'ನಾನೊಬ್ಬ ನಾಸ್ತಿಕ, ಆದ್ರೂ ಸಿನಿಮಾ ಇಷ್ಟವಾಯ್ತು': 'ಯಶ್ ರಾವಣನ ಪಾತ್ರ ಶತಮಾನಕ್ಕೊಮ್ಮೆ ಬರುವಂತಹದ್ದು'; ರಾಮಾಯಣ ನೋಡಿ ಬೆರಗಾದ ರಾಮ್ ಗೋಪಾಲ್ ವರ್ಮಾ! RGV

Director Ram Gopal Varma watched the movie 'Ramayana' for the second time and heaped praise on Yash's portrayal of Ravana.
'ರಾಮಾಯಣ' ಸಿನಿಮಾವನ್ನು ಎರಡನೇ ಬಾರಿ ವೀಕ್ಷಿಸಿ ಯಶ್ ಅವರ ರಾವಣನ ಪಾತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.
Published on: 

ಮುಂಬೈ: ನಿತೇಶ್​ ತಿವಾರಿ ನಿರ್ದೇಶನದ ಹಾಗೂ ನಮಿತ್​ ಮಲೋತ್ರಾ ನಿರ್ಮಾಣದ ಬಹು ನೀರಿಕ್ಷಿತ ಸಿನಿಮಾ ರಾಮಾಯಣ ಈಗ ಬಾಕ್ಸ್​ ಆಫೀಸ್​ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ತೆರೆಕಂಡ ದಿನ ಅತ್ಯಲ್ಪ ಕಲೆಕ್ಷನ್​ ಮಾಡಿದ್ದ ಸಿನಿಮಾ ಆರನೇ ದಿನದ ಕೊನೆಯಲ್ಲಿ ಬರೋಬ್ಬರಿ 800 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿದ್ದು, ಇದರ ಓಟ ಹೀಗೆ ಮುಂದುವರಿದರೆ ಸಾವಿರ ಕೋಟಿ ಕ್ಲಬ್​ ಸೇರಲಿದೆ ಎನ್ನಲಾಗುತ್ತಿದೆ.

ಈ ಸಿನಿಮಾವನ್ನು ಎರಡನೇ ಬಾರಿಗೆ ವೀಕ್ಷಿಸಿರುವ ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ, ರಣಬೀರ್, ಯಶ್​ ಅವರ ಪಾತ್ರವನ್ನು ಹಾಗೂ ನಿರ್ದೇಶಕ ಮತ್ತು ನಿರ್ಮಾಪಕರ ಸಾಹಸವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ನಾನೊಬ್ಬ ನಾಸ್ತಿಕ; ಆದರೆ ನನಗೆ ರಾಮ ಇಷ್ಟ!

ತಾವೊಬ್ಬ ನಾಸ್ತಿಕನೆಂದು ಕರೆದುಕೊಂಡಿರುವ, ಆರ್​ಜಿವಿ, ತಾವು ರಾಮಾಯಣ ಸಿನಿಮಾವನ್ನು ಎರಡನೇ ಬಾರಿಗೆ ವೀಕ್ಷಿಸಿದ್ದು, ನನಗೆ ಈ ಸಿನಿಮಾ ಯಾವ ಹಾಲಿವುಡ್​ ಸಿನಿಮಾಗೆ ಕಡಿಮೆ ಎನ್ನಿಸಲಿಲ್ಲ ಎಂದಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ವರ್ಮಾ, ಈ ಸಿನಿಮಾ ಮೂಲಕ ಬಾಲಿವುಡ್​ ತನ್ನ ನಿದ್ದೆಯಿಂದ ಎಚ್ಚರಗೊಂಡಿದೆ ಎಂದು ಹೇಳಿದ್ದಾರೆ.

ನಾನು ಈ ಸಿನಿಮಾವನ್ನು ರಾಮ ಭಕ್ತನಾಗಿ ಅಲ್ಲ, ಬದಲಾಗಿ ಸಿನಿಮಾ ಪ್ರೇಮಿಯಾಗಿ ವಿಮರ್ಶಿಸಿದ್ದೇನೆಂದು ಬರೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿನ ದೃಶ್ಯ ವೈಭವ, ಪಾತ್ರಗಳ ನಿರ್ವಹಣೆ ತುಂಬಾ ಇಷ್ಟವಾಗಿದ್ದು, ಸಂಗೀತ ವಿಭಾಗ ಇನ್ನಷ್ಟು ಸರಿಯಾಗಿ ಕೆಲಸ ಮಾಡಿದ್ದರೆ, ಪೈಸಾವಸೂಲ್​ ಆಗುತ್ತಿತ್ತು ಎಂದಿದ್ದಾರೆ.

ಯಶ್​ ಶತಮಾನದ ಅಭಿನಯ!

ಇನ್ನು ಈ ಸಿನಿಮಾ ಪ್ರಮುಖ ಪಾತ್ರವಾದ ರಾವಣನ ಪಾತ್ರದಲ್ಲಿ ರಾಕಿಂಗ್​ ಸ್ಟಾರ್​ ಯಶ್​ ಕಾಣಿಸಿಕೊಂಡಿದ್ದು, ಯಶ್​ ಅವರ ರಾವಣ ಇದು ಶತಮಾನಕ್ಕೊಮ್ಮೆ ಕಾಣಿಸುವ ಅಭಿನಯವಾಗಿದೆ. ಯಶ್​ ಈ ಸಿನಿಮಾದಲ್ಲಿ ಕೇವಲ 'ಖಳನಾಯಕ'ನ ಪಾತ್ರವನ್ನು ನಿರ್ವಹಿಸಿಲ್ಲ. ತಪಸ್ಸು, ಬುದ್ಧಿವಂತಿಕೆ ಮತ್ತು ಯಾರ ಮುಂದೆಯೂ ತಲೆಬಾಗದಿರುವ ಛಲದ ಮೂಲಕ ಶಕ್ತಿಯನ್ನು ಗಳಿಸಿಕೊಂಡ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆಂದು ಹೇಳಿದ್ದಾರೆ.

