ಇಮ್ರಾನ್​ ಆರೋಗ್ಯದಲ್ಲಿ ವ್ಯತ್ಯಯ: ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿ ಮತ್ತೆ ಜೈಲಿಗೆ ಕಳಿಸಿದ್ದೇಕೆ? Imran Khan

Former Pakistani Prime Minister Imran Khan, who fell ill due to an elevated heart rate, was taken to the hospital for treatment and subsequently brought back to jail.
ಹೃದಯಬಡಿತ ಹೆಚ್ಚಾಗಿ ಅಸ್ವಸ್ಥಗೊಂಡ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಮತ್ತೆ ಜೈಲಿಗೆ ಕರೆತರಲಾಯಿತು.
Published on: 

ಇಸ್ಲಾಮಾಬಾದ್​: ಅಧಿಕಾರದಿಂದ ಕೆಳಗಿಳಿದ ದಿನದಿಂದ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ರಾವಲ್​ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಜೈಲಿನಲ್ಲಿ ಮಿತಿ ಮೀರಿದ ಟಾರ್ಚ್​ರ್​ನಿಂದ ಇಮ್ರಾನ್​ ಅವರ ಆರೋಗ್ಯದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಆದರೆ ಪಾಕ್​ ಸರ್ಕಾರ ಯಾವುದೇ ವೈದ್ಯಕೀಯ ನೆರವನ್ನು ನೀಡುತ್ತಿಲ್ಲವೆಂದು ಇಮ್ರಾನ್ ಕುಟುಂಬವರ್ಗ ಆರೋಪಿಸಿತ್ತು.

ಈದೀಗ, ಇಮ್ರಾನ್​ ಖಾನ್​ ಆರೋಗ್ಯದಲ್ಲಿ ಮತ್ತೊಮ್ಮೆ ಏರುಪೇರು ಕಂಡುಬಂದಿದ್ದು, ಅಡಿಯಾಲಾ ಜೈಲಿನಿಂದ ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​ಗೆ ದಾಖಲಿಸಿ, ಮತ್ತೆ ಜೈಲಿಗೆ ರವಾನಿಸಿದ್ದಾಗಿ ತಿಳಿದುಬಂದಿದೆ.

ಒಮ್ಮೆಲೇ ಹೆಚ್ಚಾದ ಹೃದಯಬಡಿತ!

ಜಾಗತಿಕ ಮಾಧ್ಯಮಗಳು ವರದಿ ಮಾಡಿರುವಂತೆ, 74 ವರ್ಷದ ಇಮ್ರಾನ್​ ಖಾನ್​ ಈಗಾಗಲೇ ನಾನಾ ರೀತಿಯ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಅಂತಯೇ, ಅವರ ಬಲಗಣ್ಣಿನಲ್ಲಿ ದೃಷ್ಟಿದೋಷ ಕೂಡ ಕಂಡುಬಂದಿದೆ. ಇದರ ನಡುವೆ ಒಮ್ಮೆಲೇ ಹೃದಯಬಡಿತದಲ್ಲಿ ಏರುಪೇರು ಕಂಡುಬಂದಿದೆ. ತಡಮಾಡದ ಜೈಲು ಸಿಬ್ಬಂದಿ, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಿ, ಹಾಗೆಯೇ ಅವರ ಕಣ್ಣನ್ನು ಕೂಡ ತಪಾಸಣೆ ಮಾಡಿ, ನಂತರ ಮತ್ತೆ ಅಡಿಯಾಲಾ ಜೈಲಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.

ಸುಳ್ಳು ಸುದ್ದಿಗಳನ್ನು ನಂಬಬೇಡಿ!

ಇಮ್ರಾನ್​ ಖಾನ್​ ಹಲವು ಅಪರಾಧಗಳನ್ನು ಮಾಡಿ, ಶಿಕ್ಷೆ ಅನುಭವಿಸುತ್ತಿದ್ದಾರೆ. ಹೀಗಾಗಿ ಅವರನ್ನು ಒಬ್ಬ ಮಾಜಿ ಪ್ರಧಾನಿ ಎನ್ನುವುದಕ್ಕಿಂತ, ಒಬ್ಬ ಖೈದಿ ಎಂಬಂತೆ ನೋಡುತ್ತಿದ್ದು, ಅವರಿಗೆ ಯಾವುದೇ ವಿಶೇಷ ಸವಲತ್ತನ್ನು ನೀಡುತ್ತಿಲ್ಲ. ಆದರೆ, ಮೂಲಭೂತ ಹಕ್ಕನ್ನು ನೀಡಿದ್ದೇವೆ. ಯಾರೂ ಇಮ್ರಾನ್​ ಖಾನ್​ ಕುರಿತಂತೆ ಹರಿದಾಡುವ ವದಂತಿಗಳನ್ನು ನಂಬಬೇಡಿ ಎಂದು ಕಾರಾಗೃಹ ಸಿಬ್ಬಂದಿ ಕೇಳಿಕೊಂಡಿದ್ದಾರೆ.

