ಕರ್ನಾಟಕ ಕಾಲೇಜಿಗೆ ಯುರೋಪಿಯನ್​ ಎರಾಸ್ಮಸ್​ ಸಂಶೋಧನಾ ನಿಧಿ

ಡಾ. ಎ.ಎಂ. ಖಾನ್​
ಡಾ. ಎ.ಎಂ. ಖಾನ್​
Published on
ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯ ಅಧೀನದ ಕರ್ನಾಟಕ ಕಲಾ ಮಹಾವಿದ್ಯಾಲಯಕ್ಕೆ ಪ್ರಥಮ ಬಾರಿಗೆ ಯುರೋಪಿಯನ್​ ಒಕ್ಕೂಟದ ಎರಾಸ್ಮಸ್​ ಸಂಶೋಧನಾ ನಿಧಿಯನ್ನು ಪಡೆದಿದೆ. ಇದರಿಂದ ಪ್ರವಾಸೋದ್ಯಮ ಸಂಬಂಧಿತ ಸಂಶೋಧನೆ, ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎ.ಎಂ. ಖಾನ್​ ಹೇಳಿದರು.
ನಗರದ ಕರ್ನಾಟಕ ಕಲಾ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಾಸ್ಮಸ್​ ಯುರೋಪ್​ನ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗಕ್ಕೆ ಸುಮಾರು 48 ಲಕ್ಷ ರೂಪಾಯಿ ಸಂಶೋಧನಾ ಧನಸಹಾಯ ದೊರೆಯಲಿದೆ. ವಿಭಾಗವು "ಹೈಯರ್​ ಎಜುಕೇಷನ್​ ಆ್ಯಂಡ್​ ಸಸ್ಟೆನೇಬಲ್​ ಗ್ರೋತ್​ ಥ್ರೂ ರಿಲಿಜಿಯಸ್​ ಟೂರಿಸಂ' ವಿಷಯದ ಮೇಲೆ ಸಂಶೋಧನಾ ಕಾರ್ಯ ಕೈಗೊಳ್ಳಲಿದೆ ಎಂದರು.
ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಕಿವುಡನವರ ಪ್ರೊಜೆಕ್ಟ್​ ಅಧಿಕಾರಿಯಾಗಿ ಈ ಸಂಶೋಧನಾ ಯೋಜನೆಯ ನೇತೃತ್ವ ವಹಿಸಲಿದ್ದಾರೆ. ಜತೆಗೆ 6 ಜನರ ಶಿಕ್ಷಕರ ತಂಡ ಈ ಕಾರ್ಯ ನಿರ್ವಹಿಸಲಿದೆ. ಅಲ್ಬೇನಿಯಾದಲ್ಲಿ ಜರುಗುವ ಯುರೋಪಿಯನ್​ ಒಕ್ಕೂಟದ ಸಭೆಗೆ ಡಾ. ಜಗದೀಶ ತೆರಳಲಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net