ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಪ್ರವೇಶ ಕೊಡಿಸಿ

,
,
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ಲವೀಶ್​ ಒರ್ಡಿಯಾ ಮನವಿ
  • ಜೂ.1ರಂದು ಪಾಲಕರ-ಪೋಷಕರ ಸಭೆ
ಯಾದಗಿರಿ: ಗುಣಮಟ್ಟದ ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕಾಗಿದ್ದು, ಸಮೃದ್ಧ ಸಮಾಜ ನಿರ್ಮಾಣದ ಭದ್ರ ಅಡಿಪಾಯವಾಗಿದೆ ಎಂದಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಲವೀಶ್​ ಒರ್ಡಿಯಾ ಅವರು, 2026-27ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಕಾಲಿಡುತ್ತಿರುವ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳಿಗೆ ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.
ಪಾಲಕರು ಮತ್ತು ಪೋಷಕರೆಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ವಿನಂತಿಸಿರುವ ಅವರು, ಇಲ್ಲಿ ಸುರಕ್ಷಿತ, ಅಂತರ್ಗತ ಮತ್ತು ಅತ್ಯುತ್ತಮ ಕಲಿಕಾ ವಾತಾವರಣ ನಿರ್ಮಾಣಮಾಡುವುದಾಗಿ ಭರವಸೆ ನೀಡಿದ್ದಾರೆ. ಮಗುವಿಗೆ ಸಮಗ್ರ ಮತ್ತು ಸ್ಪರ್ಧಾತ್ಮಕ ಶಿಣವನ್ನು ನೀಡಲು ಸರ್ಕಾರಿ ಶಾಲೆಗಳು ಬಲಿಷ್ಠ ಮೂಲಸೌಕರ್ಯ ಹಾಗೂ ಪೂರಕ ವ್ಯವಸ್ಥೆಗಳನ್ನು ಹೊಂದಿದೆ. ಅರ್ಹ ಮತ್ತು ಬದ್ಧತೆಯುಳ್ಳ ಶಿಕ್ಷರು, ಉಚಿತ ಪಠ್ಯಪುಸ್ತಕಗಳು ಮತ್ತು ಸಮವಸ್ತಗಳು, ಪೌಷ್ಟಿಕ ಬಿಸಿಯೂಟ ಯೋಜನೆ, ಸುರಕ್ಷಿತ ಮೂಲಸೌಕರ್ಯ, ಪೋತ್ಸಾಹಧನ ಮತ್ತು ವಿದ್ಯಾರ್ಥಿವೇತನ, ಸಮಗ್ರ ವ್ಯಕ್ತಿತ್ವ ವಿಕಸನ, ಗ್ರಂಥಾಲಯ, ಪ್ರಯೋಗಾಲಯ ಹೀಗೆ ವಿವಿಧ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ಸಿಗಲಿವೆ ಎಂದು ಅವರು ಮಾಹಿತಿ ನೀಡಿದರು.
"ನಮ್ಮ ಶಾಲೆ ನಮ್ಮ ಹೆಮ್ಮೆ, ಮಕ್ಕಳ ಭವಿಷ್ಯ ನಮ್ಮ ಹೊಣೆ' ಎಂಬ ಹೆಸರಲ್ಲಿ ಬರುವ ಜೂ.1ರಂದು ಜಿಲ್ಲೆಯ ಎಲ್ಲ ಗ್ರಾಮಗಳ ಸರ್ಕಾರಿ ಶಾಲೆಯಲ್ಲಿ ಪಾಲಕ-ಪೋಷಕರ ಸಭೆ ಆಯೋಜಿಸಲಾಗಿದ್ದು, ತಪ್ಪದೆ ಸಭೆಯಲ್ಲಿ ಭಾಗವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net