ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ Environmental

ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ Environmental
ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ Environmental
Published on
ಚೇಳೂರು: ಪರಿಸರ ರಕ್ಷಣೆ ಸರ್ಕಾರದ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಗಾಳಿ, ನೀರು, ಮಣ್ಣಿನ ಮಾಲಿನ್ಯ ತಡೆಗಟ್ಟಿ, ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಹೊಣೆ ಎಂದು ಸಿಐ ಶ್ರೀನಿವಾಸ್​ ಹೇಳಿದರು.Environmental
ಪಟ್ಟಣದ ಪೊಲೀಸ್​ ಇಲಾಖೆಯ ವಸತಿ ಗೃಹ ಆವರಣದಲ್ಲಿ 200 ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪೊಲೀಸ್​ ಇಲಾಖೆಯು ಜೂ.5ರಂದು ಪರಿಸರ ಸಂರಕ್ಷಣೆಗೆ ಹಲವಾರು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಂದು ಮೇಲಧಿಕಾರಿಗಳ ತುರ್ತು ಸಭೆಯಲ್ಲಿ ಭಾಗವಹಿಸಿದ ಕಾರಣ. ಭಾನುವಾರ ಎಲ್ಲ ಸಿಬ್ಬಂದಿ ವಸತಿ ಗೃಹ ಆವರಣದಲ್ಲಿ ಗಿಡ ನೆಟ್ಟರು. ಪ್ಲಾಸ್ಟಿಕ್​ ಬಳಕೆ ಕಡಿತಗೊಳಿಸಲು ಜತೆಗೆ ಪರಿಸರ ಉಳಿಸಲು ಸಾರ್ವಜನಿಕರಿಗೆ ಸಹಕರಿಸಬೇಕು. ಗಿಡಗಳನ್ನು ನೆಡುವುದರಿಂದ ಆಮ್ಲಜನಕ ಮಟ್ಟ ಹೆಚ್ಚಾಗಿ ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ಸಹಾಯವಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net