ಪಾಲಕರ ಇಚ್ಚೆಯಂತೆ ಆಂಗ್ಲ ಮಾಧ್ಯಮಕ್ಕೂ ಆದ್ಯತೆ English medium

ಪಾಲಕರ ಇಚ್ಚೆಯಂತೆ ಆಂಗ್ಲ ಮಾಧ್ಯಮಕ್ಕೂ ಆದ್ಯತೆ English medium
ಪಾಲಕರ ಇಚ್ಚೆಯಂತೆ ಆಂಗ್ಲ ಮಾಧ್ಯಮಕ್ಕೂ ಆದ್ಯತೆ English medium
Published on
ಮುಳಬಾಗಿಲು: ಪಲ್ಲಿಗರಪಾಳ್ಯದ ಭಜನೆ ಮನೆಯಿಂದ 1956ರಲ್ಲಿ ಪ್ರಾರಂಭವಾದ ಕಿರಿಯ ಪ್ರಾಥಮಿಕ ಶಾಲೆ ಈಗ 160 ವಿದ್ಯಾರ್ಥಿಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಅಭಿವೃದ್ಧಿ ಹೊಂದಿದ್ದು, ಮಕ್ಕಳ ಪಾಲಕರ ಇಚ್ಚೆಯಂತೆ ಆಂಗ್ಲ ಮಾಧ್ಯಮ ತೆರೆಯಲಾಗಿದೆ ಎಂದು ಪಿಎಲ್​ಡಿ ಬ್ಯಾಂಕ್​ ನಿವೃತ್ತ ವ್ಯವಸ್ಥಾಪಕ ಪಿ.ಶ್ರೀನಿವಾಸಲು ತಿಳಿಸಿದರು. English medium
ನಗರದ ಅರವಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಮತ್ತು ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಅರವಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಆಗುತ್ತಿರುವುದನ್ನು ಗಮನಿಸಿ ಸರ್ಕಾರಿ ಶಾಲೆಯಲ್ಲಿಯೇ ಆಂಗ್ಲ ಮಾಧ್ಯಮ ಎಲ್​ಕೆಜಿ, ಯುಕೆಜಿ ಪ್ರಾರಂಭ ಮಾಡಲಾಗಿದ್ದು, 1ನೇ ತರಗತಿಗೆ ದಾಖಲಾತಿ ಹೆಚ್ಚಾಗುತ್ತಿದೆ. ಈ ರೀತಿ ಕಾಲಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳಲ್ಲಿ ಬದಲಾವಣೆಯಾಗಬೇಕೆಂದು ಸಲಹೆ ನೀಡಿದರು.
ಎಲ್​ಕೆಜಿ, ಯುಕೆಜಿ ಪ್ರಾರಂಭ ಮಾಡಿದ ವೇಳೆ ಇಬ್ಬರು ಶಿಕ್ಷಕಿಯರ ವೇತನ ಹಾಗೂ ಮಕ್ಕಳನ್ನು ಗಮನಿಸಲು ಡಿ&ಗ್ರೂಪ್​ ನೌಕರರನ್ನು ನೇಮಿಸಲು ಹಾಗೂ ವೇತನ ಒದಗಿಸಲು ಹಳೇ ವಿದ್ಯಾರ್ಥಿಗಳ ಸಹಕಾರ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದ ಜತೆಗೆ ಎಸ್​ಡಿಎಂಸಿ ನಿಕಟಪೂರ್ವ ಅಧ್ಯಕ್ಷ ಗರಡಿ ಶಂಕರ್​ ಹಾಗೂ ಕೆ.ನಾರಾಯಣಸ್ವಾಮಿ ಅವರ ಸಹಕಾರದಿಂದ ಎಲ್​ಕೆಜಿ, ಯುಕೆಜಿ ತೆರೆಯಲಾಯಿತು ಎಂದರು.
ಆರ್​.ರಾಜೇಶ್​, ನಾರಾಯಣಪ್ಪ, ಕೃಷ್ಣಪ್ಪ, ಲಕ್ಷಿ$್ಮಪತಿ, ಶಿಕ್ಷಕಿಯರಾದ ಉಮಾದೇವಿ, ಮುನಿರತ್ನಮ್ಮ, ಸುಮಾ, ವಸಂತಕುಮಾರಿ, ನಾರಾಯಣಸ್ವಾಮಿ, ಪೂರ್ವ ಪ್ರಾಥಮಿಕ ಶಾಲೆ ಶಿಕ್ಷಕಿಯರಾದ ವರಲಕ್ಷಿ$್ಮ, ಗಂಗಾಭವಾನಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net