ಪಶು ಆಹಾರ ಗುಣಮಟ್ಟ ಕಳಪೆಯಾಗದಿರಲಿ

ಮಾಗಡಿ ತಾಲೂಕಿನ ಚಕ್ರಭಾವಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ರಾಮಚಂದ್ರಯ್ಯಅವರು ಹಾಲು ಉತ್ಪಾದಕ ಮಕ್ಕಳಿಗೆ ಪ್ರೋತ್ಸಾಹ ದನದ ಚಕ್ ವಿತರಿಸಿದರು.ನಿರ್ದೇಶಕ ಕುಮಾರ್, ಸ್ವಾಮಿ, ಚಂದ್ರು, ದಾಕ್ಷಾಯಿಣಿ, ಜಗದಾಂಬ, ಯಶೋಧ, ಕಾರ್ಯದರ್ಶಿ ನರಸಿಂಹಮೂರ್ತಿ, ನಾಗೇಶ್,  ಶಿಬಿರ ವಿಸ್ತರಣಾಧಿಕಾರಿ ಚಲುವರಂಗಯ್ಯ ಇದ್ದರು.
ಮಾಗಡಿ ತಾಲೂಕಿನ ಚಕ್ರಭಾವಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ರಾಮಚಂದ್ರಯ್ಯಅವರು ಹಾಲು ಉತ್ಪಾದಕ ಮಕ್ಕಳಿಗೆ ಪ್ರೋತ್ಸಾಹ ದನದ ಚಕ್ ವಿತರಿಸಿದರು.ನಿರ್ದೇಶಕ ಕುಮಾರ್, ಸ್ವಾಮಿ, ಚಂದ್ರು, ದಾಕ್ಷಾಯಿಣಿ, ಜಗದಾಂಬ, ಯಶೋಧ, ಕಾರ್ಯದರ್ಶಿ ನರಸಿಂಹಮೂರ್ತಿ, ನಾಗೇಶ್, ಶಿಬಿರ ವಿಸ್ತರಣಾಧಿಕಾರಿ ಚಲುವರಂಗಯ್ಯ ಇದ್ದರು.
Published on
ಮಾಗಡಿ : ಕೆಎಂಎಫ್ ಪೂರೈಸುವ ಪಶು ಆಹಾರ ಗುಣಮಟ್ಟ ಕಳಪೆಯಾಗಿರುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಬಮುಲ್ ನಿರ್ದೇಶಕ ಎಚ್.ಎನ್. ಅಶೋಕ್ ತಿಳಿಸಿದರು.

ತಾಲೂಕಿನ ಚಕ್ರಭಾವಿ ಹಾಲು ಉತ್ಪಾದಕರ ಸಹಕಾರ ಸಂಘ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ,
ಪಶು ಆಹಾರ ಕಳಪೆ ಬಗ್ಗೆ ವ್ಯಾಪಕ ದೂರು ಕೇಳಿಬರುತ್ತಿದ್ದು, ಶೀಘ್ರದಲ್ಲೇ ಬಮುಲ್ ವತಿಯಿಂದಲೇ ಪಶು ಆಹಾರ ಹಾಗೂ ಐಸ್‌ಕ್ರೀಂ ತಯಾರಿಕಾ ಘಟಕ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದ್ದು, ಇದರಿಂದ ಪಶು ಆಹಾರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.

ಖಾಸಗಿ ಹಾಗೂ ಒಕ್ಕೂಟದಿಂದ ನೀಡುವ ಪಶು ಆಹಾರ ಬೆಲೆ ಒಂದೇ ಆಗಿದ್ದರೂ, ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ತಾಲೂಕಿನ ಸಾತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಶು ಆಹಾರ ಘಟಕಕ್ಕಾಗಿ 25 ಎಕರೆ ಜಾಗ ಮೀಸಲಿಡಲಾಗಿದೆ. ತಾಲೂಕಿನಲ್ಲಿ ಯಾವುದೇ ದೊಡ್ಡ ಕೈಗಾರಿಕೆಗಳಿಲ್ಲದ ಕಾರಣ, ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿ ಹಾಗೂ ಹಾಲು ಉತ್ಪಾದಕತೆಗೆ ಅನುಕೂಲವಾಗಲಿದೆ ಎಂದರು
ವೈ.ಜಿ.ಗುಡ್ಡ ಜಲಾಶಯದಿಂದ ಚಕ್ರಭಾವಿ ಹಾಗೂ ಸುತ್ತಮುತ್ತಲಿನ 18 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ಅನುಷ್ಠಾನದ ಬಗ್ಗೆ ಶಾಸಕ ಎಚ್.ಸಿ. ಬಾಲಕೃಷ್ಣ ಅವರೊಂದಿಗೆ ಚರ್ಚಿಸಿ, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದರು.

ಬಮುಲ್ ವತಿಯಿಂದ ಹಸು ಸಾಕಣೆ ಕೊಟ್ಟಿಗೆ ನಿರ್ಮಾಣಕ್ಕೆ 50 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಪ್ರತಿ ಹಾಲು ಉತ್ಪಾದಕರಿಗೂ ತಲುಪುವಂತೆ ಪರ್ಯಾಯ ಯೋಜನೆ ರೂಪಿಸಲು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಚಿಂತಿಸಿದ್ದಾರೆ. ಡಿ.ಕೆ.ಸುರೇಶ್ ಅಧ್ಯಕ್ಷತೆ ನಂತರ ಸಾಕಷ್ಟು ಬದಲಾವಣೆ ತಂದು ಸೋರಿಕೆ ತಡೆಹಿಡಿದಿರುವುದರಿಂದ ಸಾಕಷ್ಟು ಲಾಭದಾಯಕವಾಗಿದೆ. ಇದರಿಂದ ಹಾಲು ಉತ್ಪಾದಕರಿಗೂ ಹೆಚ್ಚು ಸಹಕಾರ, ಪೋತ್ಸಾಹ ನೀಡಬಹುದಾಗಿದೆ ಎಂದರು.

ಚಕ್ರಭಾವಿ ಹಾಲು ಉತ್ಪಾದಕ ಸಹಕಾರ ಸಂಘ ಅಧ್ಯಕ್ಷ ರಾಮಚಂದ್ರಯ್ಯ ಮಾತನಾಡಿ, ಪ್ರತಿ ನಿತ್ಯ ಸರಾಸರಿ 1900 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಗುಣಮಟ್ಟ ಹಾಲು ಪೂರೈಕೆಯಿಂದಾಗಿ 2025-26ನೇ ಸಾಲಿನಲ್ಲಿ ಸಂಘಕ್ಕೆ 4.77 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಈ ಲಾಭಾಂಶ ರೈತರಿಗೆ ಬೋನಸ್ ರೂಪದಲ್ಲಿ ವಿತರಿಸಲಾಗುವುದು. ಉತ್ಪಾದಕರಿಗೆ ಮತಷ್ಟು ಅನುಕೂಲ ಕಲ್ಪಿಸಲು ಸ್ಥಳೀಯವಾಗಿ ಯೋಜನೆ ರೂಪಿಸಲಾಗುವುದು. ಹಾಗೂ ಹಾಲು ಉತ್ಪಾದಕರ ಮಕ್ಕಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದನ ಹಾಗೂ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net