3ಕ್ಕೆ ಇಎಸ್​ಐ ಕಟ್ಟಡ ಉದ್ಘಾಟನೆ / DODABALLAPUR

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿನ ಇಎಸ್​ಐ ಆಸ್ಪತ್ರೆಗೆ ಶಾಸಕ ಧೀರಜ್​ ಮುನಿರಾಜು ಭೇಟಿ ನೀಡಿ ಪರಿಶೀಲಿಸಿದರು. ಬಾಶೆಟ್ಟಿಹಳ್ಳಿ ಪಪಂ ಅಧ್ಯಕ್ಷ ಪ್ರೇಮ್​ ಕುಮಾರ್​, ಮುಖ್ಯ ಕಾರ್ಯನಿರ್ವಹಣಾಕಾರಿ ನರಸಿಂಹಮೂರ್ತಿ, ಸ್ಥಳಿಯ ಮುಖಂಡರು, ಇಎಸ್​ಐ ಅಧಿಕಾರಿಗಳು ಇತರರು ಇದ್ದರು.
ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿನ ಇಎಸ್​ಐ ಆಸ್ಪತ್ರೆಗೆ ಶಾಸಕ ಧೀರಜ್​ ಮುನಿರಾಜು ಭೇಟಿ ನೀಡಿ ಪರಿಶೀಲಿಸಿದರು. ಬಾಶೆಟ್ಟಿಹಳ್ಳಿ ಪಪಂ ಅಧ್ಯಕ್ಷ ಪ್ರೇಮ್​ ಕುಮಾರ್​, ಮುಖ್ಯ ಕಾರ್ಯನಿರ್ವಹಣಾಕಾರಿ ನರಸಿಂಹಮೂರ್ತಿ, ಸ್ಥಳಿಯ ಮುಖಂಡರು, ಇಎಸ್​ಐ ಅಧಿಕಾರಿಗಳು ಇತರರು ಇದ್ದರು.
Published on
ದೊಡ್ಡಬಳ್ಳಾಪುರ : ಪಟ್ಟಣದಲ್ಲಿ ನಿರ್ಮಿಸಲಾಗಿರುವ ಇಎಸ್​ಐ ಆಸ್ಪತ್ರೆಯನ್ನು ಮೇ 3ರಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್​ ಮಾಂಡವಿಯ ಮತ್ತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಉದ್ಘಾಟನೆ ಮಾಡಲಾಗುತ್ತದೆ ಎಂದು ಶಾಸಕ ಧೀರಜ್​ ಮುನಿರಾಜು ತಿಳಿಸಿದರು.
ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕೆ ಪ್ರದೇಶದಲ್ಲಿ ನಿಮಾರ್ಣವಾಗಿರುವ ಇಎಸ್​ಐ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದರು. ಇಎಸ್​ಐ ಆಸ್ಪತ್ರೆಗೆ ಇಎಸ್​ಐಸಿ ಕಾಪೋರ್ರೇಷನ್​ನಿಂದ ವೈದ್ಯಕಿಯ ಅಧೀಕ್ಷಕರನ್ನು ನೇಮಕ ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ವೈದ್ಯರೂ ಲಭ್ಯವಾಗಿದ್ದಾರೆ. ಮೇ 3ರಂದು ಕೈಗಾರಿಕೆ ಪ್ರದೇಶದಲ್ಲಿನ 40 ವರ್ಷ ಮೇಲ್ಟಟ್ಟ ಕಾರ್ಮಿಕರಿಗೆ ವಾರ್ಷಿಕ ಆರೋಗ್ಯ ತಪಾಸಣೆಯೊಂದಿಗೆ ಸೇವೆ ಆರಂಭವಾಗಲಿದೆ.
ಸಿಎಂ ಸಿದ್ದರಾಮಯ್ಯ ಸೇರಿ ಸಂಬಂಧಪಟ್ಟ ಸಚಿವರನ್ನು ಆಹ್ವಾನಿಸಿ ಆಸ್ಪತ್ರೆಯನ್ನು ಉದ್ಘಾಟನೆ ನಡೆಸಲಾಗುತ್ತದೆ. ನಂತರದ ಒಂದು ತಿಂಗಳೊಳಗೆ ಆಸ್ಪತ್ರೆಯಲ್ಲಿ ಸಂಪೂರ್ಣ ಸೇವೆ ಆರಂಭವಾಗಲಿದೆ. ಮೇ 3ರಿಂದ ಸುತ್ತಮುತ್ತಲಿನ ಮೂರು ಜಿಲ್ಲೆಗಳ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಒದಗಿಸಲಾಗುತ್ತದೆ. ಕೇಂದ್ರದ ಇಎಸ್​ಐಸಿ ಕಾಪೋರ್ರೇಷನ್​ನಿಂದ ಆಸ್ಪತ್ರೆ ನಡೆಯಲಿದೆ. ಈ ಆಸ್ಪತ್ರೆಯೂ 100 ಹಾಸಿಗೆ ಹೊಂದಿದೆ. ರಾಜ್ಯದಿಂದ ಇಎಸ್​ಐಸಿ ಕಾಪೋರೇಷನ್​ಗೆ ಎನ್​ಒಸಿ ನೀಡಲು ಸಾಕಷ್ಟು ಸಮಯವಾಗಿದ್ದು, ಇದೀಗ ಎನ್​ಒಸಿ ನೀಡಲಾಗಿದೆ.ಅದೇ ಸಂಪೂರ್ಣವಾಗಿ ನಡೆಸಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net