ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ

ತಿಕೋಟಾ ತಾಲೂಕಿನ ಸಿದ್ಧಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗ್ರಾ.ಪಂ. ವತಿಯಿಂದ ಗಿಡ ನೆಟ್ಟು ಪರಿಸರ ದಿನ ಆಚರಿಸಲಾಯಿತು. ಅಂಬಣ್ಣ ಹರಳಯ್ಯ, ಬಸವರಾಜ ಸಂಕಗೊಡ, ಶ್ರೀಶೈಲ ಹಡಪದ ಮತ್ತಿತರರಿದ್ದರು.
ತಿಕೋಟಾ ತಾಲೂಕಿನ ಸಿದ್ಧಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗ್ರಾ.ಪಂ. ವತಿಯಿಂದ ಗಿಡ ನೆಟ್ಟು ಪರಿಸರ ದಿನ ಆಚರಿಸಲಾಯಿತು. ಅಂಬಣ್ಣ ಹರಳಯ್ಯ, ಬಸವರಾಜ ಸಂಕಗೊಡ, ಶ್ರೀಶೈಲ ಹಡಪದ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಆನಂದಕುಮಾರ ಮ್ಯಾಗೇರಿ ಹೇಳಿಕೆ
  • ಪರಿಸರ ದಿನಾಚರಣೆ ಕಾರ್ಯಕ್ರಮ
ತಿಕೋಟಾ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಆದರಿಂದ ಪ್ರತಿ ಮನೆಯಿಂದ ಪರಿಸರ ರಕ್ಷಣೆ ಆರಂಭವಾಗಬೇಕು ಎಂದು ತಾಪಂ ಇಒ ಆನಂದಕುಮಾರ ಮ್ಯಾಗೇರಿ ತಿಳಿಸಿದರು.

ತಾಲೂಕಿನ ಸಿದ್ಧಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ  ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಬಳಕೆ ಕಡಿಮೆಮಾಡಿ, ಸಸಿ ನೆಟ್ಟು ಪೋಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪರಿಸರ ದಿನಾಚರಣೆ ಮುಖ್ಯ ಉದ್ದೇಶ ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸುವುದು.  ಹಸಿರು ಪರಿಸರ ನಿರ್ಮಿಸುವುದು, ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಎಲ್ಲರೂ ಸ್ವಚ್ಛ ಸುಂದರ ಪರಿಸರ ನಿರ್ಮಾಣಕ್ಕಾಗಿ ಪಣ ತೊಡಬೇಕು ಹಾಗೂ ಅದರ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಕೆನಾಲ್ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರೊಡನೆ ಸಂವಾದ ನಡೆಸಿದ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ನೀವು ನಿಮ್ಮ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೀರಿ ಎಂಬ ಭಾವನೆ ಹೊಂದಬೇಕು. ಏಕೆಂದರೆ, ನೀವು ಮಾಡುವ ಈ ಕಾರ್ಯಗಳು ಕೇವಲ ಒಬ್ಬ ವ್ಯಕ್ತಿಗೆ ಲಾಭವಾಗುವುದಿಲ್ಲ, ಬದಲಾಗಿ ಇಡೀ ಗ್ರಾಮದ ಜನರಿಗೆ ಈ ಕಾಮಗಾರಿಯಿಂದ ಲಾಭವಿದೆ ಎಂದರು. ಅದಕ್ಕಾಗಿ ನಿಮ್ಮ ಸುತ್ತ-ಮುತ್ತಲಿನ ಜನರಿಗೂ ಈ ಯೋಜನೆಯ ಕುರಿತು ಮಾಹಿತಿ ನೀಡಿ ಅವರನ್ನು ಸಹ ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.

ಗ್ರಾ.ಪಂ. ಆಡಳಿತಾಧಿಕಾರಿ ಅಂಬಣ್ಣ ಹರಳಯ್ಯ, ಸಹಾಯಕ ನಿರ್ದೇಶಕ ಬಸವರಾಜ ಸಂಕಗೊಡ, ಪಿಡಿಒ ಶ್ರೀಶೈಲ ಹಡಪದ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ತಾಂತ್ರಿಕ ಸಹಾಯಕ ಅಭಿಯಂತರ ಶ್ರೀಧರ ಸಾವಳಗಿ, ಆಡಳಿತ ಸಹಾಯಕ ಸುನೀಲ ಬನಸೋಡೆ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net