ಪ್ರತಿಭಾನ್ವಿತರಿಗೆ ಪ್ರೋತ್ಸಾಹ, ಪುರಸ್ಕಾರ / DEVANAHALLI

ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ, ಇಒ ಮುನಿರಾಜು, ರಾಜ್ಯಸಮಿತಿ ಸದಸ್ಯ ನಾರಾಯಣಗೌಡ, ಉಪಾಧ್ಯಕ್ಷ ಆದರ್ಶ, ಗುರುರಾಜ ಹೊಸಕೋಟೆ ಇದ್ದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ, ಇಒ ಮುನಿರಾಜು, ರಾಜ್ಯಸಮಿತಿ ಸದಸ್ಯ ನಾರಾಯಣಗೌಡ, ಉಪಾಧ್ಯಕ್ಷ ಆದರ್ಶ, ಗುರುರಾಜ ಹೊಸಕೋಟೆ ಇದ್ದರು.
Published on
ದೇವನಹಳ್ಳಿ: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗ್ರಾಮಾಂತರ ಜಿಲ್ಲೆ ಶೇ.99.39 ಫಲಿತಾಂಶ ಪಡೆದಿದ್ದು, ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಜಿಲ್ಲಾ ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯತ್​, ರಾಜ್ಯ ಪ್ರಾಧ್ಯಾಪಕರ ಸಂಘ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಚಟುವಟಿಕೆ ಪುಸ್ತಕ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಾದ್ಯಂತ 3,091 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಪರೆದಿದ್ದು, ಅದರಲ್ಲಿ 3,072 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.99.39 ಪಲಿತಾಂಶ ಬಂದಿದೆ. ಗಿರೀಷ ಎಂಬ ವಿದ್ಯಾರ್ಥಿನಿ 625ಕ್ಕೆ 620, ಸಾನಿಯಾ 618 ಅಂಕ ಪಡೆದಿದ್ದಾರೆ. ರಜಾ ದಿನಗಳಲ್ಲೂ ವಿಶೇಷ ತರಗತಿಗಳನ್ನು ತೆಗೆದುಕೊಂಡು ತರಬೇತಿ ನೀಡಿರುವುದೇ ಹೆಚ್ಚು ಲಿತಾಂಶ ಬರಲು ಕಾರಣ ಎಂದರು. ಶೈಕ್ಷಣಿಕ ಚಟುವಟಿಕೆ ಪುಸ್ತಕ ಮುದ್ರಣಕ್ಕೆ ಸಮಾಜ ಸೇವಕರು ಹಾಗೂ ದಾನಿಗಳು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಸಮಾಜ ಸೇವಕ ಜುಟ್ಟನಹಳ್ಳಿ ಚೇತನ್​ಗೌಡ ಮಾತನಾಡಿ, ಪ್ರತಿಭಾ ಪುರಸ್ಕಾರ ಸ್ವೀಕರಿಸಲು ಬಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಅವರನ್ನು ಕರೆತಂದಿರುವ ಶಿಕ್ಷಕರು ಹಾಗೂ ಪಾಲಕರು ಅಭಿನಂದನಾರ್ಹರು. ಜಿಲ್ಲೆ ಹಾಗೂ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರಲು ಕಾರಣಗಳನ್ನು ಶಿಕ್ಷಣ ಇಲಾಖೆ ತಿಳಿಸಿದ್ದು, ಮಕ್ಕಳು ಮುಂದೆ ಉನ್ನತ ವ್ಯಾಸಂಗ ಮಾಡಲು ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುವ ಉತ್ತಮ ಶಿಕ್ಷಣವೇ ಆಧಾರ. ಸಮಾಜಕ್ಕೆ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಶಿಕ್ಷಕರಿಗೆ ಗೌರವ ನೀಡಬೇಕು ಎಂದರು.
ಖ್ಯಾತ ಜಾನಪದ ಗಾಯಕ ಗುರುರಾಜ್​ ಹೊಸಕೋಟೆ ಅವರು ಜಾನಪದ ಗೀತೆಗಳನ್ನು ಹಾಡಿ, ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ರಂಜಿಸಿದರು. ನೂರರಷ್ಟು ಫಲಿತಾಂಶ ಸಾಧಿಸಿದ ಶಾಲೆಗಳ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು. ಅಕ್ಷರ ದಾಸೋಹದ ಸುಧಾ, ಮುನೇಗೌಡ, ಕೊಟ್ರೆಶ್​, ಪ್ರಭಾಕರ್​, ತಾಲೂಕು ಶಿಕ್ಷಕರ ಸಂಘದ ಯತೀಶ್​, ಪ್ರ.ಕಾರ್ಯದರ್ಶಿ ಮಂಜುನಾಥ್​, ಮುನಿರಾಜು, ಶ್ರೀನಿವಾಸ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net