ಆಲೂರು ತಾಲೂಕಿನ ಪಾಳ್ಯ ಹೋಬಳಿ ಚಿಕ್ಕಕಣಗಾಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬೇಸಿಗೆ ರಜೆ ಮುಗಿಸಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರೊಂದಿಗೆ ಸೇರಿ ಹೂವು ನೀಡಿ ಸ್ವಾಗತಿಸಿದರು.
ಆಲೂರು: ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದು ಜತೆಗೆ ಕ್ರೀಡೆ. ಪ್ರತಿಭಾ ಕಾರಂಜಿ, ಬಿಸಿಯೂಟ ಯೋಜನೆ, ಉಚಿತ ಪೋತ್ಸಾಹ ಯೋಜನೆಗಳು, ಕನ್ನಡ ಮತ್ತು ಇಂಗ್ಲೀಷ್ ಭೋಧನಾ ಮಾಧ್ಯಮ ಸೇರಿದಂತೆ ಹಲವು ಕಾರ್ಯಕ್ರಮಗಳಿದ್ದು, ಪಾಲಕರು ತಪ್ಪದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಚಿಕ್ಕಕಣಗಾಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರಘು ಮನವಿ ಮಾಡಿದರು.
ತಾಲೂಕಿನ ಪಾಳ್ಯ ಹೋಬಳಿ ಚಿಕ್ಕಕಣಗಾಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬೇಸಿಗೆ ರಜೆಯ ಮಜಾ ಮುಗಿಸಿ ಶಾಲೆಗೆ ಉತ್ಸಾಹದಿಂದ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರೊಂದಿಗೆ ಸೇರಿ ಹೂವು ನೀಡಿ ಸ್ವಾಗತಿಸಿ ಬಳಿಕ ಮಾತನಾಡಿದರು. ಈವತ್ತಿನ ದಿನಗಳಲ್ಲಿ ಖಾಸಗಿ ಶಾಲೆಗಳಲ್ಲಿ ದೊರೆಯುವಂತಹ ಎಲ್ಲ ರೀತಿಯಾದ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತದೆ. ಪೋಷಕರು ಮಕ್ಕಳ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಬೇಕು. ನಮ್ಮ ಎಲ್ಲಾ ಶಿಕ್ಷಕರ ಉತ್ತಮ ಬೋಧನೆಯಿಂದ ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ನಮ್ಮ ಶಾಲೆ ಈ ಸಾಲಿನಲ್ಲಿ ನೂರರಷ್ಟು ಫಲಿತಾಂಶವನ್ನು ಪಡೆದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ, ಸದಸ್ಯರಾದ ಮಹೇಶ್ವರಯ್ಯ, ಆನಂದ್, ಸ್ವಾಮಿ, ಉಮೇಶ್, ಗಂಗಾಧರ್, ಶಾಲಾ ಶಿಕ್ಷಕರಾದ ಭವಾನಿ, ಯೋಗೇಶ್, ಸುಕನ್ಯಾ, ಪ್ರವೀಣ್ ಕುಮಾರ್, ಸುಮಿತ್ರಾ, ಸೇರಿದಂತೆ ಪಾಲಕರು, ಗ್ರಾಮಸ್ಥರು ಹಾಜರಿದ್ದರು.