ಕೆಲ ತಿಂಗಳುಗಳ ಹಿಂದೆ, ಇಮ್ರಾನ್​ ಖಾನ್​ ಯಾರನ್ನೂ ಬೇಟಿ ಮಾಡುತ್ತಿಲ್ಲ. ಹೊರಗಿನ ಜನಕ್ಕೆ, ಅವರ ಕುಟುಂಬ ವರ್ಗಕ್ಕೂ ಬೇಟಿಗೆ ಅವಕಾಶ ಕೊಡುತ್ತಿಲ್ಲ. ಬಹುಷಃ ಇಮ್ರಾನ್​ ಖಾನ್​ ಜೈಲಿನಲ್ಲಿಯೇ ಸಾವನ್ನಪ್ಪಿದ್ದು, ಪಾಕ್​ ಸರ್ಕಾರ ಇದನ್ನು ಮುಚ್ಚಿಟ್ಟಿದೆ ಎಂಬ ವದಂತಿ ಹರಿದಾಡಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.

Also Read
ಮಲಗಿದ್ದ ವಿದ್ಯಾರ್ಥಿ ಮೇಲೆಯೇ 'ಧಪ್' ಎಂದು ಬಿದ್ದ ಕಬೋರ್ಡ್: ಕೋಟಾ ಹಾಸ್ಟೆಲ್‌ನ ಬೆಚ್ಚಿಬೀಳಿಸೋ ವಿಡಿಯೋ ವೈರಲ್! Kota Hostel
Former Pakistani Prime Minister Imran Khan, who fell ill due to an elevated heart rate, was taken to the hospital for treatment and subsequently brought back to jail.

ಜೈಲಿನಲ್ಲಿ ಸಾವಿರ ದಿನ ಕಳೆದ ಇಮ್ರಾನ್​!

2018 ರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದ ಇಮ್ರಾನ್ ಖಾನ್, ನಾಲ್ಕು ವರ್ಷಗಳ ಬಳಿಕ ಸಂಸತ್ತಿನಲ್ಲಿ ನಡೆದ ಅವಿಶ್ವಾಸ ಮತದಲ್ಲಿ ಅಧಿಕಾರ ಕಳೆದುಕೊಂಡರು. ಅಂದಿನಿಂದ ಪಾಕ್ ಮಿಲಿಟರಿ ಸ್ಥಾಪನೆ ಹಾಗೂ ಅವರ ಪಿಟಿಐ ಪಕ್ಷದ ನಡುವೆ ನಿರಂತರ ರಾಜಕೀಯ ಸಂಘರ್ಷ ನಡೆಯುತ್ತಲೇ ಇದೆ.

ಮೇ 2023ರಲ್ಲಿ ಮೊದಲಿಗೆ ಬಂಧನಕ್ಕೊಳಗಾಗಿದ್ದ ಇಮ್ರಾನ್ ಖಾನ್ ಮೇಲೆ ತೋಷಖಾನಾ (ಉಡುಗೊರೆಗಳ ಅಕ್ರಮ ಮಾರಾಟ) ಸೇರಿದಂತೆ ಹಲವಾರು ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಎಲ್ಲಾ ಪ್ರಕರಣಗಳು ಕೇವಲ ರಾಜಕೀಯ ಪ್ರೇರಿತವಾಗಿವೆ ಎಂದು ಪಿಟಿಐ ಪಕ್ಷ ಮತ್ತು ಇಮ್ರಾನ್ ಖಾನ್ ಬೆಂಬಲಿಗರು ಆರೋಪಿಸುತ್ತಾ ಬಂದಿದ್ದಾರೆ.

ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಇಮ್ರಾನ್ ಖಾನ್ ಅವರ ಆರೋಗ್ಯ ಚೇತರಿಕೆ ಮತ್ತು ಮುಂದಿನ ರಾಜಕೀಯ ನಡೆ ಹೇಗಿರಲಿದೆ ಎಂಬುದು ಪಾಕಿಸ್ತಾನದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ, (ಏಜೆನ್ಸೀಸ್).