ಮಡಿವಾಳ: ತೊರ್ನಹಳ್ಳಿ ಶಾಲೆಯಲ್ಲಿ ಎಲ್ಕೆಜಿಯಿಂದ 7ನೇ ತರಗತಿವರೆಗೂ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾರಂಭವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡಿ ಶಾಲಾ ದಾಖಲಾತಿ ಹೆಚ್ಚಿಸಬೇಕು ಎಂದು ತೊರ್ನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎ.ಮಂಜುನಾಥ್ ಹೇಳಿದರು. government schools
ಮಾಲೂರು ತಾಲೂಕು ತೊರ್ನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ, ಪಾಲಕರ ಸಭೆಯಲ್ಲಿ ಮಾತನಾಡಿ, ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಟೈ ಮತ್ತು ಬೆಲ್ಟ್ ವಿತರಿಸುವುದಾಗಿ ತಿಳಿಸಿದರು.
ಎಸ್ಡಿಎಂಸಿ ಅಧ್ಯಕ್ಷ ರಾಮಾಂಜನೇಯ ಮಾತನಾಡಿ, ನಮ್ಮ ಶಾಲೆಯ ಎಲ್ಲ ಮಕ್ಕಳಿಗೆ ಮೂಲಸೌಲಭ್ಯಗಳು ಹಾಗೂ ನೋಟ್ ಪುಸ್ತಕಗಳ ವಿತರಣೆಯನ್ನು ದಾನಿಗಳ ಸಹಕಾರದಿಂದ ವಿತರಿಸುವುದಾಗಿ ತಿಳಿಸಿದರು.