ನಿಸರ್ಗ ನಡಿಗೆಯಿಂದ ಪರಿಸರ ಜ್ಞಾನ

Environmental knowledge through nature walks
Environmental knowledge through nature walks
Published on
ಶಿರಾ: ಸರ್ ಎನಿದು?.. ಏಕೆ ಹೀಗೆ ಇದೆ? ಇದು ಯಾವ ಮರ, ಇಲ್ಲಿ ಹುಲಿ, ಚಿರತೆ, ಕರಡಿಗಳು ಬರುತ್ತವಾ, ಈ ಬೀಜ ಯಾವ ಮರದ್ದು, ಈ ಜೇಡದ ಹೆಸರೇನು? ಎಂದು ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು.
ಶಿರಾ ವಲಯ ಅರಣ್ಯ ವ್ಯಾಪ್ತಿಯ ದೈವಿ ವನವಾದ ಮರಡಿಗುಡ್ಡದಲ್ಲಿ ಚಿಗುರು ಯುವಜನ ಸಂ ಹಾಗೂ ಬ್ರಹ್ಮಸಂದ್ರ ಸರ್ಕಾರಿ ಪ್ರೌಢಶಾಲೆಯ ಧನ್ವಂತರಿ ಇಕೋ ಕ್ಲಬ್‌ನಿಂದ ವಿದ್ಯಾರ್ಥಿಗಳಿಗೆ ಅರಣ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಿಸರ್ಗ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಂಗನಾಥಪುರ ಅರಣ್ಯದ ಗಸ್ತು ಅರಣ್ಯ ಪಾಲಕ ಗೋವಿಂದರಾಜು ಮಾತನಾಡಿ, ನಾವು ಶಾಲೆಗಳಿಗೆ ಹೋಗಿ ಪರಿಸರದ ಬಗ್ಗೆ ಅರಿವು ಮೂಡಿಸುವುದು ಒಂದು ವಾರ್ಗವಾದರೆ, ಶಿಕ್ಷಣ ಇಲಾಖೆಯು ನಿಸರ್ಗ ನಡಿಗೆ ಆಯೋಜನೆ ವಾಡಿ ಮಕ್ಕಳಿಗೆ ಪರಿಸರದೊಟ್ಟಿಗೆ ಮಿಂದೇಳಲು ಅವಕಾಶ ನೀಡಿದ್ದು ಮತ್ತೊಂದು ಪರ್ಯಾಯ ವಾರ್ಗವಾಗಿದೆ. ನಿಸರ್ಗ ನಡಿಗೆಯಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುವ ಜತೆಗೆ ಪರಿಸರದ ಬಗ್ಗೆ ಸಂವೇದನಾಶೀಲರನ್ನಾಗಿಸಲು ಬಹಳ ಸಹಕಾರಿಯಾಗಿದೆ ಎಂದರು.
ಚಿಗುರು ಯುವಜನ ಸಂದ ಅಧ್ಯಕ್ಷ ಮಂಜುನಾಥ್ ಅಮಲಗೊಂದಿ ವಾತನಾಡಿ, ಕಾಡುಗಳನ್ನು ಕಾರ್ಬನ್ ಸಿಂಕ್‌ಗಳೆಂದು ಕರೆಯಲಾಗುತ್ತದೆ. ವಾನವರು ಉಂಟು ವಾಡುತ್ತಿರುವ ಕಾರ್ಬನ್ ಡೈಆಕ್ಸೈಡ್ ಅನ್ನು ನಿಸ್ವಾರ್ಥದಿಂದ ಎಳೆದುಕೊಂಡು ಜಾಗತಿಕ ತಾಪವಾನವನ್ನು ನಿಯಂತ್ರಿಸುವಲ್ಲಿ ಕಾಡುಗಳು ಮಹತ್ತರವಾದ ಪಾತ್ರ ವಹಿಸಿವೆ. ಕಾಡುಗಳು ವನ್ಯಜೀವಿಗಳ ಆವಾಸಸ್ಥಾನಗಳಾಗಿದ್ದು, ತನ್ನ ಒಡಲಲ್ಲಿ ಅಸಂಖ್ಯಾತ ಜೀವರಾಶಿಗಳಿಗೆ ಆಶ್ರಯ ನೀಡಿದೆ. ಕಾಡುಗಳಿರುವುದು ಕೇವಲ ವಾನವರಿಗಷ್ಟೇ ಎಂಬ ಸ್ವಾರ್ಥವನ್ನು ಬಿಟ್ಟು ಪರಿಸರದೊಟ್ಟಿಗೆ ಸಾಮರಸ್ಯದಿಂದ ಮನುಷ್ಯರೆಲ್ಲಾ ಬದುಕಬೇಕಿದೆ ಎಂದರು.
ಧನ್ವಂತರಿ ಇಕೋ ಕ್ಲಬ್ ಕಾರ್ಯದರ್ಶಿ ಪ್ರತಿಭಾ ಮಾತನಾಡಿ, ನಮ್ಮ ಶಾಲೆಯ ಮಕ್ಕಳು ಈ ನಡಿಗೆಯಲ್ಲಿ ಪರಿಸರದ ಬಗೆಗಿನ ಸೂಕ್ಷ್ಮ ಅಂಶಗಳನ್ನು, ಪ್ರಕೃತಿಯಲ್ಲಿನ ವಿಸ್ಮಯಗಳನ್ನು ವನದೇವತೆಯ ಮಡಿಲಲ್ಲೇ ತಿಳಿಯಲು ಸಾಧ್ಯವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net