ಮೃತ ಸುಮಂತ್ ನಂದಿನಿ ಲೇಔಟ್‌ನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ. ಈತನ ಪತ್ನಿ ಪದ್ಮಾವತಿ ವೈಟ್‌ಫೀಲ್ಡ್‌ನಲ್ಲಿರುವ ಕ್ಯಾಬ್‌ಜೆಮಿನಿ ಕಂಪನಿಯಲ್ಲಿ ಸ್ಟಾವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆ.13ರ ಗುರುವಾರ ರಾತ್ರಿಯಿಂದಲೇ ದಂಪತಿಗಳ ನಡುವೆ ಪ್ರಾರಂಭವಾಗಿತ್ತು. ಮರುದಿನ ಬೆಳಗ್ಗೆಯೂ ಜಗಳ ಮುಂದುವರಿದಿತ್ತು. ಇಬ್ಬರ ಜಗಳ ವಿಕೋಪಕ್ಕೆ ಹೋಗಿದ್ದರಿಂದ ಸುಮಂತ್ ತನ್ನ ಪತ್ನಿಗೆ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.