Establishment of a food sub-center in Chikkahedigehalli
Published on:
Copied
Follow Us
ಎಂ.ಎನ್.ಕೋಟೆ: ಗುಬ್ಬಿ ತಾಲೂಕಿನಲ್ಲಿ ಈಗಾಗಲೇ ನಾಲ್ಕು ಆಹಾರ ಉಪಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಚಿಕ್ಕಹೇಡಿಗೆಹಳ್ಳಿಯಲ್ಲಿ ಆಹಾರ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ರೈತರಿಗೆ ವಿದ್ಯುತ್ ಅಭಾವ ಆಗಬಾರದು. ಆದ್ದರಿಂದ ತಾಲೂಕಿನಲ್ಲಿ 13 ಹೊಸ ವಿದ್ಯುತ್ ಉಪಸ್ಥಾವರಗಳನ್ನು ಪ್ರಾರಂಭ ಮಾಡುತ್ತಿದೇವೆ. ಮಠ ಗಂಗಯ್ಯನಪಾಳ್ಯ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಕಾಮಗಾರಿ ಶ್ರೀ ಮುಗಿಸಿ ಎಲ್ಲ ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ಭರವಸೆ ನೀಡಿದರು.
ಶಿರಾ&ಚೇಳೂರು ರಸ್ತೆಗೆ 20 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಶ್ರೀ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜತೆಗೆ ನಂದಿನಿ ಉಪಕೇಂದ್ರವನ್ನೂ ತೆರೆಯಲಾಗುವುದು ಎಂದರು.
ಗ್ರಾಪಂ ಸದಸ್ಯರಾದ ಗುರುರಾಜು, ಸಿದ್ದಲಿಂಗಪ್ಪ ಭೂತಮ್ಮ, ಆಹಾರ ನೀರಿಕ್ಷಕ ಸಿದ್ದೇಗೌಡ, ಆಹಾರ ಶೀರಸ್ತೆದಾರ್ ಯಶೊಧಮ್ಮ, ನ್ಯಾಯಬೆಲೆ ಅಂಗಡಿ ಮಾಲೀಕ ಜಿ.ಎಂ. ಸತ್ಯನಾರಾಯಣ, ಮುಖಂಡರಾದ ರಂಗನಾಥ್, ರಂಗಸ್ವಾಮಯ್ಯ, ಲಕ್ಷ್ಮೀಕಾಂತರಾಜು, ಸಿದ್ದಲಿಂಗಪ್ಪ, ಪಾಪಣ್ಣ ಇದ್ದರು.