Also Read
ಇಮ್ರಾನ್​ ಆರೋಗ್ಯದಲ್ಲಿ ವ್ಯತ್ಯಯ: ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿ ಮತ್ತೆ ಜೈಲಿಗೆ ಕಳಿಸಿದ್ದೇಕೆ? Imran Khan
Director Ram Gopal Varma watched the movie 'Ramayana' for the second time and heaped praise on Yash's portrayal of Ravana.

ರಾಮನ ಪಾತ್ರವನ್ನು ಅರ್ಥ ಮಾಡಿಕೊಳ್ಳಿ!

ಈ ಸಿನಿಮಾ ಬಿಡುಗಡೆಯಾದಾಗ, ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣಬೀರ್​ ಕಪೂರ್​ ಇನ್ನಷ್ಟು ಉತ್ತಮವಾಗಿ ಅಭಿನಯಿಸಬೇಕಿತ್ತು, ರಣಬೀರ್​ ಈ ಪಾತ್ರಕ್ಕೆ ಸೂಟ್​ ಆಗಲ್ಲ ಎಂದ ಮಾತುಗಳು ಕೇಳಿಬಂದಿದ್ದವು. ಆದರೆ, ಮೊದಲು ನಾವು ರಾಮ ಯಾವ ರೀತಿಯ ವ್ಯಕ್ತಿತ್ವ ಎಂದು ತಿಳಿಯಬೇಕು. ರಾಮ ಪ್ರತಿ ಸನ್ನಿವೇಶಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾನೆ. ಅವನ ಹಾವ-ಭಾವ ಹೇಗಿರುತ್ತದೆ ಎನ್ನುವುದು ಮುಖ್ಯವಲ್ಲ.

ರಾಮ ಏನನನ್ನು ತಡೆಯುತ್ತಾನೆ ಎನ್ನುವುದು ಮುಖ್ಯವಾಗಿದೆ. ಹೀಗಾಗಿ ಎಲ್ಲಾ ಸಮಯದಲ್ಲಿ ರಾಮ ತನ್ನ ಭಾವನೆಗಳನ್ನು ಅಭಿವ್ಯಕ್ತಿ ಪಡಿಸುವಂತಿಲ್ಲ. ವನವಾಸವನ್ನು ಶಾಂತವಾಗಿ ಸ್ವೀಕರಿಸುತ್ತಾನೆ. ಕಾಡಿನಲ್ಲಿನ ಹಿಂಸೆಯನ್ನು ತಡೆಯುತ್ತಾನೆ ಮತ್ತು ತನ್ನ ದೃಢ ನಿಶ್ಚಯವನ್ನು ಪ್ರತಿ ಹಂತದಲ್ಲಿ ಸಾಭೀತು ಪಡಿಸುತ್ತಾನೆ. ಹೀಗಾಗಿ ರಾಮನ ಪಾತ್ರ ಮಾಡುವವನ ಅಭಿನಯ ಅಷ್ಟಾಗಿ ಎದ್ದು ಕಾಣಿಸುವುದಿಲ್ಲ ಎಂದಿದ್ದಾರೆ.

Also Read
ಮಲಗಿದ್ದ ವಿದ್ಯಾರ್ಥಿ ಮೇಲೆಯೇ 'ಧಪ್' ಎಂದು ಬಿದ್ದ ಕಬೋರ್ಡ್: ಕೋಟಾ ಹಾಸ್ಟೆಲ್‌ನ ಬೆಚ್ಚಿಬೀಳಿಸೋ ವಿಡಿಯೋ ವೈರಲ್! Kota Hostel
Director Ram Gopal Varma watched the movie 'Ramayana' for the second time and heaped praise on Yash's portrayal of Ravana.

ರಾಮಾಯಣ 1 ಅನ್ನು ಈ ಸಿನಿಮಾ ಮೀರಿಸುತ್ತದೆ!

ಇನ್ನು ರಾಮಾಯಣ ಭಾಗ 1 ಅನ್ನು ಹೊಗಳಿರುವ ಆರ್​ಜಿವಿ, ಸದ್ಯ ಈ ಸಿನಿಮಾ ನಕಾರಾತ್ಮಕ ವಿಮರ್ಶೆ ನಡುವೆ ಇಷ್ಟೊಂದು ಕೆಲೆಕ್ಷನ್​ ಹಾಗೂ ಯಶಸ್ಸನ್ನು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಹೊಸ-ಹೊಸ ದಾಖಲೆಗಳನ್ನು ಸೃಷ್ಟಿಸಲಿದ್ದು, ಇದರ ದಾಖಲೆಗಳನ್ನು 2028 ರ ದೀಪಾವಳಿಗೆ ತೆರೆಕಾಣಲಿರುವ ರಾಮಾಯಣ ಭಾಗ 2 ಸಿನಿಮಾ ಮುರಿಯಲಿದೆ ಎಂದಿದ್ದಾರೆ, (ಏಜೆನ್ಸೀಸ್​).