ಕ್ರಾಪ್ಸ್ ಆ್ಯಪ್‌ನಲ್ಲಿ ಹತ್ತಿ ಬೆಳೆ ನಮೂದಿಸಿ

ಮಾನ್ವಿಯಲ್ಲಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಾರ್ಯಾಗಾರವನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುುರುನಾಥ ಭೂಸನೂರೆ ಉದ್ಘಾಟಿಸಿದರು. ಕೃಷಿ ವಿಜ್ಞಾನಿ ಡಾ.ಮಲ್ಲರೆಡ್ಡಿ, ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಭೀಮಣ್ಣ,  ಕೃಷಿ ಅಧಿಕಾರಿಗಳಾದ ಮಾರುತಿ, ಶಿವಶರಣ, ಶಿವಕುಮಾರ ಇದ್ದರು.

Published on
ಮಾನ್ವಿ: ರೈತರು ಕಡ್ಡಾಯವಾಗಿ ಕ್ರಾಪ್ಸ್ ಆ್ಯಪ್‌ನಲ್ಲಿ ಹತ್ತಿ ಬೆಳೆ ನಮೂದಿಸಿದರೆ ಮಾತ್ರ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಅನುಕೂಲವಾಗಲಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ ಭೂಸನೂರೆ ಹೇಳಿದರು.
ಪಟ್ಟಣದಲ್ಲಿ ಕೃಷಿ ಇಲಾಖೆ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕ ಸಾಂದ್ರತೆ ಹತ್ತಿ ಪದ್ಧತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 
ತಾಲೂಕಿನ ರೈತರು ಹತ್ತಿ ಹೆಚ್ಚಾಗಿ ಬೆಳೆಯುತ್ತಿದ್ದು, ಬೆಳೆಗಾರರಿಗೆ ಅಗತ್ಯವಾದ ಕೃಷಿ ಮಾಹಿತಿ ನೀಡುವುದಕ್ಕಾಗಿ ಹತ್ತಿ ಬೆಳೆಗಾರರರ ತಾಲೂಕು ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ರಾಯಚೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ತಿಮ್ಮಣ್ಣ ನಾಯಕ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕೃಷಿ ಭೂಮಿ ಪ್ರಮಾಣ ಇಳಿಕೆಯಾಗಿದ್ದು, ಸುಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು.
ಅಧಿಕ ಸಾಂದ್ರತೆ ಹತ್ತಿ ಪದ್ಧತಿ ಅಳವಡಿಸಿಕೊಂಡರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಮಲ್ಲರೆಡ್ಡಿ, ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಭೀಮಣ್ಣ, ವಿವಿಧ ಗ್ರಾಮಗಳ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಮಾರುತಿ, ಶಿವಶರಣ, ಶಿವಕುಮಾರ, ಭೀಮರಾಯ ಪಡದಹಳ್ಳಿ, ಅಧಿಕಾರಿಗಳಾದ ನಾಗರಾಜ ಪಾಟೀಲ್, ದೇವರಾಜ ಪಾಟೀಲ್, ಪ್ರಗತಿಪರ ರೈತರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net