ಮೆಟಲ್ ವಿಜಲ್ ಚೈನ್‌ಗೆ ಬ್ರೇಕ್, ಇನ್ಮುಂದೆ ಖಾಕಿ ಲ್ಯಾನ್ಯಾರ್ಡ್ ಕಡ್ಡಾಯ: ರಾಜ್ಯ ಪೊಲೀಸ್ ಸಮವಸ್ತ್ರದಲ್ಲಿ ಭಾರೀ ಬದಲಾವಣೆ; ಡಿಜಿಪಿ ಮಹತ್ವದ ಆದೇಶ! Karnataka Police

DGP orders state police personnel to wear khaki lanyards instead of metal whistle chains to address issues related to extreme weather conditions and rusting.
ಹವಾಮಾನ ವೈಪರೀತ್ಯ ಹಾಗೂ ತುಕ್ಕು ಹಿಡಿಯುವ ಸಮಸ್ಯೆ ನಿವಾರಿಸಲು ಮೆಟಲ್ ವಿಜಲ್ ಚೈನ್ ಬದಲಿಗೆ ಖಾಕಿ ಲ್ಯಾನ್ಯಾರ್ಡ್ ಧರಿಸಲು ರಾಜ್ಯ ಪೊಲೀಸ್ ಸಿಬ್ಬಂದಿಗೆ ಡಿಜಿಪಿ ಆದೇಶ
Published on: 

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಗೆ ಸಂಬಂಧಿಸಿದಂತೆ ಭಾರೀ ಬದಲಾವಣೆಯೊಂದನ್ನು ಮಾಡಲಾಗಿದ್ದು, ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿರುವ ಪೊಲೀಸ್ ಕಾನ್ಸ್​ಟೆಬಲ್​ ಮತ್ತು ಹೆಡ್ ಕಾನ್ಸ್​ಟೆಬಲ್​ ಅವರುಗಳು ಧರಿಸುತ್ತಿರುವ ಸಮವಸ್ತ್ರದಲ್ಲಿನ ಮೆಟಲ್ ವಿಜ್ಜಲ್ ಚೈನ್‌ಗಳ ಬದಲಿಗೆ ಖಾಕಿ ಬಣ್ಣದ ವಿಜ್ಜಲ್ ಗಾರ್ಡ್/ಲ್ಯಾನ್ಯಾರ್ಡ್ ಅನ್ನು ಅಳವಡಿಸುವಂತೆ ಡಿಜಿಪಿ ಆದೇಶ ಹೊರಡಿಸಿದ್ದಾರೆ.

ಜಾರಿಯಾಗಿರುವ ಆದೇಶ ಪ್ರತಿಯಲ್ಲಿ ಸೂಚಿಸಿರುವಂತೆ, ಪಿಸಿಯಿಂದ ಪಿಐ ಹುದ್ದೆಯವರಿಗಿನ ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ಸಣ್ಣ ಪ್ರಮಾಣದ 31 ವಿವಿಧ ಕಿಟ್ ಸಾಮಗ್ರಿಗಳನ್ನು ಆಯಾ ಸಿಬ್ಬಂದಿಗಳೇ ನೇರವಾಗಿ ಖರೀದಿಸಲು ಮಾಸಿಕ 40 ರೂ. ಗಳ ಕಿಟ್ ಸಾಮಗ್ರಿಗಳ ಭತ್ಯೆಯನ್ನು ಪಿಸಿಯಿಂದ ಪಿಎಸ್‌ಐ ರವರಿಗೆ ನೀಡಲಾಗುತ್ತಿದೆ.

Attachment
PDF
circular for lanyard
Preview

ಸದರಿ 31 ವಿವಿಧ ಕಿಟ್ ಸಾಮಗ್ರಿಗಳಲ್ಲಿ ಈ ಹಿಂದೇ ಸಿಬ್ಬಂದಿಗಳು ಖರೀದಿಸುತ್ತಿದ್ದರು, ಮೆಟಲ್ ವಿಜ್ಜಲ್ ಚೈನ್‌ಗಳ ಬದಲಿಗೆ ಖಾಕಿ ಬಣ್ಣದ ವಿಜಲ್ ಗಾರ್ಡ್/ಖಾಕಿ ಲ್ಯಾನ್ಯಾರ್ಡ್ ಅನ್ನು ಖರೀದಿಸಿ, ಸಮವಸ್ತ್ರಕ್ಕೆ ಅಳವಡಿಸಿಕೊಳ್ಳುವಂತೆ ತಮ್ಮ ಅಧೀನದಲ್ಲಿ ಬರುವ ಎಲ್ಲಾ ಪಿಸಿ ಮತ್ತು ಹೆಚ್‌ಸಿ ರವರಿಗೆ ನಿರ್ದೇಶನ ನೀಡುವಂತೆ ಪೊಲೀಸ್​ ಮಹಾ ಆಯುಕ್ತರು ಸೂಚಿಸಿದ್ದಾರೆ.

