ದೇಶದಲ್ಲೇ ಅತಿ ದೊಡ್ಡ ಚಿರತೆ ಸಫಾರಿ ಹೊಂದಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಈಗ ರಾಜ್ಯ ಸರ್ಕಾರ ಮಾಡುವುದಾಗಿ ಬಜೆಟ್ನಲ್ಲಿ ಘೋಷಿಸಿದೆ.
ಬಯೋಲಾಜಿಕಲ್ ಪಾರ್ಕ್ನ 20 ಹೆಕ್ಟೇರ್ನಲ್ಲಿ ಚಿರತೆ ಸಫಾರಿ ನಿಮಾರ್ಣ ಮಾಡಲಾಗಿದ್ದು, ಹುಲಿ ಹಾಗೂ ಸಿಂಹ ಮತ್ತು ಕರಡಿ ಸಾರಿ ಜತೆಗೆ ಚಿರತೆಯನ್ನು ನೋಡುವ ಅವಕಾಶವನ್ನು ಪ್ರವಾಸಿಗರಿಗೆ ಕಲ್ಪಿಸಿಕೊಡಲಾಗಿದೆ.
ಅಂತೆಯೇ, ಸಿಎಂ ಸಿದ್ದರಾಮಯ್ಯ ಈ ಬಾರಿಯ ಬಜೆಟ್ನಲ್ಲಿ ಜೈವಿಕ ಉದ್ಯಾನವನದಲ್ಲಿ ಪ್ರಕೃತಿ ನಿರೂಪಣ ಕೇಂದ್ರ ಸ್ಥಾಪನೆ ಹಾಗೂ ಐದು ಕೋಟಿ ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡುವುದಾಗಿ ಹೇಳಿದ್ದು, ಮುಂದಿನ ದಿನಗಳಲ್ಲಿ ಬನ್ನೇರುಘಟ್ಟದಲ್ಲಿ ಮತ್ತೊಂದು ಹೊಸ ಮೈಲಿಗಲ್ಲಾಗಲಿದೆ.
ಚಿರತೆ ಪುನರ್ವಸತಿ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ಐದು ಕೋಟಿ ಹಣ ಮೀಸಲು ಇಟ್ಟಿರುವುದು ಗಡಿಭಾಗದ ರೈತರಿಗೆ ಹಾಗೂ ಪ್ರಾಣಿ ಪ್ರಿಯರಿಗೆ ಖುಷಿ ನೀಡಿದ್ದು, ಇದರಿಂದ ಚಿರತೆಗಳ ಸಂರಕ್ಷಣೆ ಸಾಧ್ಯ ಆಗಲಿದೆ. ಜತೆಗೆ ಕಾಡು ಮತ್ತು ನಾಡಿನ ಗಡಿ ಪ್ರದೇಶದಲ್ಲಿ ಚಿರತೆ ಆತಂಕ ಸ್ವಲ್ಪ ಕಡಿಮೆ ಆಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ರಕ್ಷಣೆ ಮಾಡುವ ಚಿರತೆಗಳನ್ನು ತಂದು ಪುನರ್ವಸತಿ ಕಲ್ಪಿಸಲು ವರದಾನವಾಗಲಿದೆ.
ಆರೈಕೆ
ಬನ್ನೇರುಘಟ್ಟ ಚಿರತೆ ಸಫಾರಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ತಾಯಿಯಿಂದ ದೂರ ಆಗಿರುವ ಮರಿ ಚಿರತೆಗಳನ್ನು ತಂದು ರಕ್ಷಣೆ ಮಾಡಿ ಅವುಗಳನ್ನು ಆರೈಕೆ ಮಾಡಿ ಸಫಾರಿಯಲ್ಲಿ ಬಿಡಲಾಗಿದ್ದು, ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡುವುದರಿಂದ ಚಿರತೆ ಸಫಾರಿ ಉತ್ತೇಜನ ದೊರೆಯಲಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನ ದಲ್ಲಿ ಚಿರತೆ ಸಫಾರಿ ಇದ್ದು, ಪುನರ್ವಸತಿ ಕೇಂದ್ರ ಮಾಡಿದರೆ ಮುಂದಿನ ದಿನಗಳಲ್ಲಿ ರಾಜ್ಯದಾ ದ್ಯಂತ ರಕ್ಷಣೆ ಮಾಡುವ ಚಿರತೆಗಳ ಆರೈಕೆಗೆ ಸಹಾಯ ಆಗಲಿದೆ. ಮಾನವ ಹಾಗೂ ಪ್ರಾಣಿ ಸಂಘರ್ಷವೂ ಬೆಂಗಳೂರು ಗಡಿಭಾಗದಲ್ಲಿ ಕಡಿಮೆ ಆಗುವ ಸಾಧ್ಯತೆ ಇರುತ್ತದೆ.
-ನವೀನ್ ಕುಮಾರ್ ಪ್ರಾಣಿ ಪ್ರಿಯ-
ಚಿರತೆಗಳು ಸಾಮಾನ್ಯವಾಗಿ ಬನ್ನೇರುಘಟ್ಟ ಸೇರಿ ದಟ್ಟವಾದ ಕಾಡುಗಳಲ್ಲಿ ಇರುತ್ತವೆ. ಆಹಾರ ಅರಸಿ ನಾಡಿನತ್ತ ಬಂದಾಗ ಅವುಗಳನ್ನು ರಕ್ಷಣೆ ಮಾಡಿದ ನಂತರ ಪುನರ್ವಸತಿ ಕೇಂದ್ರದಲ್ಲಿ ರಕ್ಷಣೆ ಮಾಡಲು ಹೆಚ್ಚಿನ ಸಹಾಯ ಆಗುತ್ತದೆ. ರಾಜ್ಯ ಸರ್ಕಾರದ ಈ ನಿರ್ಧಾರ ಮೆಚ್ಚುವಂಥದ್ದು.
- ಎನ್.ಮಂಜುನಾಥ್ಬನ್ನೇರುಘಟ್ಟ, ಪರಿಸರ ಮತ್ತು ವನ್ಯಜಿವಿ ಹಿತ ರಕ್ಷಣಾ ಸಂಸ್ಥೆಯ ಮುಖ್ಯಸ್ಥ