ಮಾನವನ ಹಸ್ತಕ್ಷೇಪದಿಂದ ಪರಿಸರ ನಾಶ

Environmental destruction due to human intervention
Environmental destruction due to human intervention
Published on
ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಕುರುಬರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗೆ ಶಾಲೆಯ ಇಕೋ ಕ್ಲಬ್ ಕಾರ್ಯಕ್ರಮದ ಅಡಿಯಲ್ಲಿ ಹೊಸಕೆರೆ ಬೂತಪ್ಪ ದೇವಸ್ಥಾನದ ಬಳಿ ವನಭೇಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯ ವಿದ್ಯಾರ್ಥಿಗಳನ್ನು ಹತ್ತಿರದ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ವಿವಿಧ ಜಾತಿಯ ಗಿಡ ಮರಗಳ ಬಗ್ಗೆ ಮಾಹಿತಿ ನೀಡಲಾಯಿತು.
ಈ ವೇಳೆ ಮಾತನಾಡಿದ ಮುಖ್ಯಶಿಕ್ಷಕಿ ಡಾ.ಅನಿತಾ, ಭೂಮಿ ಜೀವ ವೈವಿಧ್ಯಮಯದ ತೊಟ್ಟಿಲಾಗಿದ್ದು, ಅದರ ಸಮತೋಲನ ಕಾಪಾಡಿಕೊಳ್ಳುವ ಶಕ್ತಿ ಪ್ರಕೃತಿಗೆ ಇದೆ. ಆದರೆ ಮಾನವನ ಹಸ್ತಕ್ಷೇಪ ಅವುಗಳನ್ನು ಹಾಳು ಮಾಡುತ್ತಿದ್ದು, ಆದಷ್ಟು ಗಿಡಮರಗಳನ್ನು ಬೆಳೆಸಿ ಅರಣ್ಯ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸದೆ ಪ್ರಕೃತಿಯನ್ನು ತಂತಾನೆ ಬೆಳೆಯುವಂತೆ ಮಾಡಬೇಕು ಎಂದರು.
ವಿದ್ಯಾರ್ಥಿಗಳಿಗಾಗಿ ಸ್ವಯಂ ಶಿಕ್ಷಕರೇ ಸ್ಥಳದಲ್ಲಿ ಅಡುಗೆ ತಯಾರಿಸಿ ಬಡಿಸಿದರು. ಕುರಿ ಸಾಕಣೆ ಹಂಚಿಕಡ್ಡಿ ಸಂಸ್ಕರಣೆ ಸೇರಿದಂತೆ ಹಲವು ವಿವಿಧ ಗೃಹ ಉಪಯೋಗಿ ಗುಡಿ ಕೈಗಾರಿಕೆ ವಿಷಯ ವಸ್ತುಗಳ ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net