ಸಾಮಾನ್ಯವಾಗಿ ಸೋಯಾ, ಅವರೆ ಬಿತ್ತನೆ ಬೀಜಗಳನ್ನು ಕನಿಷ್ಠ 80 ಎಂಎಂ ಮಳೆಯಾದ ನಂತರ ಅಥವಾ ಜಮೀನಿನಲ್ಲಿ ಕನಿಷ್ಠ 100 ಎಎಂ ಹಸಿಯಾದ ನಂತರವೇ ಬಿತ್ತನೆ ಕೈಗೊಂಡಲ್ಲಿ ಮೊಳಕೆ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಇರುತ್ತದೆ. ಇಲ್ಲವಾದಲ್ಲಿ ಮೊಳಕೆ ಪ್ರಮಾಣ ಮತ್ತು ಸಸಿಗಳ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ. ರೈತರು ಸಮರ್ಪಕ ಮಳೆ ಮತ್ತು ತೇವಾಂಶ ನೋಡಿಕೊಂಡೇ ಬಿತ್ತನೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.