ಹವಾಮಾನ ವೈಪರಿತ್ಯವೇ ಕಾರಣ!

ಇಷ್ಟು ವರ್ಷಗಳಿಂದ ಪಿಸಿ ಹಾಗೂ ಹೆಚ್​ಸಿಗಳು ಧರಿಸುತ್ತಿದ್ದ ಮೆಟಲ್ ವಿಜ್ಜಲ್ ಚೈನ್‌ಗಳನ್ನು ಏಕೆ ಬದಲಾಯಿಸಲಾಗುತ್ತಿದೆ ಎನ್ನುವುದಕ್ಕೆ ಆದೇಶ ಪ್ರತಿಯಲ್ಲಿಯೇ ಉತ್ತರವನ್ನು ನೀಡಲಾಗಿದ್ದು, ಹವಾಮಾನ ವೈಪರಿತ್ಯದ ಕಾರಣ ಮೆಟಲ್​ ಚೈನ್​ ಬೇಗ ತುಕ್ಕು ಹಿಡಿದು, ಹಾಳಾಗುತ್ತದೆ.

Also Read
'ನಾನೊಬ್ಬ ನಾಸ್ತಿಕ, ಆದ್ರೂ ಸಿನಿಮಾ ಇಷ್ಟವಾಯ್ತು': 'ಯಶ್ ರಾವಣನ ಪಾತ್ರ ಶತಮಾನಕ್ಕೊಮ್ಮೆ ಬರುವಂತಹದ್ದು'; ರಾಮಾಯಣ ನೋಡಿ ಬೆರಗಾದ ರಾಮ್ ಗೋಪಾಲ್ ವರ್ಮಾ! RGV
DGP orders state police personnel to wear khaki lanyards instead of metal whistle chains to address issues related to extreme weather conditions and rusting.

ಈ ಸಮಸ್ಯೆಯನ್ನು ಪರಿಹರಿಸಲು ಇತರ ರಾಜ್ಯಗಳಲ್ಲಿ ಮೆಟಲ್​ ಬದಲಿಗೆ ಖಾಕಿ ಅಥವಾ ನೀಲಿ ಬಣ್ಣದ ವಿಜ್ಜಲ್ ಗಾರ್ಡ್​ಗಳನ್ನು ಬಳಸುತ್ತಿದ್ದಾರೆ. ಈಗ ನಮ್ಮ ರಾಜ್ಯದ ಪೊಲೀಸರು ಕೂಡ, ಮೆಟಲ್ ವಿಜ್ಜಲ್ ಚೈನ್‌ಗಳ ಬದಲು ಖಾಕಿ ಬಣ್ಣದ ವಿಜ್ಜಲ್ ಗಾರ್ಡ್​ಗಳನ್ನು ಬಳಸುವುದು ಸೂಕ್ತವೆಂದು ಸರ್ಕಾರ ನಿರ್ಧರಿಸಿದ್ದು, ಇದನ್ನು ಈಗ ಕಾರ್ಯರೂಪಕ್ಕೆ ತರಲಿದ್ದೇವೆ ಎಂದು ಹೇಳಿದ್ದಾರೆ.

ಆದಕಾರಣ ನಮ್ಮ ರಾಜ್ಯ ಪೊಲೀಸರ ಸಮವಸ್ತ್ರಕ್ಕೆ ಹೊಂದುವಂತೆ ಖಾಕಿ ಬಣ್ಣದ ವಿಜ್ಜಲ್​ ಗಾರ್ಡ್​ಗಳನ್ನು ಬಳಸುವುದು ಕಡ್ಡಾಯವಾಗಿದ್ದು, ಇದನ್ನು ತಮ್ಮ ಕೆಳಗಿನ ಸಿಬ್ಬಂದಿಗಳಿಗೆ ತಿಳಿಸುವಂತೆ ರಾಜ್ಯ ಪೊಲೀಸ್​ ಮಹಾ ನಿರ್ದೇಶಕ ಡಾ. ಎ.ಎಂ. ಸಲೀಂ ಆದೇಶ ಹೊರಡಿಸಿದ್ದಾರೆ.