕೊಳ್ಳಿ. ಆಸ್ತಿ ಖರೀದಿಸಲು ಸಕಾಲವಲ್ಲ. ದಿನಸಿ ವ್ಯಾಪಾರದಲ್ಲಿ ಲಾಭ.ಶುಭಸಂಖ್ಯೆ: 2
ಸಿಂಹ: ಶುಭಕಾರ್ಯಕ್ಕೆ ಬಂಧುಗಳಿಂದ ಆರ್ಥಿಕ ಸಹಾಯ. ಮಾತಿನಲ್ಲಿ ಅಸಹನೆ ತೋರಿಸದಿರಿ. ಸಿದ್ಧ ಉಡುಪುಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 9
ಕನ್ಯಾ: ತಲೆನೋವಿನ ಸಮಸ್ಯೆ ಕಾಡುವುದು. ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಲಭ್ಯ. ಕಚೇರಿಯಲ್ಲಿ ಸಂತಸದಿಂದ ಇರಲು ಪ್ರಯತ್ನಿಸಿ. ಶುಭಸಂಖ್ಯೆ:7
ತುಲಾ: ವ್ಯಾಪಾರದಲ್ಲಿ ಮುನ್ನಡೆಯಾಗುವುದು. ಹೈನುಗಾರಿಕೆ ಯಲ್ಲಿ ಹೆಚ್ಚಿನ ಆದಾಯ ಬರಲಿದೆ. ಮಂಗಳ ಕಾರ್ಯಕ್ಕೆ ಸಿದ್ಧತೆ ನಡೆಸುವಿರಿ. ಶುಭಸಂಖ್ಯೆ: 3
ವೃಶ್ಚಿಕ: ಕಾನೂನು ವ್ಯಾಜ್ಯಗಳಲ್ಲಿ ಜಯ. ಆಮದು ರಫ್ತು ವ್ಯವಹಾರದಲ್ಲಿ ಅನುಕೂಲ. ಹೋಟೆಲ್ ವ್ಯವಹಾರದ ಆರ್ಥಿಕತೆಯಲ್ಲಿ ಸಂಕಷ್ಟ. ಶುಭಸಂಖ್ಯೆ:5
ಧನಸ್ಸು: ಸ್ತ್ರೀಯರಿಗೆ ಅಮೂಲ್ಯ ವಸ್ತುಗಳ ಪ್ರಾಪ್ತಿ. ತಂದೆಯ ಆರೋಗ್ಯದಲ್ಲಿ ಚೇತರಿಕೆ. ಆಸ್ತಿ ಖರೀದಿಯಲ್ಲಿ ಇದ್ದ ನಿರ್ಬಂಧ ತೆರವಾಗಲಿದೆ. ಶುಭಸಂಖ್ಯೆ:7
ಮಕರ: ಪಾರಂಪರಿಕ ವೃತ್ತಿಯಲ್ಲಿ ಶುಭವಾಗುವುದು. ಆದಾಯ ತೆರಿಗೆ ಅಧಿಕಾರಿಗಳಿಗೆ ಕಾರ್ಯದೊತ್ತಡ. ಅಡುಗೆ ಗುತ್ತಿಗೆದಾರರಿಗೆ ಲಾಭ. ಶುಭಸಂಖ್ಯೆ: 2
ಕುಂಭ: ಮಗಳ ವಿವಾಹ ಕಾರ್ಯ ನಡೆಯಲಿದೆ. ಸಂತಾನಾಕಾಂಕ್ಷಿಗಳಿಗೆ ಶುಭಸೂಚನೆ. ವ್ಯಾಪಾರದಲ್ಲಿ ಆದಾಯ ಜಾಸ್ತಿಯಾಗುವುದು. ಶುಭಸಂಖ್ಯೆ:6
ಮೀನ: ಕೃಷಿ ಭೂಮಿ ಕೊಳ್ಳುವ ಯೋಜನೆ ಸಫಲವಾಗಲಿದೆ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ಹಣ ವ್ಯಯ. ಶುಭಸಂಖ್ಯೆ: 4
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net