ತಾಂತ್ರಿಕ ಡಿಪ್ಲೋಮಾ ಕಾಲೇಜು ಸ್ಥಾಪನೆ Bhumi Puja

ಲಕ್ಕೂರು ಹೋಬಳಿ Bhumi Puja ಎಚ್​.ಹೊಸಕೊಟೆ ಗ್ರಾಪಂ ವ್ಯಾಪ್ತಿಯ ಕೈಗಾರಿಕಾ ಪ್ರಾಂಗಣದ ಹತ್ತಿರ ಮುರಾರ್ಜಿ ವಸತಿ ಶಾಲೆಯ ನಿಮಾರ್ಣಕ್ಕೆ ಶಾಸಕ ಕೆ.ವೈ.ನಂಜೇಗೌಡ ಭೂಮಿಪೂಜೆ ಸಲ್ಲಿಸಿದರು. ಪ್ರಾಧಿಕಾರದ ಅಧ್ಯಕ್ಷ ಎಚ್​.ಎಂ.ವಿಜಯನರಸಿಂಹ, ಅಂಜಿನಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ ಇದ್ದರು.
ಲಕ್ಕೂರು ಹೋಬಳಿ Bhumi Puja ಎಚ್​.ಹೊಸಕೊಟೆ ಗ್ರಾಪಂ ವ್ಯಾಪ್ತಿಯ ಕೈಗಾರಿಕಾ ಪ್ರಾಂಗಣದ ಹತ್ತಿರ ಮುರಾರ್ಜಿ ವಸತಿ ಶಾಲೆಯ ನಿಮಾರ್ಣಕ್ಕೆ ಶಾಸಕ ಕೆ.ವೈ.ನಂಜೇಗೌಡ ಭೂಮಿಪೂಜೆ ಸಲ್ಲಿಸಿದರು. ಪ್ರಾಧಿಕಾರದ ಅಧ್ಯಕ್ಷ ಎಚ್​.ಎಂ.ವಿಜಯನರಸಿಂಹ, ಅಂಜಿನಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ವೈ.ನಂಜೇಗೌಡ ಹೇಳಿಕೆ
ಲಕ್ಕೂರು: ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗಾಗಿ ಇನ್ನಷ್ಟು ವಸತಿ Bhumi Puja ಶಾಲೆಗಳನ್ನು ಸ್ಥಾಪಿಸಲಾಗುವುದು. ಎಚ್​.ಹೊಸಕೋಟೆಯಲ್ಲಿ 7.5 ಎಕರೆ ಜಮೀನಿನಲ್ಲಿ ಸುಮಾರು 21 ಕೋಟಿ ರೂ. ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮುರಾರ್ಜಿ ವಸತಿ ಶಾಲೆ ನಿರ್ಮಿಸಲಾಗುತ್ತಿದೆ. ಉಳಿದ ಜಮೀನಿನಲ್ಲಿ ತಾಂತ್ರಿಕ ಡಿಪ್ಲೋಮಾ ಕಾಲೇಜು ಸ್ಥಾಪಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಹೋಬಳಿಯ ಎಚ್​.ಹೊಸಕೊಟೆ ಗ್ರಾಪಂ ವ್ಯಾಪ್ತಿಯ ಕೈಗಾರಿಕಾ ಪ್ರಾಂಗಣ ಸಮೀಪದ ಶುಕ್ರವಾರ ಮುರಾರ್ಜಿ ವಸತಿ ಶಾಲೆ ನಿಮಾರ್ಣಕ್ಕೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ಈಗಾಗಲೇ ಮಾಸ್ತಿ ಗ್ರಾಪಂನ ಕೆಸರೆಗೆರೆ ಗ್ರಾಮದ ಸಮೀಪ ಮಾಸ್ತಿ ವೆಂಕಟೇಶ್​ ಅಯ್ಯಂಗಾರ್​ ವಸತಿ ಶಾಲೆ ನಿರ್ಮಿಸಿದ್ದು, ಕೆಲವೆ ದಿನಗಳಲ್ಲಿ ಉದ್ಘಾಟನೆಯಾಗಲಿದೆ. ಮಾಲೂರು&-ಹೋಸೂರು ಮುಖ್ಯರಸ್ತೆಯನ್ನು ಸುಮಾರು 26ಕಿ.ಮೀ. ಸಂಪೂರ್ಣಸಿಮೆಂಟ್​ (ವೈಟ್​ ಟ್ಯಾಪಿಂಗ್​) ಚಥುಷ್ಪತ ರಸ್ತೆಯನ್ನಾಗಿ ನಿರ್ಮಿಸಲಾಗುವುದು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶ್​ರೆಡ್ಡಿ ಮಾತನಾಡಿ, 2008ರಲ್ಲಿ ಎಚ್​.ಹೊಸಕೋಟೆ ಗ್ರಾಮಕ್ಕೆ ಅಂದಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಭೇಟಿ ನೀಡಿದಾಗ ಗ್ರಾಮಸ್ಥರು ಇಲ್ಲಿ ವಸತಿ ಶಾಲೆ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದರು. ಆದರೆ ಇದುವರೆಗೂ ಶಾಲೆಯ ಕನಸು ಕನಸಾಗಿಯೇ ಉಳಿದಿತ್ತು. ಎಷ್ಟೊ ಜನ ಶಾಸಕರು ಬಂದರೂ ಸಹ ಪ್ರಯತ್ನಿಸಲಿಲ್ಲ. ಪ್ರಸ್ತುತ ಕೆ.ವೈ.ನಂಜೇಗೌಡರ ಪ್ರಯತ್ನದಿಂದ ಕನಸು ನನಸಾಗುತ್ತಿದೆ ಎಂದರು.
ತಾಪಂ ಇಒ ಕೃಷ್ಣಪ್ಪ, ಗ್ರಾಪಂ ಪಿಡಿಒ ಆನಂದ್​, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅಂಬಿಕಾ, ಜಿಪಂ ಮಾಜಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಗ್ರಾಪಂ ಅಧ್ಯಕ್ಷ ಸುಬ್ರಮಣಿ, ಮಾಜಿ ಗ್ರಾಪಂ ಸದಸ್ಯ ಮುನಿರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net